ಸುಳ್ಯ ತಾ.ಪಂ. ಸಾಮಾನ್ಯ ಸಭೆ : ರಸ್ತೆ ಅತಿಕ್ರಮಣ :ವರದಿಗೆ ನಿರ್ಧಾರ


Team Udayavani, Jul 11, 2017, 2:20 AM IST

1007BK1a.jpg

ಸುಳ್ಯ : ತಾಲೂಕಿನಲ್ಲಿರುವ ಜಿ.ಪಂ. ಹಾಗೂ ಲೋಕೋಪಯೋಗಿ ಇಲಾಖೆ ರಸ್ತೆಗಳ ಅತಿಕ್ರಮಣ ತಡೆೆ, ಕೃಷಿ ಇಲಾಖೆ ಸಹಾಯಧನವೂ ಸೇರಿದಂತೆ ಪ್ರಮುಖವಿಷಯಗಳ ಕುರಿತು ತಾಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆಯಿತು.

ತಾಲೂಕು ಪಂಚಾಯತ್‌  ಸಭಾಂಗಣದಲ್ಲಿ ಸೋಮ ವಾರ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ಸಭೆ ಜರಗಿತು. ರಸ್ತೆ ಅತಿಕ್ರಮಣ ಮತ್ತು ರಸ್ತೆಯಂಚಿನಲ್ಲಿರುವ ಕಟ್ಟಡಗಳ ತೆರವಿಗೆ ಹಿಂದಿನ ಸಭೆ ಕೈಗೊಂಡ ನಿರ್ಣಯದ ಕುರಿತಾಗಿ ಅಜ್ಜಾವರದ ರಸ್ತೆ ಬದಿಯ ಕಟ್ಟಡವನ್ನು ಪ್ರಸ್ತಾಪಿಸಿ ಜಿ.ಪಂ.ಇಂಜಿನಿಯರ್‌ ಪ್ರೀತಿ ಅವರಲ್ಲಿ ಮಾಹಿತಿ ಬಯಸಿದರು. ಈ ಬಗ್ಗೆ ಅಧಿಕಾರಿಯವರು, ಎಲ್ಲಾ ಪಂಚಾಯತ್‌ಗಳಿಗೂ ನೊಟೀಸ್‌ ಕಳುಹಿಸಲಾಗಿದೆ ಎಂದು ಚುಟುಕಾಗಿ ಉತ್ತರಿಸಿದರು. ಇದರಿಂದ ಸದಸ್ಯರು ಸಮಾಧಾನವಾಗಲಿಲ್ಲ.

ತಾಲೂಕು ಕಾರ್ಯನಿರ್ವಹಣಾ ಧಿಕಾರಿ ಮಧುಕುಮಾರ್‌ ಅವರು, ರಸ್ತೆಯಂಚಿನಲ್ಲಿ ಕಟ್ಟಡಗಳು ನಿರ್ಮಾಣವಾಗುವಾಗ ತಡೆಯಲು ಅಥವಾ ಪೂರ್ತಿ ಕೆಡವಲು ನಿಮ್ಮ ಇಲಾಖೆಯಿಂದ ಯಾವ್ಯಾವ ಕ್ರಮ ಕೈಗೊಳ್ಳಬಹುದು ಹಾಗೂ ನೊಟೀಸ್‌ ಕೊಡುವ ಮತ್ತು ಕೆಡವುವ ಅಧಿಕಾರ ಗ್ರಾ.ಪಂ. ಅಥವಾ ಜಿ.ಪಂ.ಗೆ ಇದೆಯೇ ಎಂದು ಪ್ರಶ್ನಿಸಿದರು. ಆದರೆ ಇದಕ್ಕೆ ಎಂಜಿನಿಯರ್‌ ರಿಂದ ಸೂಕ್ತ ಉತ್ತರ ಸಿಗಲಿಲ್ಲ. ಈ ಬಗ್ಗೆ ಮತ್ತೂಮ್ಮೆ ನಿರ್ಣಯ ಕೈಗೊಳ್ಳುವಂತೆ ಅಧ್ಯಕ್ಷರ ಸಹಿತ ಕೆಲವು ಸದಸ್ಯರು ಸಲಹೆ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಆಕ್ರೋಶ
 ಈ ಸಂದರ್ಭ ಸ್ವಲ್ಪ ಗರಂ ಆದ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿ.ಪಂ., ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳ ಸಹಿತ ತರಾಟೆಗೆ ತೆಗೆದುಕೊಂಡರು. 

ಇಲ್ಲಿ ಪ್ರತೀ ಬಾರಿ ಆಗುವ ನಿರ್ಣಯಗಳಿಗೆ ಬೆಲೆ ಇಲ್ಲ. ಸಭೆ ಕೇವಲ ಕಾಲಹರಣವಷ್ಟೇ. ಇದೇ ಕಾರಣಕ್ಕೆ ಸಭೆಯಲ್ಲಿ ಮಾತ ನಾಡುವುದಿಲ್ಲವೆಂದಿದ್ದರೂ ಮಾತ ನಾಡ ಬೇಕಾದ ಒತ್ತಡವುಂಟಾಗಿದೆ. ಆಯಾಯ ಅಧಿಕಾರಿಗಳಿಗೆ ತಮ್ಮ ಕಾರ್ಯ ವ್ಯಾಪ್ತಿಯ ಬಗ್ಗೆ ಅರಿ ವಿರ ಬೇಕು. ನಿಮ್ಮ ವ್ಯಾಪ್ತಿಗೊಳಪಟ್ಟ ರಸ್ತೆಗಳ ಬಗ್ಗೆ ಗಮನಿಸುವುದಿಲ್ಲ. 

ಈ ಬಗ್ಗೆ ಅಧ್ಯಕ್ಷರೂ ಸ‌ಮರ್ಥವಾಗಿ ಮಾತನಾಡುವ ಅಗತ್ಯ ವಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇಚ್ಛಾಶಕ್ತಿಯನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಪಂಚಾಯತ್‌ ಸದಸ್ಯ ಹರೀಶ್‌ ಕಂಜಿಪಿಲಿ, ಅಧಿಕಾರಿಗಳು ಮಾತ್ರವಲ್ಲ. ಜನ ಪ್ರತಿನಿಧಿಗಳಿಂದಲೂ ಲೋಪವುಂಟಾ ಗುತ್ತಿದೆ. ಹಲವು ಬಾರಿ ರಸ್ತೆಯಂಚಿನಲ್ಲಿ ಕಟ್ಟಡಕ್ಕೆ ಅನುಮತಿ ಪಡೆಯಲು ನಮ್ಮ ಮೇಲೂ ಸಾಕಷ್ಟು ಒತ್ತಡ ಬರುತ್ತಿದೆ. ನ್ಯಾಯಾಲಯದ ತೀರ್ಪನ್ನೂ ಉಲ್ಲಂ ಸುವ ಪ್ರಕರಣ ಗಳಾಗುತ್ತವೆ ಎಂದರು.

ಅಂತಿಮವಾಗಿ ಕಾರ್ಯನಿರ್ವಹಣಾ ಧಿಕಾರಿಯವರು, ಈ ಬಗ್ಗೆ ಪ್ರತೀ ಪಂಚಾಯತ್‌ನಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ವರದಿ ತರಿಸಿಕೊಳ್ಳುವಂತೆ ನೀಡಿದ ಸಲಹೆಗೆ ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು.

ಸಹಾಯಧನ -ಅಕ್ರಮ ಶಂಕೆ
ಸದಸ್ಯ ಅಬ್ದುಲ್‌ ಗಫ‌ೂರ್‌ ಅವರು, ಪರಿಶಿಷ್ಠ ಜಾತಿಯ ರೈತಸದಸ್ಯರೋರ್ವರು ಇಲಾಖೆಯಿಂದ ಪಡೆದ ಕೃಷಿಯಂತ್ರೋಪಕರಣ ಖರೀದಿ ವೇಳೆ ಬಿಲ್‌ ನೀಡದ ಬಗ್ಗೆ ಪ್ರಸ್ತಾಪಿಸಿ ದೊಡ್ಡ ಅಕ್ರಮದ ಶಂಕೆ ವ್ಯಕ್ತಪಡಿಸಿದರು. ಈ ಬಗ್ಗೆಯೂ ವ್ಯಾಪಕ ಚರ್ಚೆ ನಡೆಯಿತು. ಇಲಾಖೆಯಲ್ಲಿ ರೈತರಿಗೆ ಶೇ.90 ರಷ್ಟು ಸಹಾಯಧನದಡಿ ನೀಡಬೇಕಿದ್ದರೂ ಅದರಂತೆ ಕೊಟ್ಟಿಲ್ಲ. ಮಾರುಕಟ್ಟೆಯಲ್ಲಿ ಅದಕ್ಕಿಂತ ಕಡಿಮೆ ದರದಲ್ಲಿ ಲಭ್ಯವಿದೆ. ಇದರಿಂದ ರೈತ ಸದಸ್ಯರಿಗೆ ಅನ್ಯಾಯವಾಗಿದೆ ಎಂದು ಹೇಳಿದ ಅಬ್ದುಲ್‌ ಗಫ‌ೂರ್‌, ಖರೀದಿ ವೇಳೆ ಬಿಲ್‌ ನೀಡದ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು. ಹರೀಶ್‌ ಕಂಜಿಪಿಲಿ, ಅಶೋಕ್‌ ನೆಕ್ರಾಜೆ, ಉದಯ್‌ಕೊಪ್ಪಡ್ಕ ಚರ್ಚೆಯಲ್ಲಿ ಪಾಲ್ಗೊಂಡರು.

ಸಂಬಂಧಿತ ಅಧಿಕಾರಿಯು, ಮಾರ್ಗ ಸೂಚಿ ಪ್ರಕಾರ ನೀಡಿದ್ದೇವೆ ಎಂದರು. ಈ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪು ಕಂಡುಬಂದರೆ ಯಂತ್ರ ನೀಡಿದ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸುವುದು, ಜಿ.ಪಂ.ಗೆ ನಿರ್ಣಯ ಕಳುಹಿಸಿ ಅಲ್ಲಿಯೂ ರೈತರಿಗಾಗುವ ಅನ್ಯಾಯದ ಬಗ್ಗೆ ಚರ್ಚೆ ನಡೆಸುವುದು ಹಾಗೂ ತೋಟಗಾರಿಕಾ ಇಲಾಖೆಯಲ್ಲಿ ಸಹಾಯಧನ ನೀಡುವ ಕ್ರಮಗಳಂತೆ ಕೃಷಿ ಇಲಾಖೆಯಲ್ಲೂ ನೀಡಲು ಕ್ರಮ ಜರುಗಿಸುವ ಕುರಿತು ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲು ನಿರ್ಣಯಿಸಲಾಯಿತು.

ಗ್ರಾ.ಪಂ. ಅಧ್ಯಕ್ಷರ ದೂರು
ಸಭೆಯಲ್ಲಿ ಭಾಗವಹಿಸಿದ್ದ ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ದಿವಾಕರ್‌ ಮುಂಡೋಡಿ, ಪಿಎಂಜಿಎಸ್‌ವೈ ಯೋಜನೆಯಡಿ ಡಾಮರೀಕರಣಗೊಂಡ ಮಾವಿನಕಟ್ಟೆ-ದೇವ ರಸ್ತೆ¤ಯ ದುರಸ್ತಿಗೆ ಸಂಬಂಧಿತ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ, ಚರಂಡಿ ಕಾಮಗಾರಿಯನ್ನ ಕೈಗೊಂಡಿಲ್ಲ ಎಂದು ದೂರಿದರು. ಮರ್ಕಂಜ ಗ್ರಾ.ಪಂ. ಅಧ್ಯಕ್ಷ  ಪಂಚಾಯತ್‌ನಲ್ಲಿ ಗ್ರಾಮಲೆಕ್ಕಿಗರು ಸರಿಯಾಗಿ ಕಚೇರಿಗೆ ಹಾಜರಾಗದಿರುವುದರಿಂದ ಸಾರ್ವಜನಿಕರಿಗ ತೊಂದರೆಯಾಗುತ್ತಿದೆ ಎಂದು ದೂರಿದರು. ಕಳಂಜ, ಅಮರಪಟ್ನೂರು ಪಂಚಾಯತ್‌ ಅಧ್ಯಕ್ಷರುಗಳೂ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.