ಸೈಂಟ್ ಪೀಟರ್ ಅಸೋಸಿಯೇಶನ್ ಬಾರ್ಕೂರು: ಪದಾಧಿಕಾರಿಗಳ ಆಯ್ಕೆ
Team Udayavani, Jul 12, 2017, 2:53 PM IST
ಮುಂಬಯಿ: ಸೈಂಟ್ ಪೀಟರ್ ಅಸೋಸಿಯೇಶನ್ ಬಾರ್ಕೂರು ಮುಂಬಯಿ ಇದರ 12ನೇ ವಾರ್ಷಿಕ ಮಹಾಸಭೆಯು ಜು. 9ರಂದು ಉಪನಗರ ಅಂಧೇರಿ ಪೂರ್ವದ ಮರೋಲ್ ವಿಜಯ ನಗರದ ಸೈಂಟ್ ವಿನ್ಸೆಂಟ್ ಪಲ್ಲೊಟ್ಟಿ ಇಗರ್ಜಿ ಸಭಾಗೃಹದಲ್ಲಿ ಅಸೋಸಿಯೇಶನ್‌ನ ಅಧ್ಯಕ್ಷ ಬೊನಿಫಸ್ ಸಿಕ್ವೇರಾ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಇದೇ ಸಂದರ್ಭದಲ್ಲಿ 2017-2020ನೇ ಸಾಲಿಗೆ ನೂತನ ಅಧ್ಯಕ್ಷರನ್ನಾಗಿ ಐವಾನ್ ರೆಬೆಲ್ಲೋ ಅವರನ್ನು ನೇಮಿಸಲಾಯಿತು.
ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ನೋರ್ಮಾನ್ ಟಿ.ಡಿ’ಸೋಜಾ ಮತ್ತು ಆ್ಯಂಟನಿ ಗೊನ್ಸಾಲ್ವಿಸ್, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಎರಿಕ್ ಕಾರ್ವಲೋ, ಗೌರವ ಕೋಶಾಧಿಕಾರಿಯಾಗಿ ಜೋನ್ ಗೊನ್ಸಾಲ್ವಿಸ್, ಜತೆ ಕಾರ್ಯದರ್ಶಿಯಾಗಿ ಜೊçಲನ್ ಫೆರ್ನಾಂಡಿಸ್, ಜತೆ ಕೋಶಾಧಿಕಾರಿಯಾಗಿ ವಿನ್ಸೆಂಟ್ ಫುರ್ಟಾಡೋ, ಸಂಘಟಕರಾಗಿ ಆರ್ಥರ್ ಮೆಂಡೋನ್ಸಾ, ಜನಸಂಪರ್ಕಾಧಿಕಾರಿ ಯಾಗಿ ಜೋಸೆಫ್ ಡಿ’ಅಲ್ಮೇಡಾ, ಆಂತರಿಕ ಲೆಕ್ಕ ಪರಿಶೋಧಕರಾಗಿ ಮೈಕಲ್ ಡಿ’ಅಲ್ಮೇಡಾ ಅವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಐವನ್ ಸುವಾರಿಸ್, ಮೈಕಲ್ ಸಿಕ್ವೇರಾ, ಜೋಸನ್ ಮಾರ್ಟಿಸ್, ಮೈಕಲ್ ಅಲ್ಮೇಡಾ, ಜೆಸಿಂತಾ ಡಿ’ಅಲ್ಮೇಡಾ, ನ್ಯಾನ್ಸಿ ರೋಚ್, ಐಡಾ ರೋಚ್, ಆ್ಯಂಟನಿ ಡಾಯಸ್, ಮೇಬಲ್ ಡಿ’ಸೋಜಾ, ರೋಲ್‌ಫಿನ್ ಡಿ’ಸೋಜಾ, ವಿಲ್ಫೆ†àಡ್ ಸಿಕ್ವೇರಾ, ರೋಹನ್ ರೋಚ್, ಜೋಲ್ವಿನ್ ಫುರ್ಟಾಡೊ ಅವರನ್ನು ನೇಮಿಸಲಾಯಿತು.
ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಫೆೆಲಿಕ್ಸ್ ಬಾರ್ನ್ಸ್ ಆಯ್ಕೆ ಪ್ರಕ್ರಿಯೆ ನಡೆಸಿ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಪಟ್ಟಿ ಪ್ರಕಟಿಸಿದರು. ಬಳಿಕ ನೂತನ ಅಧ್ಯಕ್ಷರನ್ನು ನಿರ್ಗಮನ ಅಧ್ಯಕ್ಷ ಬೊನಿಫಸ್ ಸಿಕ್ವೇರಾ ಅವರು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. ಮತ್ತೋರ್ವ ಮಾಜಿ ಅಧ್ಯಕ್ಷ ರಿಚಾರ್ಡ್ ಕರ್ವಾಲೋ ಅವರು ನಿರ್ಗಮನ ಅಧ್ಯಕ್ಷರಿಗೆ ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.