“ಸರ್ವರೋಗಕ್ಕೂ ಗೋವಿನ ಹಾಲು ಉತ್ತಮ ಔಷಧ’


Team Udayavani, Jul 13, 2017, 2:45 AM IST

1207SLE-8.jpg

ಸುಳ್ಯ: ಕಿನ್ನಿಗೋಳಿ ಎಳತ್ತೂರು ಶ್ರೀಶಕ್ತಿ ದರ್ಶನ ಯೋಗೇಶ್ವರ ಇವರು ಪ್ರಸ್ತುತ ಪಡಿಸುವ ಕಲಾವಿದ ಕೆ.ವಿ. ರಮಣ್‌ ನಿರ್ದೇಶನದ ವಿಶ್ವಮಾತಾ- ಗೋಮಾತಾ ನೃತ್ಯ ನಾಟಕ ಪ್ರದರ್ಶನ ಸುಳ್ಯದ ಶ್ರೀ ದುರ್ಗಾ ಪರಮೇಶ್ವರೀ ಎಜುಕೇಶನಲ್‌ ಟ್ರಸ್ಟ್‌ ಮತ್ತು ಚಾರಿಟೆಬಲ್‌ ಟ್ರಸ್ಟ್‌  ಸಹಭಾಗಿತ್ವದಲ್ಲಿ  ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ಕಲಾ ಮಂದಿರದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಯೋಗಾಚಾರ್ಯ ಶ್ರೀದೇವ ಬಾಬಾ ಅವರು ಉದ್ಘಾಟಿಸಿ, ಗೋವು ರಾಷ್ಟ್ರದ ಸಂಪತ್ತು. ವಿಶ್ವಕ್ಕೇ ಅವಳು ಮಾತೆ. ಎಲ್ಲ ಅನಾರೋಗ್ಯಗಳಿಗೆ ಉತ್ತಮವಾದ ಔಷಧಿ ಭಾರತೀಯ ಗೋವುಗಳು ಕೊಡುವ ಹಾಲು ಎಂಬುದಾಗಿ ಗ್ರಂಥದಲ್ಲಿ ತಿಳಿಸಿದ್ದಾರೆ. ಅತ್ಯಂತ ಶ್ರೇಷ್ಠವಾದ ಔಷಧ ಗೋರೋಚನ. ಇದು ಕಪಿಲ ಗೋವಿನ ಕೊಂಬಿನಲ್ಲಿದೆ. ಇದನ್ನು ತೇದು ಪ್ರತೀ ಮೂವತ್ತು ನಿಮಿಷಕ್ಕೊಮ್ಮೆ ನಾಲಿಗೆಗೆ ಸವರಿದಾಗ ಸಾವಿನ ಅಂಚಿನಲ್ಲಿದ್ದ ವ್ಯಕ್ತಿಯ ಪ್ರಾಣ ದೇಹಬಿಟ್ಟು ಹೋಗದಂತೆ ತಡೆಯಲ್ಪಡುತ್ತದೆ. ಗೋಘೃತ ಪಂಚಗವ್ಯ ಔಷಧಿ ಅನೇಕ ರೋಗಗಳಿಗೆ ರಾಮಬಾಣ. ಪ್ರತಿಯೊಂದು  ಮನೆಯವರು ದೇಶೀಯ ಗೋವು ಸಾಕುವತ್ತ ಮನಸ್ಸು ಮಾಡಬೇಕೆಂದರು.

ಕುಟುಂಬದ ಸದಸ್ಯನಾಗಬೇಕು
ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅವರು, ಗೋವಿನ ಬಗ್ಗೆ  ಮಾತನಾಡುವುದನ್ನು ಬಿಟ್ಟು ಅದನ್ನು ಸಾಕುವುದರ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಗೋವು ನಮ್ಮ ಕುಟುಂಬ ಜೀವನದ ಸದಸ್ಯನಾಗಬೇಕೆಂದರು.

ನಿವೃತ್ತ ಪ್ರಾಂಶುಪಾಲ ಪ್ರೊ| ಬಾಲಚಂದ್ರ ಗೌಡ ಅವರು ಮಾತನಾಡಿ, ಹಿಂದೆ ಹೆಣ್ಣು  ಒಪ್ಪಿಸಿಕೊಡುವಾಗ ದನದ ಕರುವನ್ನು ಜತೆಯಾಗಿ ಕಳುಹಿಸಿಕೊಡುತ್ತಿದ್ದರು. ಈ ಸಂಪ್ರದಾಯವನ್ನು ಮತ್ತೆ ಮುಂದುವರಿಸಿದರೆ ಗೋಸಂತತಿ ವೃದ್ಧಿಯಾಗಬಹುದು ಎಂದರು.

ಶ್ರೀದುರ್ಗಾಪರಮೇಶ್ವರೀಎಜುಕೇಶನ್‌ ಮತ್ತು  ಚಾರಿ ಟೆಬಲ್‌ ಟ್ರಸ್ಟ್‌ ಅಧ್ಯಕ್ಷ  ವೈಕುಂಠ ಪ್ರಭು ಉಪಸ್ಥಿತರಿದ್ದರು.
ರವಿಪ್ರಕಾಶ್‌ ಅಟೂÉರು ಸ್ವಾಗತಿಸಿ, ಡಾ|ಅನುಪಮಾ ವಂದಿಸಿದರು. ಡಾ|ಶಶಿಧರ ಹಾಸನಡ್ಕ ನಿರೂಪಿಸಿದರು. ಈ ಸಂದರ್ಭದಲ್ಲಿ ದೇಶಿಯ ಗೋವುಗಳನ್ನು ಆಸಕ್ತಿಯಿಂದ ಸಾಕುತ್ತಿರುವವರನ್ನು ಗೌರವಿಸಲಾಯಿತು. 

ಅನಂತರ ಕೆ. ವಿ.ರಮಣ್‌ ಮತ್ತು ಡಾ| ಎಂ.ಪ್ರಭಾಕರ ಜೋಶಿ ರಚಿಸಿದ ಬಹುಮಾಧ್ಯಮ ಬಳಕೆಯ ಅದ್ದೂರಿಯ ದ್ವಿ ಭಾಷಾ ನೃತ್ಯ ನಾಟಕ ವಿಶ್ವಮಾತಾ ಗೋಮಾತಾ ಪ್ರದರ್ಶನಗೊಂಡಿತು.     

ಜಾಗೃತಿ
ಕಲಾವಿದ ಕೆ.ವಿ. ರಮಣ್‌ ಅವರು ಮಾತನಾಡಿ, ವಿಶ್ವಮಾತಾ-ಗೋಮಾತಾ ನೃತ್ಯ ನಾಟಕ ನಿರ್ಮಾಣವಾಗಿದ್ದು, ದೇಶ ವಿದೇಶಗಳ ಪ್ರದರ್ಶನದ ಮೂಲಕ ಗೋಪ್ರಜ್ಞೆಯ ಜಾಗೃತಿ ಮೂಡಿಸಬೇಕು ಎಂಬುದೇ ನಮ್ಮ ಮುಖ್ಯ ಉದ್ದೇಶ ಎಂದು ವಿವರಿಸಿದರು.

ಟಾಪ್ ನ್ಯೂಸ್

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

16

Pro Kabaddi: ಗುಜರಾತ್‌ಗೆ ರೋಚಕ ಜಯ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.