ಬಿಪಿಎಲ್, ಎಪಿಎಲ್ ಕಾರ್ಡ್ ಗೊಂದಲ ಬಗೆಹರಿಸಲು ಆಗ್ರಹ
Team Udayavani, Jul 12, 2017, 2:45 AM IST
ಗುರುಪುರ: ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾಗಿರುವ ಕಾರಣ, ಪಡಿತರ ಚೀಟಿಗೆ 2017ರ ಫೆಬ್ರವರಿ ತಿಂಗಳ ಮೊದಲು ಅರ್ಜಿ ಕೊಟ್ಟಿರುವವರು ಇನ್ನೊಮ್ಮೆ ಅರ್ಜಿ ಕೊಡಬೇಕಾಗಿದೆ ಎಂದು ಆಹಾರ ಇಲಾಖೆಯ ಉಪತಹಶೀಲ್ದಾರ್ ವಾಸು ಶೆಟ್ಟಿ ಅವರು ಗುರುಪುರ ಗ್ರಾಮ ಸಭೆಯಲ್ಲಿ ತಿಳಿಸಿದ್ದಾರೆ.
ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಮತ್ತು ಅಡೂxರು ಗ್ರಾಮಗಳ 2017-18ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಅಡೂxರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷೆ ರುಕಿಯಾ ಅಧ್ಯಕ್ಷತೆಯಲ್ಲಿ ಜರಗಿತು.
ಆಹಾರ ಇಲಾಖೆಯ ಉಪತಹಶೀಲ್ದಾರ್ ವಾಸುಶೆಟ್ಟಿ ಅವರು ಮಾಹಿತಿ ನೀಡಿ, ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಜವಾಬ್ದಾರಿ ಇರುವ ಕಾರಣ 100 ಗ್ರಾಮಗಳು ಬರುವ ಕಾರಣ ಗ್ರಾಮಸಭೆಗೆ ಬರಲು ಅನನುಕೂಲ ವಾಗುತ್ತಿದೆ. ಈ ತಿಂಗಳಲ್ಲಿ ಅಕ್ಕಿ ಮತ್ತು ಬೇಳೆ ಬಂದಿದೆ. ಸಕ್ಕರೆ ಹಾಗೂ ಎಣ್ಣೆ ಇನ್ನೂ ಬರಬೇಕಾಗಿದೆ ಎಂದು ಹೇಳಿದರು.
ಬಿಪಿಎಲ್ – ಎಪಿಎಲ್ ಸರ್ಕಸ್
ಯಾರಿಗೆ ಬಿಪಿಎಲ್ ಪಡಿತರ ಚೀಟಿ ನೀಡಬೇಕಿತ್ತೂ ಅವರಿಗೆ ಎಪಿಎಲ್ ಪಡಿತರ ಚೀಟಿ ನೀಡಲಾಗಿದೆ. ಯಾರಿಗೆ ಎಪಿಎಲ್ ನೀಡಬೇಕಿತ್ತೂ ಅವರಿಗೆ ಬಿಪಿಎಲ್ ನೀಡಲಾಗಿದೆ ಎಂದು ಗ್ರಾಮಸ್ಥರು ಆಹಾರ ಇಲಾಖಾಧಿಕಾರಿಯವರಲ್ಲಿ ಪ್ರಶ್ನಿಸಿದಾಗ ಆ ಬಗ್ಗೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳಿದರು.
ಮೆಸ್ಕಾಂ: ಮಾದರಿ ಗ್ರಾಮವಾಗಿ ಮೂಳೂರು
“ಕೈಕಂಬ ಮೆಸ್ಕಾಂ ವಲಯದಿಂದ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿದೆ. ನಮ್ಮ ವಲಯ ವ್ಯಾಪ್ತಿಯಲ್ಲಿ ಗಂಜಿಮಠ, ಗುರುಪುರ, ಕಂದಾವರ, ಪಡುಪೆರಾರ ಗ್ರಾಮ ಪಂಚಾಯತ್‌ಗಳು ಬರುತ್ತವೆ. ಮೂಳೂರು ಗ್ರಾಮಕ್ಕೆ ತುರ್ತು ಅಗತ್ಯ ಕಾಮಗಾರಿಗಳು ನಡೆಯಬೇಕಾಗಿವೆ. 20 ಲಕ್ಷ ರೂಪಾಯಿ ಅನುದಾನದಲ್ಲಿ ವಿವಿಧ ಕಾಮಗಾರಿಗಳು ನಡೆಯಲಿವೆ. ಈ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೈಕಂಬ ವಲಯದ ಮೆಸ್ಕಾಂ ಅಧಿಕಾರಿ ಮೋಹನ್ ಸಭೆಗೆ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ 4ಸ್ಟಾರ್, ನಗರ ಪ್ರದೇಶಗಳಲ್ಲಿ 5ಸ್ಟಾರ್ ಇರುವ ಉಪಕರಣವನ್ನು ಬಳಕೆ ಮಾಡುವ ಬಗ್ಗೆ ಸರಕಾರ ಈಗಾಗಲೇ ಆದೇಶ ನೀಡಿದೆ. ಇದರ ಬಳಕೆಯಿಂದ ವಿದ್ಯುತ್ ಮಿತಬಳಕೆಯಾಗಲಿದೆ. ಇಲಾಖೆಯಿಂದ ಇನ್ನೂ ಆದೇಶ ಬರಬೇಕಾಗಿದೆ ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು. “ವ್ಯಾಪಾರಸ್ಥರು ಡಿಡಿ ತೆಗೆದುಕೊಳ್ಳುವಾಗ ಎಚ್ಚರ ವಹಿಸಿ. ನಕಲು ಡಿಡಿಗಳ ಹಾವಳಿ ಇದೆ’ ಎಂದು ಎಸ್‌ಐ ರಾಜಾರಾಮ್ ಎಚ್ಚರಿಸಿದರು.
ಗುರುಪುರ ರಸ್ತೆಯ ಉಬ್ಬುಗಳಿಗೆ ಬಣ್ಣ ಬಳಿಯುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.
ಗ್ರಾ.ಪಂ. ಉಪಾಧ್ಯಕ್ಷ ಉದಯ ಭಟ್ ಜಿ.ಎಂ., ತಾ.ಪಂ. ಸದಸ್ಯ ಸಚಿನ್ ಕುಮಾರ್ ಗ್ರಾ.ಪಂ. ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ಅಬೂಬಕ್ಕರ್ ಸಭೆಯನ್ನು ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.