ಸಮುದ್ರ ಪೂಜೆ ಮುಗಿಸಿ ಕಡಲಿಗಿಳಿದ ನಾಡದೋಣಿಗಳು
Team Udayavani, Jul 13, 2017, 1:20 AM IST
ಕುಂದಾಪುರ: ಬಹಳಷ್ಟು ನಿರೀಕ್ಷೆಯ ನಾಡದೋಣಿ ಮೀನುಗಾರಿಕೆಗೆ ಬುಧವಾರ ಚಾಲನೆ ದೊರಕಿದೆ. ನಾಡದೊಣಿ ಮೀನುಗಾರಿಕೆ ಆರಂಭ ಆಳ ಸಮುದ್ರ ಮೀನುಗಾರಿಕೆಗೆ ವಿರಾಮ ನೀಡುತ್ತಿದ್ದಂತೆ ನಾಡದೊಣಿ ಮೀನುಗಾರಿಕೆ ಆರಂಭವಾಗಬೇಕಾಗಿತ್ತು. ಆದರೆ ಸಮುದ್ರದಲ್ಲಿ ಅಗತ್ಯ ಪ್ರಮಾಣದ ತೂಫಾನ್ ಕಂಡು ಬಾರದೇ ಇರುವುದರಿಂದ ನಾಡದೋಣಿ ಮೀನುಗಾರಿಕೆಗೆ ಕೊಂಚ ತಡವಾದರೂ ಬುಧವಾರ ಮೀನುಗಾರರು ಸಂತಸದಿಂದ ತಮ್ಮ ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳಿದರು.
ಸಮುದ್ರ ಪೂಜೆಯ ಬಳಿಕ ಚಾಲನೆ
ಮರವಂತೆಯಲ್ಲಿ ಮಂಗಳವಾರ ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ವತಿಯಿಂದ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿ ಅನಂತರ ಸಮುದ್ರ ಪೂಜೆ ನಡೆಸಲಾಯಿತು. ಬುಧವಾರ ಗಂಗೊಳ್ಳಿಯ ಮಡಿ ತೀರದಲ್ಲಿಯೂ ಕೂಡ ಸಮುದ್ರ ಪೂಜೆಯ ಬಳಿಕ ನಾಡದೋಣಿ ಮೀನುಗಾರಿಕೆಗೆ ಚಾಲನೆ ನೀಡಲಾಯಿತು.
ಆಶಾವಾದದಿಂದ
ಸಮುದ್ರದಲ್ಲಿ ತೂಫಾನ್ ಎದ್ದರೆ ಮಾತ್ರ ಮೀನುಗಳು ಹೇರಳವಾಗಿ ಲಭ್ಯ ಆಗುತ್ತವೆ. ಕಳೆದ ಬಾರಿ ನಾಡದೋಣಿ ಮೀನುಗಾರಿಕೆ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಆದರೆ ಈ ಬಾರಿಯಾದರೂ ಉತ್ತಮ ಮೀನುಗಾರಿಕೆಯ ಆಶಾಭಾವನೆಯೊಂದಿಗೆ ನಾಡದೋಣಿ ಮೀನುಗಾರರು ಕಡಲಿಗೆ ಇಳಿದಿದ್ದಾರೆ. ಒಟ್ಟಿನಲ್ಲಿ ಉತ್ತಮ ಮೀನು ಬೇಟೆಯ ನಿರೀಕ್ಷೆಯಲ್ಲಿ ಮೀನುಗಾರರು ಕಡಲಿಗೆ ಇಳಿದಿದ್ದಾರೆ.
ಸಾಂಪ್ರದಾಯಿಕ ಮೀನುಗಾರಿಕೆ
ಗಂಗೊಳ್ಳಿಯ ಲೈಟ್ಹೌಸ್ ಬಳಿಯ ಮಡಿ ಪರಿಸರದಲ್ಲಿ ಹಾಗೂ ಮರವಂತೆಯ ಹೊರ ಬಂದರು ಪ್ರದೇಶದಲ್ಲಿ ಪ್ರತಿವರ್ಷ ನಡೆಯುತ್ತಿರುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಮೀನುಗಾರರು ತೆರಳುವ ದೃಶ್ಯ ಕಂಡು ಬಂತು ಉಡುಪಿಯ ಗಡಿ ಭಾಗವಾದ ಶಿರೂರಿನಿಂದ ಸಾಸ್ತಾನದ ಕೋಡಿಯ ತನಕದ ಸಾವಿರಾರು ಮೀನುಗಾರರು ಮರವಂತೆ ಹಾಗೂ ಗಂಗೊಳ್ಳಿಯ ಮಡಿ ಪ್ರದೇಶದಲ್ಲಿ ನಾಡದೋಣಿ ಮೀನುಗಾರಿಕೆ ನಡೆಸುತ್ತಿದ್ದಾರೆ.
– ಉದಯ ಆಚಾರ್ ಸಾಸ್ತಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.