ಪ್ರವಾಸೋದ್ಯಮವನ್ನು ಉತ್ತೇಜಿಸುವ ಕಾರ್ಯವಾಗಬೇಕಿದೆ
Team Udayavani, Jul 13, 2017, 2:55 AM IST
ದೇರಳಕಟ್ಟೆ: ಉನ್ನತ ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಗೊಳ್ಳುತ್ತಿರುವ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಎದುರುಗಡೆಯ ಕಂಫರ್ಟ್ಸ್ ಇನ್ ಕಟ್ಟಡದಲ್ಲಿ ಪ್ರವಾಸೋದ್ಯಮದ ಪ್ಯಾಕೇಜ್ ಸಹಿತ ವಿಮಾನ, ರೈಲು, ಬಸ್, ಟಿಕೆಟ್ ಬುಕಿಂಗ್ ನಿರ್ವಹಿಸುವ ಸಾಯಿ ಶ್ರೀ ಟ್ರಾವೆಲ್ಸ್ ಬುಧವಾರ ಶುಭಾರಂಭಗೊಂಡಿತು. ಮಂಗಳೂರಿನ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಸಾಯಿ ಶ್ರೀ ಟ್ರಾವೆಲ್ಸ್ ಉದ್ಘಾಟಿಸಿ ಉನ್ನತ ಶಿಕ್ಷಣ ಕ್ಷೇತ್ರದ ಕೇಂದ್ರವಾಗುತ್ತಿರುವ ಅತ್ತ ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ದೇರಳಕಟ್ಟೆಯ ಈ ಭಾಗದಲ್ಲಿ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಸಾಯಿ ಶ್ರೀ ಟ್ರಾವೆಲ್ಸ್ ಸಂಸ್ಥೆಯನ್ನು ಸುಸಜ್ಜಿತವಾಗಿ ಪ್ರಾರಂಭಿಸುವುದರೊಂದಿಗೆ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಿದಂತಾಗಿದೆ ಎಂದರು. ದೂರದ ತಿರುಪತಿ, ಮಂತ್ರಾಲಯ ಹಾಗೂ ಶಿರಡಿ ಕ್ಷೇತ್ರ ದರ್ಶನಕ್ಕೆ ಕರೆದೊಯ್ಯುವ ಸೇವೆಯನ್ನು ಒದಗಿಸಿರುವ ಕಾರ್ಯ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮವನ್ನು ಪ್ರಾರಂಭಿಸುವ ಕಾರ್ಯ ಈ ಸಂಸ್ಥೆಯಿಂದಾಗಲಿ ಎಂದು ಶುಭ ಹಾರೈಸಿದರು.
ಸಾಯಿ ಶ್ರೀ ಟ್ರಾವೆಲ್ಸ್ ಸಂಸ್ಥೆಯ ಮಾಲೀಕರಾದ ರಮಾನಾಥ ಶೆಟ್ಟಿ ಮಾತನಾಡಿ, ಆರೋಗ್ಯ ಶಿಕ್ಷಣದೊಂದಿಗೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಂಗಳೂರಿನಂತಹ ಪಟ್ಟಣಗಳಲ್ಲಿ ಸಿಗುವ ಸೇವೆಯನ್ನು ದೇರಳಕಟ್ಟೆಯಂತಹ ಬೆಳೆಯುತ್ತಿರುವ ಪ್ರದೇಶದಲ್ಲಿ ಆಸ್ಪತ್ರೆಗಳಿಗೆ ಬರುವ ಜನರಿಗೆ, ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ವಿಮಾನದ ಟಿಕೆಟ್, ರೈಲು, ಬಸ್ಸು, ಟೂರ್‌ಪ್ಯಾಕೇಜ್, ರಜೆ ಪ್ಯಾಕೇಜ್, ಹೊಟೇಲ್, ರೆಸಾರ್ಟ್, ಹೋಮ್ ಸ್ಟೇ, ಹನಿಮೂನ್ ಪ್ಯಾಕೇಜ್, ತಿರುಪತಿ ದರ್ಶನದ ಟಿಕೆಟ್, ಕಾರು, ಬಸ್ಸು ಬಾಡಿಗೆಗೆ, ಹಣ ವರ್ಗೀಕರಣ, ಪಾಸ್ ಪೋರ್ಟ್ ವೀಸಾ, ಪಾನ್‌ಕಾರ್ಡ್, ಹಾಗೂ ಎಲ್ಲಾ ತರಹದ ಮೊಬೈಲ್, ಟಿ.ವಿ. ರಿಚಾರ್ಜ್ ಸೇವೆಯನ್ನು ಸಂಸ್ಥೆ ನಡೆಸಲಿದ್ದು ಇದರೊಂದಿಗೆ ಪ್ರಥಮವಾಗಿ ತಿರುಪತಿ, ಶಿರಡಿ ಹಾಗೂ ಮಂತ್ರಾಲಯಕ್ಕೆ ತೆರಳಲು ಪ್ಯಾಕೇಜ್‌ಗಳನ್ನು ಅತ್ಯಂತ ಕಡಿಮೆ ದರದಲ್ಲಿ ನಿರ್ವಹಿಸಲಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಬೇಕು ಹೆಚ್ಚಿನ ಮಾಹಿತಿಗೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆ ಎದುರುಗಡೆಯ ಕಂಫರ್ಟ್ಸ್ ಇನ್ ಕಟ್ಟಡದಲ್ಲಿರುವ ಸಾಯಿ ಶ್ರೀ ಟ್ರಾವೆಲ್ಸ್ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದರು. ಈ ಸಂದರ್ಭದಲ್ಲಿ ಕಂಫರ್ಟ್ಸ್ ಇನ್ ಹೊಟೇಲಿನ ಮಾಲಕರಾದ ಚಂದ್ರಹಾಸ್ ಶೆಟ್ಟಿ, ಲಯನ್ಸ್ ಕ್ಲಬ್‌ನ ಪ್ರಸಾದ್ ರೈ ಕಲ್ಲಿಮಾರ್, ವಿಜಯ ಪ್ರಸಾದ್ ರೈ, ಮಂಜುಶ್ರೀ ಶೆಟ್ಟಿ, ಎಂ.ಸಿ.ಶೆಟ್ಟಿ, ಸಬಿತಾ ರಮಾನಾಥ್ ಶೆಟ್ಟಿ, ರಶ್ಮಿ ಆರ್. ಶೆಟ್ಟಿ , ಸಂಸ್ಥೆಯ ಪ್ರಬಂಧಕ ಮೃತ್ಯುಂಜಯ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.