ಗಡಿಪ್ಪಿಲ: ರಸ್ತೆಯಲ್ಲಿ ಹೊಂಡಗಳ ಚಿತ್ತಾರ
Team Udayavani, Jul 11, 2017, 2:45 AM IST
ಸವಣೂರು: ಭಕ್ತಕೋಡಿ- ನರಿಮೊಗರು ಮುಖ್ಯರಸ್ತೆಯ ನಡುವೆ ಗಡಿಪ್ಪಿಲ ಎಂಬಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಯನ್ನು ತಗ್ಗಿಸಲು ಮಾಡಿದ ಕಾಮಗಾರಿಯಿಂದ ಇಡೀ ರಸ್ತೆಯೇ ಹಾಳಾಗಿದೆ.
ಗಡಿಪ್ಪಿಲ ಸಮೀಪ ರಸ್ತೆಯು ಸ್ವಲ್ಪ ಎತ್ತರವಾಗಿತ್ತು. ಬಳಿಕ ಇದನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ರಸ್ತೆಯನ್ನು ತಗ್ಗಿಸಿದರು. ಆದರೆ ರಸ್ತೆಯನ್ನು ಅಗೆದು ಮರುಡಾಮರೀಕರಣ ನಡೆಸಿದ ಕೆಲವೇ ದಿನದಲ್ಲಿ ಮಳೆ ಬಂದ ಕಾರಣ ರಸ್ತೆಯೂ ಸಂಪೂರ್ಣವಾಗಿ ಹದೆಗೆಡುವಂತಾಯಿತು.
ಚಾಲಕರ ಹಿಡಿಶಾಪ
ಉತ್ತಮವಾಗಿದ್ದ ರಸ್ತೆಯನ್ನು ತಗ್ಗಿಸಲು ಹೋಗಿ ಸಂಪೂರ್ಣವಾಗಿ ಹಾಳುಮಾಡಲಾಗಿದೆ. ಈ ರಸ್ತೆಯಲ್ಲಿ ಚಲಿಸುವುದೇ ಕಷ್ಟಕರ. ಸುಮ್ಮನೆ ರಸ್ತೆಯನ್ನು ಹಾಳು ಮಾಡಿದರು ಎಂದು ಚಾಲಕರು ಇಲಾಖೆಯನ್ನು ದೂರುತ್ತಿದ್ದಾರೆ.
ತಾತ್ಕಾಲಿಕ ಸಮಸ್ಯೆ ಪರಿಹರಿಸಿ
ಹೇಗೂ ರಸ್ತೆಯನ್ನು ಹಾಳು ಮಾಡಲಾಗಿದೆ. ತಾತ್ಕಾಲಿಕವಾಗಿಯಾದರೂ ರಸ್ತೆಯ ಹೊಂಡವನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.