ಅಧಿಕಾರಿಗಳಿಗೆ ತಡವಾಗುತ್ತದೆ ಎಂದ ಪಿಡಿಒ; ಗ್ರಾಮಸ್ಥರ ಆಕ್ಷೇಪ
Team Udayavani, Jul 11, 2017, 3:25 AM IST
ಬಂಟ್ವಾಳ : “ಗ್ರಾಮದ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿ ಮಾಹಿತಿ ನೀಡಿ. ಸಮಸ್ಯೆ ಬಗೆಹರಿಯದೆ ಗ್ರಾಮ ಸಭೆಯಿಂದ ಅಧಿಕಾರಿಗಳು ತೆರಳಬಾರದು’ ಇದು ಪಜೀರು ಗ್ರಾಮಸ್ಥರು ಅಧಿಕಾರಿಗಳನ್ನು ಎಚ್ಚರಿಸಿದ ಪರಿ.
ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆದ 2017-18ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಸಭೆ ಪ್ರಾರಂಭವಾಗುತ್ತಿದ್ದಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ “ಅಧಿಕಾರಿಗಳಿಗೆ ತಡವಾಗುತ್ತದೆ’ ಎಂದ ಕಾರಣಕ್ಕೆ ಕೆಲವು ಕಾಲ ಸಭೆಯಲ್ಲಿ ಗೊಂದಲವುಂಟಾಯಿತು.
ಹಿಂದಿನ ನಡಾವಳಿ ಹಾಗೂ ಖರ್ಚು ವೆಚ್ಚದ ಬಗ್ಗೆ ಮಾಹಿತಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಮತಿ ಅವರು ಗ್ರಾಮಸ್ಥರ ಮುಂದಿಟ್ಟರು. ಸಾಮಾನ್ಯವಾಗಿ, ನಡಾವಳಿ ಹಾಗೂ ಲೆಕ್ಕಪತ್ರ ವರದಿ ಓದಿದ ಬಳಿಕ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡುವುದು, ಯಾವೆಲ್ಲ ಇಲಾಖೆಯ ಅಧಿಕಾರಿಗಳು ಹಾಜರಿದ್ದಾರೆ ಎಂದು ಮಾಹಿತಿ ನೀಡುವುದು ಸಭೆ ವಾಡಿಕೆ. ಆದರೆ ಇಲ್ಲಿ ಅದ್ಯಾವುದನ್ನೂ ಯಾರೂ ಹೇಳಲಿಲ್ಲ; ಗ್ರಾಮಸ್ಥರು ಕೇಳುವ ಗೋಜಿಗೂ ಹೋಗಲಿಲ್ಲ. ಅದರ ಬದಲು ತಮ್ಮ ವಾರ್ಡಿನ ಸಮಸ್ಯೆಗಳ ಬಗ್ಗೆ ಹೇಳಲು ಆರಂಭಿಸಿದರು.
ಈ ಸಂದರ್ಭ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, “ಅಧಿಕಾರಿಗಳು ಮೊದಲು ಮಾಹಿತಿ ನೀಡಲಿ, ಬಳಿಕ ನಿಮ್ಮ ಸಮಸ್ಯೆ ಹೇಳಿ. ಅವರು ಇತರ ಸಭೆಗಳಲ್ಲಿ ಬೆಳಗ್ಗೆಯಿಂದಲೇ ಭಾಗವಹಿಸಿ ಇಲ್ಲಿಗೆ ಬಂದಿದ್ದು ಊಟವನ್ನೂ ಮಾಡಿಲ್ಲ. ಅವರು ತುರ್ತಾಗಿ ಹೋಗಬೇಕು’ ಎಂದು ಹೇಳಿದಾಗ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.ಬಳಿಕ ಅವರು ತಮ್ಮ ಸಮಸ್ಯೆಗಳನ್ನು ಹೇಳಿ, ಅಧಿಕಾರಿಗಳು ಮಾಹಿತಿ ನೀಡಿದರು.
ಸ್ವ ಹಿತಾಸಕ್ತಿ ಕಾಮಗಾರಿ
ಅರ್ಕಾಣ ವಾರ್ಡ್‌ನಲ್ಲಿ ಸ್ವ ಹಿತಾಸಕ್ತಿಯಿಂದ ಕಾಮಗಾರಿ ನಡೆಯುತ್ತಿದೆ. ಒಂದು ಮನೆಗೆ ಬೇಕಾಗಿ ಮೋರಿ ಹಾಕುವ ಕಾರ್ಯ ನಡೆಯುತ್ತಿದ್ದು, ಇತರ ಕಾಮಗಾರಿಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದಾಗ, ಮಾಜಿ ಅಧ್ಯಕ್ಷ ನಝೀರ್ ಮೊಯ್ದಿನ್ ಮಾತನಾಡಿ, “ಅರ್ಕಾಣ ವಾರ್ಡ್‌ನಲ್ಲಿ ಸಾಕಷ್ಟು ಕಾಮಗಾರಿ ಆಗಿದ್ದು, ಈ ಭಾಗದಲ್ಲಿ 2.60 ಕೋ.ರೂ. ವೆಚ್ಚದ ರಸ್ತೆಯೂ ಸರಕಾರದಿಂದ ಆಗಿದೆ’ ಎಂದರು.
ಬೀದಿದೀಪ ಹಾಳಾಗಿದೆ
ಸಾಂಬಾರ್‌ತೋಟದಲ್ಲಿ ಅಂಗನವಾಡಿಗೆ ನೀರು ನುಗ್ಗುತ್ತಿದ್ದರೂ ನಿರ್ಲಕ್ಷ್ಯ ತಾಳಲಾಗಿದೆ. ಬೀದಿದೀಪ ಹಾಕಿದ ದಿನವೇ ಹಾಳಾಗುತ್ತಿದ್ದು, ಕೇಳುವವರೇ ಇಲ್ಲ’ ಎಂದಾಗ ಮಾಜಿ ಅಧ್ಯಕ್ಷ ಭರತ್‌ರಾಜ್ ಶೆಟ್ಟಿ ಪ್ರತ್ಯುತ್ತರ ನೀಡಿ, “ಬೀದಿದೀಪ ದಿನವಿಡೀ ಉರಿಯುತ್ತಿದ್ದರೂ ಸ್ಥಳೀಯರಾಗಲಿ, ದಾರಿಹೋಕರಾಗಲೀ ಅದನ್ನು ಆರಿಸುವ ಕೆಲಸ ಮಾಡದ ಕಾರಣ ನಿರಂತರ ಹಾಳಾ ಗುತ್ತಿದೆ’ ಎಂದರು.
ಜನಸ್ನೇಹಿ ಪೊಲೀಸ್
ಜನಸ್ನೇಹಿ ಪೊಲೀಸ್ ವ್ಯವಸ್ಥೆಯಡಿ ಗ್ರಾಮದಲ್ಲಿ ಜನಸಂಪರ್ಕ ಇರುವ ಹಾಗೂ ಜನಪ್ರತಿನಿಧಿಗಳ ತಂಡ ಆಯ್ಕೆ ಮಾಡಲಾಗುವುದು, ಗ್ರಾಮದಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆ ನಡೆದಲ್ಲಿ ಯಾವುದೇ ಸಂದರ್ಭದಲ್ಲೂ ಕರೆ ಮಾಡಿದರೆ ನಾವು ಸ್ಥಳಕ್ಕೆ ತಲುಪುತ್ತೇವೆ; ನಿಮ್ಮ ಸೇವೆಗಾಗಿಯೇ ನಾವಿದ್ದೇವೆ ಎಂದು ಗ್ರಾಮಕ್ಕೆ ನಿಯೋಜನೆಗೊಂಡಿರುವ ಕೊಣಾಜೆ ಪೊಲೀಸರಾದ ಪುನೀತ್ ಮತ್ತು ಸುಖಲತಾ ತಿಳಿಸಿದರು.
ನೋಡಲ್ ಅಧಿಕಾರಿಯಾಗಿ ಪಶು ವೈದ್ಯಾಧಿಕಾರಿ ಪ್ರಕಾಶ್ ಭಾಗವಹಿಸಿದ್ದರು. ತಾ.ಪಂ. ಸದಸ್ಯ ನವೀನ್ ಪಾದಲ್ಪಾಡಿ, ಪಂಚಾಯತ್ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
“ಮಕ್ಕಳಿಗೆ ಹೊಡೆಯುತ್ತಾರೆ’
ಅಂಗನವಾಡಿ ಕಾರ್ಯಕರ್ತೆ ಮಕ್ಕಳಿಗೆ ಹೊಡೆಯುತ್ತಾರೆ ಎನ್ನುವ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸಿಂಧೂ, “ಅಂತಹ ಪ್ರಕರಣ ಇದ್ದಲ್ಲಿ ಲಿಖೀತ ದೂರು ನೀಡಿ, ಸಿಡಿಪಿಒಗೆ ಕಳುಹಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.