ಸ್ಮಾರ್ಟ್‌ ನಗರಿಗೆ ಹೊಸ ಮಾಲ್‌ಗ‌ಳ ಮೆರುಗು!


Team Udayavani, Jul 12, 2017, 12:41 PM IST

hub2.jpg

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ ಆಗುತ್ತಿದೆ. ಒಂದೆಡೆ ಬಿಆರ್‌ಟಿಎಸ್‌ ಕಾಮಗಾರಿ ಭರದಿಂದ ಸಾಗುತ್ತಿದೆ. ಇನ್ನೊಂದೆಡೆ ಬಹುಮಹಡಿ ಆಕರ್ಷಕ ವಾಣಿಜ್ಯ ಕಟ್ಟಡಗಳು, ಹತ್ತಾರು ಅಂತಸ್ತುಗಳ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಶಾಪಿಂಗ್‌ ಹಾಗೂ ಮನೋರಂಜನೆಗೆ ಆದ್ಯತೆ ನೀಡುವ ಮಾಲ್‌ಗ‌ಳು ವಾಣಿಜ್ಯ ನಗರಿಯ ಮೆರಗು ಹೆಚ್ಚಿಸುತ್ತಿವೆ. 

ಮೆಟ್ರೋಗಳಲ್ಲಿನ ಬೃಹತ್‌ ಶಾಪಿಂಗ್‌ ಕಾಂಪ್ಲೆಕ್ಸ್‌ಗಳನ್ನು ಹೋಲುವಂಥಬಹುಮಹಡಿ ವಾಣಿಜ್ಯ ಕಟ್ಟಡಗಳು  ನಗರದಲ್ಲಿ ತಲೆ ಎತ್ತುತ್ತಿವೆ. ನಗರವಾಸಿಗಳು ಶಾಪಿಂಗ್‌ ಅಥವಾ ಮಲ್ಟಿಪ್ಲೆಕ್ಸ್‌ಗೆ  ಹೋಗಬೇಕೆಂದರೆ ಗೋಕುಲ ರಸ್ತೆಯ ಅರ್ಬನ್‌ ಓಯಸಿಸ್‌ ಮಾಲ್‌, ಬಿಗ್‌ ಬಜಾರ್‌ಗೆ ಹೋಗಬೇಕಾಗುತ್ತದೆ. ಕಾಯಿನ್‌ ರಸ್ತೆಯ ಲಕ್ಷ್ಮಿ ಮಾಲ್‌ ಕೂಡ ಜನರನ್ನು ಸೆಳೆಯುತ್ತಿದೆ. 

ಈಗ ವಿಶಾಲವಾದ ಫ್ಲೋರ್‌ ಏರಿಯಾ ಹೊಂದಿದ ಶಾಪಿಂಗ್‌ ಹಾಗೂ ಮನರಂಜನೆಗೆ ಅವಕಾಶ ನೀಡುವ ವಾಣಿಜ್ಯ ಕಟ್ಟಡಗಳಿಗೆ ಮತ್ತೆರಡು ಸೇರ್ಪಡೆಯಾಗುತ್ತಿವೆ. ಶಾಪಿಂಗ್‌ ಕಾಂಪ್ಲೆಕ್ಸ್‌ಗಳು ಹಲವು ಇದ್ದರೂ ಗೇಮಿಂಗ್‌, ಮಲ್ಟಿಪ್ಲೆಕ್ಸ್‌, ಶಾಪಿಂಗ್‌, ಕಚೇರಿಗಳು, ಶೋರೂಮ್‌ಗಳನ್ನೊಳಗೊಂಡ ಎರಡು ಬೃಹತ್‌ ಮಹಲುಗಳು ನಗರದಲ್ಲಿ ಆರಂಭಗೊಳ್ಳಲಿವೆ. ಅಲ್ಲದೇ ನೂರಾರು ಶಾಪ್‌ಗ್ಳನ್ನೊಳಗೊಂಡ ಮತ್ತೆರಡು ಶಾಪಿಂಗ್‌ ಕಾಂಪ್ಲೆಕ್ಸ್‌ಗಳು ನಿರ್ಮಾಣಗೊಳ್ಳುತ್ತಿವೆ. 

ಒನ್‌-ಹುಬ್ಬಳ್ಳಿ: ಹೊಸೂರಿನಲ್ಲಿ ಒನ್‌ -ಹುಬ್ಬಳ್ಳಿ ವಾಣಿಜ್ಯ, ಮನರಂಜನೆ, ರೆಸ್ಟೋರೆಂಟ್‌ಗಳು ಹಾಗೂ ಅಪಾರ್ಟ್‌ ಮೆಂಟ್‌ಗಳನ್ನೊಳಗೊಂಡ ದೊಡ್ಡ ಸಮುಚ್ಚಯ ತಲೆ ಎತ್ತಲಿದೆ. ಶಾಪಿಂಗ್‌ ಹಾಗೂ ವಸತಿ ಸಮುಚ್ಚಯ ಇದಾಗಿದ್ದು, ಅವಳಿ ನಗರದ ಅತಿ ದೊಡ್ಡ ಶಾಪಿಂಗ್‌ ಮಾಲ್‌ ಎಂಬ ಖ್ಯಾತಿಗೆ ಭಾಜನವಾಗಲಿದೆ. 

ಇದರಲ್ಲಿ 6 ಸ್ಕ್ರೀನ್‌ ಮಲ್ಟಿಪ್ಲೆಕ್ಸ್‌ಗಳು ಆರಂಭಗೊಳ್ಳಲಿದ್ದು, 25 ರೆಸ್ಟೊರೆಂಟ್‌ ಗಳು ವೈವಿಧ್ಯ ಖಾದ್ಯಗಳನ್ನು ಒದಗಿಸಲಿವೆ. ಇದರಲ್ಲಿ 20,000 ಚದುರ ಅಡಿ ಗೇಮಿಂಗ್‌ ಝೋನ್‌ಗೆ ಮೀಸಲಾಗಿಡಲಾಗಿದೆ. ಇದರಲ್ಲಿ ಎಲಿವೇಟರ್‌ಗಳಿರಲಿದ್ದು, ಎಲ್ಲ ಶಾಪ್‌ ಗಳಿಗೆ ಶೇ.100ರಷ್ಟು ಜನರೇಟರ್‌ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. 

ಬಸಂತ್‌ ಸಿಟಿ ಸೆಂಟರ್‌ ಮಾಲ್‌: ಕೋರ್ಟ್‌ ವೃತ್ತದ ಸನಿಹವೇ ಬಸಂತ್‌ ಸಿಟಿ ಸೆಂಟರ್‌ ಮಾಲ್‌ ಕಾಮಗಾರಿ ಭರದಿಂದ ಸಾಗಿದೆ. ಇದು ಕೂಡ ಶಾಪಿಂಗ್‌ ಹಾಗೂ ಎಂಟರ್‌ ಟೇನ್‌ಮೆಂಟ್‌ಗೆ ಆದ್ಯತೆ ನೀಡುವ ವಾಣಿಜ್ಯ ಮಹಲು. ಇಲ್ಲಿ 4 ಸ್ಕ್ರೀನ್‌ ಮಲ್ಟಿಪ್ಲೆಕ್ಸ್‌ಗಳು ಆರಂಭಗೊಳ್ಳಲಿವೆ. 

6,00,000 ಚದುರ ಅಡಿ ಬಿಲ್ಟಪ್‌ ಪ್ರದೇಶವಿದ್ದು, ಭೂಕಂಪ ತಡೆದುಕೊಳ್ಳಬಲ್ಲ ಆರ್‌ಸಿಸಿ ಫ್ರೆàಮ್ಡ್ ಕಟ್ಟಡ ನಿರ್ಮಿಸಲಾಗಿದೆ. ಮಳೆ ಕೊಯ್ಲು ಮಾಡುವ ಭರವಸೆ ನೀಡಲಾಗಿದೆ. ಇದರಲ್ಲಿ ಫ‌ುಡ್‌ ಕೋರ್ಟ್‌ ಗಳು, ಸಿನೆಮಾ, ಗೇಮಿಂಗ್‌ ಝೋನ್‌, ಶಾಪಿಂಗ್‌ಗೆ ಅವಕಾಶ ಸಿಗಲಿದೆ. ಮಹಲಿನಲ್ಲಿ 600ಕ್ಕೂ ಅಧಿಕ ಕಾರುಗಳ ಪಾರ್ಕಿಂಗ್‌  ಗೆ ಸೌಲಭ್ಯ ಒದಗಿಸಲಾಗಿದೆ. ಈಗಾಗಲೇ ಹಲವು ಕಾರ್ಪೋರೇಟ್‌ ಕಚೇರಿಗಳು ಬುಕ್‌ ಆಗಿವೆ. 

ಮಾರ್ವೆಲ್‌ ಆರ್ಟಿಜಾ: ವಿದ್ಯಾನಗರದಲ್ಲಿ ಮಾರ್ವೆಲ್‌ ಆರ್ಟಿಜಾ ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಾಣ ಪ್ರಗತಿಯಲ್ಲಿದೆ. ಕಟ್ಟಡದ 5 ಮಹಡಿಗಳಲ್ಲಿ 173 ಶಾಪ್‌ಗ್ಳು ಬರಲಿದ್ದು, ಇಲ್ಲಿ 5 ಸ್ಪೀಡ್‌ ಲಿಫ್ಟ್ಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಪರಿಸರ ಸ್ನೇಹಿ ವಾಣಿಜ್ಯ ಕಟ್ಟಡ ಇದಾಗಲಿದೆ. ಇಡೀ ಕಾಂಪ್ಲೆಕ್ಸ್‌ಗೆ 24/7 ಸುರಕ್ಷತೆಯನ್ನು ಒದಗಿಸುವ ಭರವಸೆ ನೀಡಲಾಗುತ್ತಿದೆ.

ಸ್ಯಾಟ್‌ಲೆಟ್‌ ಕಾಂಪ್ಲೆಕ್ಸ್‌: ಹುಬ್ಬಳ್ಳಿಯ ಎಂ.ಜಿ. ರಸ್ತೆ ಎಂದೇ ಕರೆಸಿಕೊಳ್ಳುವ ಕೊಪ್ಪಿಕರ ರಸ್ತೆಗೆ ತನ್ನದೇ ಆದ ಹಿರಿಮೆಯಿದೆ. ಕೊಪ್ಪಿಕರ ರಸ್ತೆಯ ಸ್ಯಾಟ್‌ಲೆçಟ್‌ ಕಾಂಪ್ಲೆಕ್ಸ್‌ಗೆ ಮಹಡಿಗಳ ಸಂಖ್ಯೆ ಹೆಚ್ಚಿಸಿ ಅದಕ್ಕೆ ಆಕರ್ಷಕ ರೂಪ ನೀಡಲಾಗುತ್ತಿದೆ. ಬಿಆರ್‌ಟಿಎಸ್‌ ಯೋಜನೆಗೆ ಹುಬ್ಬಳ್ಳಿ-ಧಾರವಾಡ ರಸ್ತೆ ಅಗಲೀಕರಣದ ಗೊಂದಲ ಬಗೆಹರಿಯುವವರೆಗೂ ಕಾದ ಕೆಲವರು ಈಗ ಕಾಂಪ್ಲೆಕ್ಸ್‌ಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.

ಹೊಸೂರಿನಿಂದ ಉಣಕಲ್‌ ಕ್ರಾಸ್‌ವರೆಗೆ ರಸ್ತೆಯ ಎರಡೂ ಬದಿಯಲ್ಲಿ ಹಲವು ಹೊಸ ಕಾಂಪ್ಲೆಕ್ಸ್‌ಗಳು ತಲೆ ಎತ್ತುತ್ತಿವೆ. ಬೆಂಗಳೂರಿನ ನಂತರ ಅತಿ ದೊಡ್ಡ ನಗರ ಎಂಬ ಖ್ಯಾತಿಗೆ ಪಾತ್ರವಾದ ಹುಬ್ಬಳ್ಳಿಗೆ ಹೊಸ ಹೊಸ ಮಹಲುಗಳು ಬಂದಿರುವುದು ಶಾಪಿಂಗ್‌ ಪ್ರಿಯರಿಗೆ ಖುಷಿ ನೀಡಿದೆ. ನಗರದ ವಿವಿಧೆಡೆ ಶಾಪಿಂಗ್‌ ಸೆಂಟರ್‌ ಗಳು ತಲೆ ಎತ್ತಿದರೆ ಜನರು ಆಯಾ ಪ್ರದೇಶದಲ್ಲಿಯೇ ಮಾರ್ಕೆಟಿಂಗ್‌ ಮಾಡಲು ಅನುಕೂಲವಾಗುತ್ತದೆ. 

* ವಿಶ್ವನಾಥ ಕೋಟಿ 

ಟಾಪ್ ನ್ಯೂಸ್

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

11

Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.