ಫಿಶ್ಮಿಲ್ ಅಕ್ರಮ: ದೂರು ಅರ್ಜಿ
Team Udayavani, Jul 11, 2017, 1:45 AM IST
ಉಡುಪಿ: ಕಾನೂನು ಉಲ್ಲಂಘಿಸಿ ಉದ್ಯಾವರದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಮೂರು ಫಿಶ್ಮಿಲ್ಗಳನ್ನು ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಸಾರ್ವಜನಿಕರು ದೂರು ಅರ್ಜಿ ಸಲ್ಲಿಸಿದ್ದಾರೆ. ಸಲ್ಲಿಕೆ ಮಾಡಿರುವ ದೂರು ಅರ್ಜಿಯನ್ನು ಉದ್ಯಾವರ ಗ್ರಾ.ಪಂ.ಗೂ ಸಲ್ಲಿಸಲಾಯಿತು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಜ್ ಪಳ್ಳಿ, ಪಿಡಿಒ ರಮಾನಂದ ಪುರಾಣಿಕ್ ಅವರು ಉಪಸ್ಥಿತರಿದ್ದರು. ಫಿಶ್ಮಿಲ್ನವರು ಸಿಆರ್ಝೆಡ್ ನಿಯಮವನ್ನೂ ಉಲ್ಲಂಘಿಸಿದ್ದಾರೆ. ನದಿ ಪಾತ್ರವನ್ನು ಮಣ್ಣು ಹಾಕಿ ಮುಚ್ಚಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಇನ್ನಿತರ ಎಲ್ಲ ವಿಚಾರಗಳು ಪಂಚಾಯತ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ನ್ಯಾಯಾಲಯದಲ್ಲಿ ವಾದ ಮಂಡಿಸಲಾಗುವುದು ಎಂದು ಪಿಡಿಒ ಅವರು ಸಾರ್ವಜನಿಕರಿಗೆ ಭರವಸೆ ಇತ್ತರು.
ದೂರು ಅರ್ಜಿ ನೀಡುವ ವೇಳೆಯಲ್ಲಿ ಗ್ರಾ.ಪಂ. ಸದಸ್ಯ ದಿವಾಕರ ಬೊಳೆj, ಮಾಜಿ ಸದಸ್ಯ ಪುಷ್ಪರಾಜ್ ಆರ್. ಕೋಟ್ಯಾನ್, ಉಮೇಶ್ ಕರ್ಕೇರ, ಸ್ಥಳೀಯರಾದ ವಿಜಯ ಕರ್ಕೇರ, ಉಮಾನಾಥ ಕರ್ಕೇರ, ಗಣೇಶ ಸುವರ್ಣ, ಅಣ್ಣಯ್ಯ ಪೂಜಾರಿ, ಉದಯ ಕುಂದರ್, ಕಿಶೋರ್ ಮೈಂದನ್, ಸುರೇಶ್ ಕುಂದರ್, ಹರಿಶ್ಚಂದ್ರ ಪುತ್ರನ್, ಹರೀಶ್ ಅಮೀನ್, ನಾರಾಯಣ ಪಿತ್ರೋಡಿ, ಪ್ರತಾಪ್ ಕುಮಾರ್, ಗಂಗಾಧರ ಬಂಗೇರ, ರತ್ನಾಕರ ಎಸ್. ಮೆಂಡನ್ ಅವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.