ಬ್ರಹ್ಮಾವರ: ತಡೆಯಾಜ್ಞೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
Team Udayavani, Jul 12, 2017, 2:55 AM IST
ಬ್ರಹ್ಮಾವರ: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಎಲ್ಲಾ ಘಟಕಗಳ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ನರ್ಮ್
ಬಸ್‌ಗಳ ಸಂಚಾರಕ್ಕೆ ತಡೆಯಾಜ್ಞೆ ತಂದಿರುವ ಬಿಜೆಪಿ ಬೆಂಬಲಿತರ ಜನವಿರೋಧಿ ನೀತಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಸೋಮವಾರ ಇಲ್ಲಿನ ಬಸ್ ನಿಲ್ದಾಣ ಬಳಿ ಜರಗಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಅವರು ಮಾತನಾಡಿ, ಉಡುಪಿಯಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ಆಸ್ಪತ್ರೆಯನ್ನು ನಿರ್ಮಿಸಿದರೆ ಬಿಜೆಪಿ ವಿರೋಧಿಸುತ್ತಿದೆ, ಆದರೆ ಸರಕಾರಿ ಬಸ್ ಸಂಚಾರ ವಿರೋಧಿಸಿ ಖಾಸಗಿಯವರನ್ನು ಬೆಂಬಲಿಸುತ್ತದೆ. ಇದು ಯಾವ ದ್ವಂದ್ವ ನೀತಿ ಎಂದು ಪ್ರಶ್ನಿಸಿದರು.
ಬಹಳಷ್ಟು ಅನುಕೂಲ
ಸರಕಾರಿ ಬಸ್ ಸಂಚಾರ ಗ್ರಾಮೀಣ ಜನರಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ರಿಯಾಯಿತಿ,
ಪರಿಸರ ಸ್ನೇಹಿ ಸಂಚಾರ ಅನುಕೂಲಗಳನ್ನು ಕಲ್ಪಿಸಿದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ನರ್ಮ್ ಬಸ್ ಸಂಚಾರ ಅತೀ ಅಗತ್ಯ ಎಂದು ಅವರು ಹೇಳಿದರು.
ನಮ್ಮದು ಸಹಬಾಳ್ವೆ
ಈ ನೆಲ, ಜಲ, ಗಾಳಿಯನ್ನು ಎಲ್ಲರೂ ಬಳಸುತ್ತೇವೆ, ಎಲ್ಲಾ ಧರ್ಮದ ಆಚರಣೆಗಳಲ್ಲಿ ಒಂದಾಗುತ್ತಿದ್ದೇವೆ. ಸಾಮರಸ್ಯದ ಬದುಕು ನಮ್ಮದಾಗಿದೆ. ಅಂದ ಮೇಲೆ ಈ ಕೋಮು, ಧರ್ಮ, ದೇವರ ಹೆಸರಿನಲ್ಲಿ ಕಾದಾಟಗಳು ಯಾಕೆ ಬೇಕು ಎಂದು ನಿತ್ಯಾನಂದ ಶೆಟ್ಟಿ ಅವರು ಪ್ರಶ್ನಿಸಿದರು.
ಅನ್ನಕ್ಕೆ ಕನ್ನ
ಕೇಂದ್ರ ಸರಕಾರ ಎಲ್ಲಾ ವಿಧಗಳಲ್ಲಿ ತೆರಿಗೆ ವಿಧಿಸುವ ಮೂಲಕ ಬಡ ಜನರ ಅನ್ನಕ್ಕೆ ಕನ್ನ ಹಾಕುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಹತ್ತು ಹಲವು ಅಭಿವೃದ್ದಿ ಕಾರ್ಯ ಕೈಗೊಂಡರೂ ಬಿಜೆಪಿ ಟೀಕಿಸುತ್ತಿದೆ ಎಂದು ನಿತ್ಯಾನಂದ ಶೆಟ್ಟಿ ಹೇಳಿದರು. ಪ್ರಮುಖರಾದ ವೆರೋನಿಕಾ ಕರ್ನೇಲಿಯೊ, ಜನಾರ್ದನ ಭಂಡಾರ್‌ಕಾರ್, ಮೈರ್ಮಾಡಿ ಸುಧಾಕರ ಶೆಟ್ಟಿ, ಮೈರ್ಮಾಡಿ ಅಶೋಕ್ ಕುಮಾರ್ ಶೆಟ್ಟಿ, ದಿನಕರ ಹೇರೂರು, ಗೋಪಿ ಕೆ. ನಾಯ್ಕ, ರಾಜೇಶ್ ಶೆಟ್ಟಿ ಕುಮ್ರಗೋಡು, ನಿತ್ಯಾನಂದ ಬಿ.ಆರ್., ರಾಘವೇಂದ್ರ ಕುಂದರ್, ರಾಘವೇಂದ್ರ ಶೆಟ್ಟಿ ಕರ್ಜೆ, ಪ್ರಶಾಂತ್, ನವೀನ್‌ಚಂದ್ರ ನಾಯಕ್, ಅಲ್ತಾಫ್ ಅಹಮದ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.