ನನ್ನ ವಯಸ್ಸು ಮತ್ತು ಪತ್ನಿಯ ವೇತನ ಕೇಳಬೇಡಿ!
Team Udayavani, Jul 12, 2017, 4:40 AM IST
ಹೊಸದಿಲ್ಲಿ: ಭಾರತೀಯರು ಬೇರೆ ದೇಶದಲ್ಲಿ ಸಮಸ್ಯೆಗೆ ಸಿಲುಕಿದರೆ ಅವರನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸದಾ ಮುಂದಿರುತ್ತಾರೆ. ಹಾಗೇ ಸಾಮಾಜಿಕ ಜಾಲತಾಣದಲ್ಲೂ ಅವರು ತುಂಬಾ ಆಕ್ಟಿವ್. ಟ್ವಿಟರ್ನಲ್ಲಿ ಅವರ ಕಾಲೆಳೆಯಲು ಬಂದವರು ಒಂದೇ ಪ್ರತಿಕ್ರಿಯೆಗೆ ತಣ್ಣಗಾದ ಉದಾಹರಣೆಗಳಿವೆ.
ಸುಷ್ಮಾ ಅವರು ಹೀಗಾದರೆ, ಅವರ ಪತಿ, ಮಿಜೋರಾಂ ರಾಜ್ಯಪಾಲ ಸ್ವರಾಜ್ ಕೌಶಲ್ ಕೂಡ ಈ ವಿಚಾರದಲ್ಲಿ ಪತ್ನಿಯನ್ನು ಮೀರಿಸುವಂತಿದ್ದಾರೆ. ಸ್ವರಾಜ್ ಅವರ ಟ್ವಿಟರ್ ಖಾತೆಗೆ ಆಗಾಗ ಸುಷ್ಮಾಗೆ ಸಂಬಂಧಿಸಿದ ಪ್ರಶ್ನೆಗಳು ಬರುತ್ತಿರುತ್ತವೆ. ಈ ಬಾರಿ ಬಂದ ಪ್ರಶ್ನೆಯೊಂದು ಹೀಗಿತ್ತು; ‘ಸಾರ್, ಸುಷ್ಮಾ ಮೇಡಂ ಸ್ಯಾಲರಿ ಎಷ್ಟಿರಬಹುದು?’ ಕ್ರಿಮಿನಲ್ ಲಾಯರ್ ಆಗಿರುವ ಸ್ವರಾಜ್ ಈ ಟ್ವೀಟ್ಗೆ ಪ್ರತಿಕ್ರಿಯಿಸಿ, ‘ಸುಷ್ಮಾ ಅವರ ವೇತನ ಮತ್ತು ನನ್ನ ವಯಸ್ಸು ಎರಡನ್ನೂ ಕೇಳಬಾರದು. ಹಾಗೆ ಕೇಳುವುದು ಬ್ಯಾಡ್ ಮ್ಯಾನರ್ಸ್’ ಎಂದು ಟ್ವೀಟಿಸಿದ್ದಾರೆ. ಅನಂತರ ಮತ್ತೂಂದು ಟ್ವೀಟ್ ಮಾಡಿ, ‘ಚಂದಾ ಕೇಳುವುದಿದ್ದರೆ ನೇರವಾಗಿ ಕೇಳು, ವೇತನ ಏಕೆ ಕೇಳ್ತೀಯ’ ಎಂದು ಕಾಲೆಳೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.