ಗುರು ಪರಂಪರೆಯೇ ಶ್ರೇಷ್ಠತಮವಾದದ್ದು: ಶ್ರೀ ಧರ್ಮಪಾಲನಾಥ ಸ್ವಾಮೀಜಿ
Team Udayavani, Jul 13, 2017, 2:20 AM IST
ಮಹಾನಗರ: ‘ನಮ್ಮ ದೇಶದ ಭವ್ಯ ಪರಂಪರೆಯಲ್ಲಿ ಗುರು ಪರಂಪರೆಯೇ ಶ್ರೇಷ್ಠತಮವಾದದ್ದು. ಗುರುವಿನ ಅಂತರ್ಗತ ಶಕ್ತಿಯಿಂದ ಶಿಷ್ಯ ಪರಂಪರೆಯನ್ನು ಉನ್ನತೋನ್ನತಿಯ ಕಡೆ ಕೊಂಡೊಯ್ಯಬಹುದು. ಶಿಷ್ಯನ ಅಂತರಾಳದ ಅಜ್ಞಾನವನ್ನು ದೂರೀ ಕರಿಸುವ ಶಕ್ತಿ ಗುರುವಿನಲ್ಲಿ ಮಾತ್ರ ಇರುತ್ತದೆ. ಎಲ್ಲಿಯವರೆಗೆ ಶರಣಾಗತಿ ಮನೋಧರ್ಮವನ್ನು ಬೆಳೆಸಿಕೊಳ್ಳುವುದಿ ಲ್ಲವೋ ಅಲ್ಲಿಯವರೆಗೆ ಗುರುವಿನ ಕರುಣೆ ಸಾಧ್ಯವಾಗದು’ ಎಂದು ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಅವರು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಂಗಳೂರು ಶಾಖಾಮಠದಲ್ಲಿ ನಡೆದ ಬೆಳದಿಂಗಳ ಚಿಂತನ ಚಾವಡಿಯ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಜ್ಞಾನದ ಜ್ಯೋತಿಯನ್ನು ಹಚ್ಚಲು ಗುರು ಸ್ಥಾನದಲ್ಲಿ ಇದ್ದವರಿಗೆ ಮಾತ್ರ ಸಾಧ್ಯ. ಅಜ್ಞಾನದ ಅರಿವನ್ನು ಅರಿವು ಮೂಡಿಸುವುದರೊಂದಿಗೆ ಸನ್ಮಾರ್ಗಿಗಳಾಗಿ ಒಳ್ಳೆಯ ಸದ್ಗುಣ ಸಂಪನ್ನರಾಗಿ ಬೆಳಗಿಸುವವನು ಗುರು. ಜೀವನದ ಮುಖ್ಯ ಗುರಿಯನ್ನೇ ಮರೆತು ಪಾಪ ಪ್ರಜ್ಞೆಯಲ್ಲಿ ಸದಾ ಪರಿತಪಿಸುವ ನಿಟ್ಟಿನಲ್ಲಿ ಬದುಕಿದರೆ ಏನೂ ಪ್ರಯೋಜನವಿಲ್ಲ. ಗುರುವಿನ ಸತ್ ಸಂಗದಲ್ಲಿದ್ದವರಿಗೆ ಮಾತ್ರ ಗುರು ತತ್ವದ ಅರಿವು ಸಾಧ್ಯ ಎಂದು ಅವರು ಹೇಳಿದರು.
ಉಪನ್ಯಾಸಕರಾಗಿ ಭಾಗವಹಿಸಿದ ಚಿಂತಕ ದಾ. ಮ. ರವೀಂದ್ರ ಅವರು ಮಾತನಾಡಿ, ನಮ್ಮ ಭಾರತ ದೇಶದ ಹೊರತಾಗಿ ಪ್ರಪಂಚದ ಎಲ್ಲ ರಾಷ್ಟ್ರಗಳು ಸಾಂಸ್ಕೃತಿಕವಾದ ಬದಲಾವಣೆಗಳನ್ನು ಕಂಡಿವೆ. ಆದರೆ ಭಾರತ ದೇಶದ ಮೇಲೆ ಸತತವಾಗಿ ವಿದೇಶೀ ದಾಳಿಗಳು ನಡೆದರೂ ನಮ್ಮ ಸಂಸ್ಕೃತಿಯನ್ನು ಕಾಯ್ದುಕೊಳ್ಳುವುದು ಸಾಧ್ಯವಾಗಿರುವುದಕ್ಕೆ ನಮ್ಮ ಪೂರ್ವಜರು ಹಾಕಿ ಕೊಟ್ಟ ದಿವ್ಯ ಪರಂಪರೆಯೇ ಕಾರಣ. ಅಜ್ಞಾನ ಎಂಬ ಅಂಧಕಾರದಿಂದ ಸುಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವವನೇ ನಿಜವಾದ ಗುರು. ಆದರೆ ಇಂದು ಕೆಲವರು ಗುರುಗಳು, ಗುರೂಜಿಗಳಾಗಿ ಬಿಂಬಿತವಾಗುತ್ತಿರುವುದು ಖೇದಕರ ಎಂದರು. ಬೊಂದೇಲ್‌ನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯವರಿಂದ ಭಜನ ಕಾರ್ಯಕ್ರಮವು ನಡೆಯಿತು. ಬಿಜಿಎಸ್ ಸೇವಾಸಮಿತಿಯ ಪಿ.ಎಸ್. ಪ್ರಕಾಶ್ ಅವರು ಸ್ವಾಗತಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಸುಬ್ಬ ಕಾರಡ್ಕ ಅವರು ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.