ರಾಹುಲ್ ಗಾಂಧಿಗೆ ಚೀನಾ ರಾಯ “ಭಾರ”
Team Udayavani, Jul 11, 2017, 7:50 AM IST
ನವದೆಹಲಿ/ಬೀಜಿಂಗ್: ಸಿಕ್ಕಿಂ ಕುರಿತ ಗಡಿ ಸಂಘರ್ಷದ ನಡುವೆಯೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಇಂಥ ಪರಿಸ್ಥಿತಿಯಲ್ಲಿ ರಾಹುಲ್ ಚೀನಾ ರಾಯಭಾರ ಕಚೇರಿಗೆ ತೆರಳಿದ್ದು ಏಕೆ ಎಂದು ಬಿಜೆಪಿ ಪ್ರಶ್ನಿಸಿದರೆ, ಕಳೆದ ವಾರವಷ್ಟೇ ನೀವು ಮೂವರು ಸಚಿವರನ್ನು ಚೀನಾಗೆ ಕಳುಹಿಸಿದ್ದು ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಸೋಮವಾರ ಬೆಳಗ್ಗೆ ಚೀನಾದ ರಾಯಭಾರಿ ಕಚೇರಿ ತನ್ನ ವೆಬ್‌ಸೈಟ್‌ನಲ್ಲಿ ರಾಹುಲ್ ಭೇಟಿ ಕುರಿತಂತೆ ಮಾಹಿತಿ ನೀಡಿತ್ತು. ಇದನ್ನು ಆಧರಿಸಿ ಕೆಲ ಆಂಗ್ಲ ಸುದ್ದಿವಾಹಿನಿಗಳು
ವರದಿ ಮಾಡಿದ್ದವು. ಆಗ ರಾಹುಲ್ ಭೇಟಿಯನ್ನು ಅಲ್ಲಗಳೆದಿದ್ದ ಪಕ್ಷದ ವಕ್ತಾರ ರಣದೀಪ್ ಸುಜೇìವಾಲ,ಇದು ಮೋದಿ ಭಕ್ತರಾಗಿರುವ ಕೆಲವು ಸುದ್ದಿ ವಾಹಿನಿಗಳು ಸೃಷ್ಟಿಸಿದ “ಕಟ್ಟು ಕಥೆ’ ಎಂದು ಹೇಳಿದ್ದರು. ಆದರೆ, ಇದಾದ ಕೆಲ ಹೊತ್ತಿನಲ್ಲೇ ಟ್ವೀಟ್ ಮೂಲಕ ಸ್ವತಃ ರಾಹುಲ್ ಗಾಂಧಿ ಅವರೇ ಭೇಟಿ ಮಾಡಿದ್ದು ಸತ್ಯ ಎಂದರು. ಜತೆಗೆ, ಸುಜೇìವಾಲ ಕೂಡ ರಾಹುಲ್ ಭೇಟಿಯನ್ನು ಟ್ವೀಟ್ ಮೂಲಕವೇ ಒಪ್ಪಿಕೊಂಡರು.
ಚೀನೀ ವೆಬ್‌ಸೈಟ್‌ನ ಹೇಳಿಕೆ: ವಿವಾದ ಶುರು ವಾಗಿದ್ದೇ ಇಲ್ಲಿಂದ. ರಾಹುಲ್ ಗಾಂಧಿ ಅವರು, ಮೊದಲಿಗೆ ಚೀನಾ ರಾಯಭಾರ ಕಚೇರಿ, ನಂತರ ಭೂತಾನ್‌ನ ರಾಯಭಾರ ಕಚೇರಿಗಳಿಗೆ ತೆರಳಿ, ರಾಯಭಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಈ ಬಗ್ಗೆ ರಾಹುಲ್ ಆಗಲಿ, ಕಾಂಗ್ರೆಸ್ ವಕ್ತಾರ ರಾಗಲಿ ಮಾಹಿತಿ ನೀಡಿರಲೇ ಇಲ್ಲ. ಆದರೆ, ಚೀನಾ ರಾಯಭಾರ ಕಚೇರಿಯ ವೆಬ್‌ಸೈಟ್, ಈ ಬಗ್ಗೆ ಮಾಹಿತಿ ನೀಡಿತು. ವಿಶೇಷವೆಂದರೆ ಮೊದಲಿಗೆ ಈ ಸುದ್ದಿ ಒಪ್ಪದ ಕಾಂಗ್ರೆಸ್ ಎಲ್ಲ ಸುಳ್ಳು ಎಂದಿದ್ದರೆ, ವಿವಾದ ಹೆಚ್ಚಾಗುತ್ತಲೇ
ಚೀನಾ ರಾಯಭಾರ ಕಚೇರಿ ಈ ಹೇಳಿಕೆಯನ್ನೇ “ಡಿಲೀಟ್” ಮಾಡಿತು!
ಹೌದು, ಹೋಗಿದ್ದು ಸತ್ಯ: ರಾಹುಲ್ ಹೋಗಿಲ್ಲ, ಹೋಗಿದ್ದಾರೆ ಎಂಬ ಚರ್ಚೆಯ ನಡುವೆಯೇ ಸ್ವತಃ ರಾಹುಲ್ ಗಾಂಧಿ ಅವರೇ ಟ್ವಿಟರ್
ಮೂಲಕ ನಾನು ಹೋಗಿದ್ದು ಸತ್ಯ ಎಂದರು. ಗಡಿ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಮಾಹಿತಿ ಪಡೆದುಕೊಳ್ಳುವುದು ನನ್ನ ಕರ್ತವ್ಯ ಎಂದು ಹೇಳಿದರು. ಅಲ್ಲದೆ, ಸಿಕ್ಕಿಂ ಗಡಿ ವಿವಾದ ತೀವ್ರವಾಗಿರುವಾಗಲೇ ಮೂವರು ಸಚಿವರು ಚೀನಾ ಪ್ರವಾಸಕ್ಕೆ ತೆರಳಿದ್ದು ಏಕೆ ಎಂಬ ಬಗ್ಗೆಯೂ ಮಾಹಿತಿ ಬೇಕಿತ್ತು. ಮಾಜಿ ಭದ್ರತಾ ಸಲಹೆಗಾರ, ಕಾಂಗ್ರೆಸ್ ನಾಯಕರನ್ನೂ ಭೇಟಿ ಮಾಡಿ ಚರ್ಚಿಸಿದ್ದೇನೆ ಎಂದು ರಾಹುಲ್ ಹೇಳಿದರು. ಜತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು, ಜರ್ಮನಿಯ ಬರ್ಗ್‌ನಲ್ಲಿ ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿದ್ದ ಬಗ್ಗೆಯೂ ಮಾಹಿತಿ ಪಡೆಯಲು ರಾಹುಲ್ ಹೋಗಿದ್ದರು ಎಂದು ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ಬಿಜೆಪಿ ಅಧಿಕೃತವಾಗಿ ಏನನ್ನೂ ಹೇಳದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಹೋಗಿದ್ದು ನಿಜವೇ ಆಗಿದ್ದರೂ, ಚೀನಾ
ರಾಯಭಾರ ಕಚೇರಿ ತನ್ನ ವೆಬ್‌ಸೈಟ್‌ನಿಂದ ಈ ಮಾಹಿತಿ ಡಿಲೀಟ್ ಮಾಡಿದ್ದು ಏಕೆ ಎಂದು ಪ್ರಶ್ನಿಸಿದೆ.
ಟಿಬೆಟ್ ಕಾರ್ಡ್ ಬಳಸಿದ್ರೆ”ಸ್ವದಹನ’ಕ್ಕೆ ನಾಂದಿ
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಚೀನಾದ ಅಧಿಕೃತ ಮಾಧ್ಯಮ ಸೋಮವಾರ ಭಾರತಕ್ಕೆ ಇನ್ನೊಂದು ಎಚ್ಚರಿಕೆ ನೀಡಿದೆ. ದಲಾಯ್ ಲಾಮಾ ಅವರನ್ನು ಮುಂದಿಟ್ಟುಕೊಂಡು ಚೀನಾವನ್ನು ಹೆಡೆಮುರಿ ಕಟ್ಟುವ ಕನಸಿನಿಂದ “ಟಿಬೆಟ್ ಕಾರ್ಡ್’ ಬಳಸಿದರೆ ಭಾರತ ತನ್ನನ್ನೇ ತಾನು ಸುಟ್ಟುಕೊಳ್ಳುವ ಪ್ರಕ್ರಿಯೆಗೆ ನಾಂದಿ ಹಾಡಿಕೊಳ್ಳಲಿದೆ ಎಂದು ಹೇಳಿದೆ. ಭಾರತೀಯ ಮಾಧ್ಯಮಗಳ ವರದಿ
ಪ್ರಸ್ತಾಪಿಸಿ, ಲಡಾಕ್‌ನಲ್ಲಿ ಟಿಬೆಟ್ ಧ್ವಜ ಹಾರಿಸಿ ಚೀನಾಕ್ಕೆ ಬೆದರಿಸಬಹುದೆನ್ನುವುದು ಭಾರತದ ತಂತ್ರವಾಗಿದ್ದರೆ ಅದರ ಫಲಿತಾಂಶವೇ ಬೇರೆ ಆಗಲಿದೆ ಎಂದು ವರದಿ ಮಾಡಿದೆ.
ಮಾತುಕತೆ ನಡೆದಿಲ್ಲ
ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆಯುತ್ತಿ ರುವ ಜಿ20 ಶೃಂಗದಲ್ಲಿ ಭಾರತ-ಚೀನಾ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದೇ ಇಲ್ಲ ಎಂದು ಚೀನಾ ಇಂದು ಸ್ಪಷ್ಟನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿ ಮಾಡಿ ಬಂಗಾಳಕೊಲ್ಲಿ ಯಲ್ಲಿ ಅಮೆರಿಕ, ಜಪಾನ್ ಜತೆ ಜಂಟಿ ಸಮರಾಭ್ಯಾಸ ಮಾಡುತ್ತಿರುವ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿತ್ತು. ಇದೇ ವೇಳೆ ದ್ವಿಪಕ್ಷೀಯ ಮಾತುಕತೆಯೂ ನಡೆದಿದೆ ಎಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚೀನಾ ಸ್ಪಷ್ಟನೆ ನೀಡಿದೆ.
ರಾಹುಲ್ ಗಾಂಧಿ ಅವರು ಚೀನಾ, ಭೂತಾನ್ ರಾಯಭಾರಿ ಕಚೇರಿಗೆ ಭೇಟಿ ನೀಡಿರುವುದರಲ್ಲಿ ತಪ್ಪೇನಿದೆ? ಯಾಕೆ, ಅವರಿಗೆ ಗಡಿಯಲ್ಲಿನ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕಿಲ್ಲವೇ?
ರಮ್ಯಾ, ಮಾಜಿ ಸಂಸದೆ
ರಾಯಭಾರಿ ಕಚೇರಿ ಅಧಿಕಾರಿಗಳ ಭೇಟಿ ಮಾಡಿರುವುದನ್ನು ಪ್ರಶ್ನಿಸುವ ಬಿಜೆಪಿ ನಾಯಕರು, ಮೊದಲು ಮೂವರು ಹಿರಿಯ ಸಚಿವರು ಚೀನಾ ಆತಿಥ್ಯದಲ್ಲಿ ಇರುವುದಕ್ಕೆ ಕಾರಣ ಪ್ರಕಟಿಸಲಿ.
ರಾಹುಲ್ ಗಾಂಧಿ ಎಐಸಿಸಿ ಉಪಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.