ಸರ್ವಧರ್ಮ ಪಾಲಕ ದೈವಕ್ಯ ಶ್ರೀ ನಿರಂಜನ ಸ್ವಾಮೀಜಿಗೆ ಗುರುವಂದನೆ
Team Udayavani, Jul 12, 2017, 2:58 PM IST
ಮುಂಬಯಿ: ಮಹಾಲಕ್ಷ್ಮೀಯ ಸಾತ್‌ರಸ್ತಾ ಜಾಕೋಬ್ ಸರ್ಕಲ್‌ನ ಮಂಗಳೂರು ಬಜ್ಪೆಯ ಶ್ರೀ ಕ್ಷೇತ್ರ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನವರ ಆರಾಧಕ ದೈವಕ್ಯ ಶ್ರೀ ನಿರಂಜನ ಸ್ವಾಮಿಗೆ ಜು. 9ರಂದು ಗುರುಪೂರ್ಣಿಮೆಯ ಶುಭಾವಸರದಲ್ಲಿ ನೆರೆದ ಅಪಾರ ಸಂಖ್ಯೆಯ ಭಕ್ತ ಶಿಷ್ಯವೃಂದ ಹಾಗೂ ಅಭಿಮಾನಿಗಳು ಗುರುವಂದನೆ ಸಲ್ಲಿಸಿದರು.
ಪ್ರಾರಂಭದಲ್ಲಿ ಶ್ರೀ ಅಂಬಿಕಾ ಅನ್ನಪೂರ್ಣೆàಶ್ವರಿ ದೇವಿಗೆ ಪೂಜೆಯನ್ನು ನೆರವೇರಿಸಿ ಬಳಿಕ ದೈವಕ್ಯ ಶ್ರೀ ನಿರಂಜನ ಸ್ವಾಮೀಜಿ ಅವರ ಅಲಂಕೃತ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಗುರುವಂದನೆ ಸಲ್ಲಿಸಲಾಯಿತು.
ಶ್ರೀ ನಿರಂಜನ ಸ್ವಾಮೀಜಿಯವರು ನಮ್ಮನ್ನಗಲಿದರೂ ಅವರು ಅಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳುತ್ತಾ ಆ ದಿನಗಳಲ್ಲೇ ಪವಾಡ ಪುರುಷರಾಗಿದ್ದರು. ಶಾರೀರಿಕವಾಗಿ ಕಣ್ಮರೆಯಾದ ಮಾತ್ರಕ್ಕೆ ನಾವು ಗುರುಗಳನ್ನು ಕಳೆದುಕೊಳ್ಳಲಾರೆವು. ಅವರೋರ್ವ ಶ್ರೀ ಅನ್ನಪೂರ್ಣೆàಶ್ವರಿ ಮಾತೆಯ ರೂಪದ ಶಕ್ತಿಯಾಗಿ ಲೋಕ ಹಿತದ ಕರ್ಮಯೋಗಿ ಎಣಿಸಿದ್ದರು. ಮಹಾ ಅತಿಮಾನವತಾ ಶಕ್ತಿ, ದೈವ ಭಕ್ತಿಯ ಪವಿತ್ರ ಪಥದಲ್ಲಿ ಸಾಗಿ ವಿದ್ಯಾದಾತ, ಅನ್ನದಾತ, ಸರ್ವಧರ್ಮ ಪಾಲಕ, ಯಕ್ಷಗಾನ ಪೋಷಕ, ಶಿಕ್ಷಣಪ್ರೇಮಿ ಎಂದೆಣಿಸಿ ನಮ್ಮಂತಹ ಶಿಷ್ಯವೃಂದಕ್ಕೆ ಗುರುವರ್ಯರಾಗಿದ್ದರು. ನಾರಾಯಣ ಗುರುಗಳ ತತ್ವಗಳನ್ನು ಅನುಸರಿಸಿ ಬಾಳುತ್ತಿದ್ದ ಸ್ವಾಮೀಜಿ ಭಕ್ತ ಜನತೆಯಲ್ಲಿ ಯಾವುದೇ ಜಾತಿಮತ ಧರ್ಮಕ್ಕಿಂತ ಮನವೀಯ ಧರ್ಮಕ್ಕೆ ಮಹತ್ವವಿತ್ತು. ಅವರು ನಿಜವಾದ ಭಾರತೀಯ ಸಂಸ್ಕೃತಿಯ ಪರಿಪಾಲಕರಾಗಿದ್ದರು. ಸರ್ವ ಧರ್ಮ ಪಾಲಕರಾಗಿದ್ದ ಸ್ವಾಮೀಜಿ ಸರ್ವ ಧರ್ಮೀಯರನ್ನೂ ಗೌರವದಿಂದ ಕಾಣುತ್ತಿದ್ದರು. ಇಂತಹ ಧೀಮಂತ ಚೇತನವು ನಮ್ಮೆಲ್ಲರ ಪಾಲಿಗೆ ಸದಾ ಗುರುಗಲೇ ಆಗಿರುತ್ತಾರೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಡುಪಿ ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾಕೂìರು ಇದರ ಆಡಳಿತ ಮೊಕ್ತೇಸರ, ಮನಿಫೋಲ್ಡ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಇದರ ಕಾರ್ಯಾಧ್ಯಕ್ಷ, ಭಂಡಾರಿ ಮಹಾ ಮಂಡಲದ ಪೂರ್ವಾಧ್ಯಕ್ಷ ಕಡಂದಲೆ ಸುರೇಶ್ ಎಸ್. ಭಂಡಾರಿ ತಿಳಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ ಭಟ್ ಪಾದುಕಾ ಪೂಜೆ, ಮಹಾ ಆರತಿ ನೆರವೇರಿಸಿ ಉಪಸ್ಥಿತರಿದ್ದ ಭಕ್ತಾಭಿಮಾನಿಗಳನ್ನು ಅನುಗ್ರಹಿಸಿದರು. ಹಿರಿಯ ಉದ್ಯಮಿ ಕೆ.ಟಿ. ಕುಂದರ್, ದೇವಸ್ಥಾನ ಸಮಿತಿಯ ನಾರಾಯಣ ಎನ್. ಪೂಜಾರಿ, ಮಹೇಶ್ ಎನ್. ಪೂಜಾರಿ, ಸುಮಿತ್ರಾ ಎಂ. ಪೂಜಾರಿ, ಉಮೇಶ್ ಪೂಜಾರಿ, ಸೇವಾಕರ್ತರಾದ ಶ್ರೀಧರ ಪೂಜಾರಿ, ಅನೀಲ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದು ವಿಶೇಷ ಪೂಜೆ ನೆರವೇರಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.