ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದ ಗ್ರಾಮೀಣರು
Team Udayavani, Jul 13, 2017, 2:45 AM IST
ಕುಂಬಳೆ: ಪ್ರಕೃತಿ ಫಲ ನೀಡಿದಲ್ಲಿ ಮಾತ್ರ ಮನುಷ್ಯ ಬದುಕಲು ಸಾಧ್ಯ. ಯಾಂತ್ರಿಕ ಬದುಕು ಹೆಚ್ಚಿದಂತೆ ಪ್ರಕೃತಿಯ ಮತ್ತು ನಿಸರ್ಗದ ಬಗೆಗಿನ ಅರಿವು ಇಂದಿನ ಯುಪೀಳಿಗೆಯಲ್ಲಿ ಕಡಿಮೆಯಾಗುತ್ತಿದೆ. ಇಂದು ಭತ್ತದ ಬೇಸಾಯ, ಮಣ್ಣಿನ ಆಟ, ಕೃಷಿ ಜೀವನದಿಂದ ವಿಮುಖರಾಗುತ್ತಿದ್ದೇವೆ. ರಾಜ್ಯ ಸರಕಾರ ಇದೀಗ ಕೃಷಿ ಸಂಸ್ಕೃತಿಯ ಉಳಿವಿಗೆ ಮಳಪೊಲಿಮ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮತ್ತೆ ಅವುಗಳನ್ನು ಮರುಕಳಿಸುವಂತೆ ಮಾಡಿದೆ ಎಂದು ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್ ರಝಾಕ್ ಹೇಳಿದರು.
ಕುಂಬಳೆ ಗ್ರಾಮ ಪಂಚಾಯತ್‌ನ ಇಚ್ಲಂಪಾಡಿ ಕುತ್ತಿಕ್ಕಾರು ವಿಶಾಲ ಗದ್ದೆಯಲ್ಲಿ ಪಂಚಾಯತ್ ಮತ್ತು ಕುಟುಂಬಶ್ರೀ ಸಿಡಿಎಸ್ ಕ್ಲಬ್‌ಗಳ ಜಂಟಿ ಅಶ್ರಯದಲ್ಲಿ ಮಂಗಳವಾರ ನಡೆದ “ಮಳಪೊಲಿಮ 2017′ ಎಂಬ ಗ್ರಾಮೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕರು ಮಾತನಾಡಿದರು.
ಸ್ವತಃ ನಮ್ಮ ಮನೆಯ ಗದ್ದೆಯಲ್ಲಿ ಉಳುವ ಕೆಲಸ, ಓ ಬೇಲೆ ಹಾಡುವ ಮೂಲಕ ನೇಜಿ ನೆಡುವ ಕೆಲಸವನ್ನು ಯೌವನದಲ್ಲಿ ಅತ್ಯಂತ ಉತ್ಸಾಹದಿಂದ ಮಾಡಿದ ಅನುಭವವಿದೆ. ಇದು ಬದುಕುವ ಶೈಲಿಯನ್ನು ಉತ್ತಮವಾಗಿ ಕಲಿಸಿಯೂ ಕೊಡುತ್ತದೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಈ ಎಲ್ಲ ದೃಶ್ಯಗಳು ಇಂದು ಕಣ್ಮುಂದೆಯಿಂದ ಮರೆಯಾಗುತ್ತಿದೆ. ಕೆಸರಿನಾಟದಲ್ಲಿ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಅವರು ಹಾರೈಸಿದರು.
ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎಲ್. ಪುಂಡರೀಕಾಕ್ಷ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಂಬಳೆ ಪಂಚಾಯತ್‌ನ ಎಲ್ಲಾ ಕುಟುಂಬ ಶ್ರೀ ಮತ್ತು ಸಿಡಿಎಸ್ ಸದಸ್ಯೆಯರು ಅತ್ಯಂತ ಉತ್ಸಾಹದಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಕೃಷಿ ನಮ್ಮ ದೇಶದ ಬೆನ್ನೆಲುಬು. ಇದನ್ನು ಮರೆತಲ್ಲಿ ದೇಶಕ್ಕೆ ಹಿನ್ನಡೆಯಾಗಲಿದೆ. ಪ್ರತಿ ಮನೆಯವರೂ ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಹಿರಿಯ ಕೃಷಿಕರಾದ ಚೆನ್ನಯ ಪೂಜಾರಿ, ಶಾಂತ ಕುಮಾರಿ, ಸೀತು, ಸುಂದರಿ ಮತ್ತು ಸಂಜೀವಿ ಅವರನ್ನು ಗೌರವಿಸಲಾಯಿತು.
ಮಳಪೊಲಿಮದ ಕುರಿತು ಕುಟುಂಬ ಶ್ರೀ ಮಿಷನ್‌ನ ಡಿ.ಎಂ.ಸಿ. ರಂಜಿತ್ ಮಾಹಿತಿ ನೀಡಿದರು.
ಅತಿಥಿಗಳಾಗಿ ಪಂಚಾಯತ್ ಆರೋಗ್ಯ ವಿದ್ಯಾಭ್ಯಾಸ ಸ್ಟ್ಯಾಂಡಿಂಗ್ ಕಮಿಟಿ ಚೇರ್‌ಮನ್ ಎ.ಕೆ. ಆರೀಫ್, ಸದಸ್ಯೆ ಅರುಣ ಎಂ ಆಳ್ವ, ಗ್ರಾ.ಪಂ.ಸದಸ್ಯ ಸುಕೇಶ್ ಭಂಡಾರಿ, ಗಣೇಶ್ ಭಂಡಾರಿ ಕುತ್ತಿಕ್ಕಾರು, ಪಂಚಾಯತ್ ಮಾಜಿ ಉಪಾಧ್ಯಕ್ಷ ಮಂಜುನಾಥ ಆಳ್ವ ಮಡ್ವ ಮೊದಲಾದವರು ಉಪಸ್ಥಿತರಿದ್ದರು. ಸಿಡಿಎಸ್ ಚೇರ್‌ಪರ್ಸನ್ ಸಬೂರ ಎಂ. ಸ್ವಾಗತಿಸಿದರು, ವೈಸ್ ಚೇರ್‌ಪರ್ಸನ್ ಚಂದ್ರಾವತಿ ವಂದಿಸಿದರು. ಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.
ಬೆಳಗ್ಗಿನಿಂದ ಸಂಜೆ ತನಕ ಮಳೆಪ್ಪೊಲಿಮ ಗ್ರಾಮೋತ್ಸವ ಕಾರ್ಯ ಕ್ರಮ ಗ್ರಾಮೀಣ ಜಾನಪದ ಕಲೆ ಮತ್ತು ಸ್ಪರ್ಧೆಗಳನ್ನು ಅನಾವರಣಗೊಳಿಸಿತು.
ಸಮಾರಂಭದ ಬಳಿಕ ಕೆಸರು ಗದ್ದೆಯಲ್ಲಿ ಲಿಂಬೆ ಚಮಚ ಓಟ, ಬೆಲೂನ್ ಊದುವುದು, ಸೊಪ್ಪಿನ ಆಟ, ಚೆಂಡೆಸತ, ಹಗ್ಗಜಗ್ಗಾಟ, ಗ್ರಾಮೀಣ ಹಾಡು, ಮಾಪ್ಪಿಳ್ಳಪಾಟ್, ಓ ಬೇಲೆ ಹಾಡು, ಪಾಡªನ ಮುಂತಾದ ವಿವಿಧ ಆಕರ್ಷಕ ಸ್ಪರ್ಧೆಗಳು ಮನರಂಜಿಸಿದವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕುಂಬಳೆ ಪಂಚಾಯತ್ ಉಪಾಧ್ಯಕ್ಷೆ ಗೀತಾ ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದರು.
ಮಾಜಿ ಉಪಾಧ್ಯಕ್ಷ ಎಂ. ಮಂಜುನಾಥ ಆಳ್ವ ಬಹುಮಾನ ವಿತರಿಸಿದರು. ಗಣ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.