ಅಜ್ಞಾನದ ದೀಪ ಹೋಗಲಾಡಿಸುವವನೇ ಗುರು: ಡಾ | ಲೀಲಾ
Team Udayavani, Jul 11, 2017, 2:45 AM IST
ಉರ್ವಸ್ಟೋರ್: ಮಕ್ಕಳಲ್ಲಿ ಅಜ್ಞಾನದ ದೀಪವನ್ನು ಹೋಗಲಾಡಿಸಿ ಜ್ಞಾನದ ದೀಪವನ್ನು ನೀಡುವವನೇ ಗುರು. ಅತ್ಮಸ್ಥೈರ್ಯದ ಕಿಡಿಯನ್ನು ಮಗುವಿನ ಮನದಲ್ಲಿ ಹಚ್ಚಿದಾಗ ಸುಗಂಧ ಪುಷ್ಪದಂತೆ ಆ ಮಗು ಮನೆಗೂ, ಕುಟುಂಬಕ್ಕೂ, ಸಮಾಜಕ್ಕೂ ಸುಗಂಧದಂತೆ ಪರಿಮಳವನ್ನು ನೀಡಬಲ್ಲರು ಎಂದು ಶಾರದಾ ವಿದ್ಯಾಸಂಸ್ಥೆಗಳ ಶೈಕ್ಷಣಿಕ ಸಲಹೆಗಾರ್ತಿ ಡಾ| ಲೀಲಾ ಉಪಾಧ್ಯಾಯ ಹೇಳಿದರು. ಕೊಟ್ಟಾರದ ಭರತಾಂಜಲಿ ನೃತ್ಯ ಸಂಸ್ಥೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಆಯೋಜಿಸಿದ ಗುರುಪೂರ್ಣಿಮಾ-ಗುರುನಮನ – ಮಾತಾಪಿತರ ಚರಣ ಪೂಜನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಮಕ್ಕಳು ಸಮಾಜದ ಸಂಪತ್ತಾಗಬೇಕು. ಮಾಹಿತಿ ಜ್ಞಾನದ ಜತೆಗೆ ಆತ್ಮ ವಿಕಸನ, ಆತ್ಮಸ್ಥೈರ್ಯವನ್ನು ತುಂಬಬೇಕು. ಮನೆಯಲ್ಲಿ ಹೆತ್ತವರು, ಶಾಲೆಯಲ್ಲಿ ಗುರುಗಳು ಆದರ್ಶವಾಗಿರಬೇಕು ಎಂದವರು ಅಭಿಪ್ರಾಯಪಟ್ಟರು. ಗುರುವು ವ್ಯಕ್ತಿ ಮತ್ತು ಮಹಾನ್ ಶಕ್ತಿಗೆ ಒಂದು ಸಂಪರ್ಕ. ಮಾತಾ ಪಿತರ ಚರಣ ಪೂಜನ ಕಾರ್ಯಕ್ರಮವು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಕಲಾ ಶಿಕ್ಷಣದ ಜತೆಗೆ ಮಕ್ಕಳಲ್ಲಿ ಸಂಸ್ಕಾರ, ಸಮಾಜಮುಖೀ ಸ್ಪರ್ಶವನ್ನು ನೀಡುತ್ತಿರುವ ಭರತಾಂಜಲಿ ಸಂಸ್ಥೆಯು ಆದರ್ಶ ಎಂದರು.
ಗುರುನಮನ ಸ್ವೀಕರಿಸಿದ ವಿದುಷಿ ಕಮಲಾ ಭಟ್, ಕಲಾ ಜೀವನದಲ್ಲಿ ಆದರ್ಶವನ್ನು ಕಾಪಾಡಿಕೊಂಡು ನೃತ್ಯ ವಿದ್ಯೆಯ ಜತೆಗೆ ಸಂಸ್ಕಾರದ ಸಿಂಚನವನ್ನು ಮಕ್ಕಳಿಗೆ ನೀಡುತ್ತಿರುವ ತನ್ನ ಶಿಷ್ಯೆ ಪ್ರತಿಮಾ ಹಾಗೂ ಶ್ರೀಧರ್ ಅಭಿನಂದನಾರ್ಹರು ಎಂದರು. ಮಹಾಗಣಪತಿ ದೇವಳದ ಆಡಳಿತ ಮೊಕ್ತೇಸರ ಸುರೇಂದ್ರ ರಾವ್ ಮುಖ್ಯ ಅತಿಥಿಯಾಗಿದ್ದರು. ಅಪೂರ್ವಾ, ರೂಪಾ ವಸಂತ್ ಕೇದಿಕೆ ಅನಿಸಿಕೆ ವ್ಯಕ್ತಪಡಿಸಿದರು. ನಿರ್ದೇಶಕ ಶ್ರೀಧರ ಹೊಳ್ಳ ಸ್ವಾಗತಿಸಿದರು. ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು. ಉಪನ್ಯಾಸಕಿ ಮಾಧುರಿ ಶ್ರೀರಾಮ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.