ಮತ್ತೆ ಜೋಗ್ ಫಾಲ್ಸ್ನಲ್ಲಿ ಭಟ್ರು-ಗಣೇಶ್
Team Udayavani, Jul 12, 2017, 10:28 AM IST
ಸುಮಾರು 11 ವರ್ಷಗಳ ಹಿಂದೆ ಗಣೇಶ್ ಅಭಿನಯದಲ್ಲಿ ಯೋಗರಾಜ್ ಭಟ್ ಅವರು “ಮುಂಗಾರು ಮಳೆ’ ಎಂಬ ಚಿತ್ರ ನಿರ್ದೇಶಿಸಿದ್ದು, ಆ ಚಿತ್ರದಲ್ಲಿ ಜೋಗ್ ಫಾಲ್ಸ್ನ ವಿಭಿನ್ನವಾಗಿ ತೋರಿಸಿದ್ದು, ಚಿತ್ರ ಸೂಪರ್ ಹಿಟ್ ಆಗಿದ್ದು … ಎಲ್ಲವೂ ಗೊತ್ತಿದ್ದೇ. ಈಗ ಮತ್ತೆ ಯೋಗರಾಜ್ ಭಟ್ ಮತ್ತು ಗಣೇಶ್ ಇಬ್ಬರೂ ಜೋಗ್ ಫಾಲ್ಸ್ ಕಡೆಗೆ ಹೋಗಿ ಬಂದ್ದಿದಾರೆ.
ಹೌದು, ಸೋಮವಾರ ಅವರಿಬ್ಬರೂ “ಮುಗುಳು ನಗೆ’ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡುವುದಕ್ಕೆ ಹುಬ್ಬಳ್ಳಿಗೆ ಹೋಗಿದ್ದರು. ಅಲ್ಲಿಂದ ವಾಪಸ್ಸು ಬರುವ ಸಂದರ್ಭದಲ್ಲಿ ಇಬ್ಬರೂ ಶಿರಸಿ, ಸಿದ್ಧಾಪುರ ಮಾರ್ಗವಾಗಿ ಜೋಗ್ ಫಾಲ್ಸ್ಗೆ ಹೋಗಿದ್ದಾರೆ. ಅಲ್ಲಿ ಬಂಡೆಯ ಮೇಲೆ ಕುಳಿತು, “ಮುಂಗಾರು ಮಳೆ’ ಚಿತ್ರದ ಕುರಿತು ಮೆಲುಕು ಹಾಕಿದ್ದಾರೆ.
ಅಷ್ಟೇ ಅಲ್ಲ, ಚಿತ್ರೀಕರಣ ನಡೆದ ಸ್ಥಳಗಳಿಗೆ ಭೇಟಿ ಕೊಟ್ಟು ಅಲ್ಲಿ ಸೆಲ್ಫಿ ತೆಗೆಸಿಕೊಂಡಿದ್ದಾರೆ. “ಇರೋದ್ರೊಳಗೆ ನೋಡಬೇಕು ಜೋಗಾದ್ ಗುಂಡಿ …’ ಎಂದು ಹಾಡುತ್ತಾ ವಾಪಸ್ಸು ಬಂದಿದ್ದಾರೆ. ಅಂದಹಾಗೆ, “ಮುಗುಳು ನಗೆ’ ಚಿತ್ರದ ಎರಡನೆಯ ಹಾಡು ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.