ವಿದೇಶೀ ಶಿಕ್ಷಣದಿಂದ ಬುದ್ಧಿಯೂ ಕಲುಷಿತ: ಕೆದಿಲಾಯ ವಿಷಾದ
Team Udayavani, Jul 13, 2017, 3:45 AM IST
ಪುತ್ತೂರು: ಭಾರತ ಹೇಗಿಲ್ಲ ಅನ್ನುವುದಕ್ಕಿಂತ ಹೇಗಿದೆಯೋ ಹಾಗೆಯೇ ಇದೆ. ಭಾರತದಂತೆ ಉಳಿದುಕೊಂಡಿದೆ ಅನಿಸಿದೆ. ಇದನ್ನು ಕಾಣಲು ಹಳ್ಳಿಗಳಿಗೆ ಹೋಗಬೇಕು ಎಂಬುದು ಆರೆಸ್ಸೆಸ್‌ನ ಅಖೀಲ ಭಾರತ ಮಾಜಿ ಹಿರಿಯ ಪ್ರಚಾರಕ್ ಸೀತಾರಾಮ ಕೆದಿಲಾಯ ಅವರ ಅಭಿಪ್ರಾಯ.
ಪುತ್ತೂರು ಮೂಲದವರಾದ ಕೆದಿಲಾಯ ಅವರು ಕಾಲ್ನಡಿಗೆಯಲ್ಲಿ 23,100 ಕಿ.ಮೀ. ಭಾರತ ಪರಿಕ್ರಮ ಯಾತ್ರೆಯನ್ನು ಮುಗಿಸಿ ಬುಧವಾರ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪತ್ರಕರ್ತರ ಜತೆ ತಮ್ಮಯಾತ್ರೆಯ ಅನುಭವ ಹಂಚಿಕೊಂಡರು.
ಎಲ್ಲವೂ ವಿದೇಶಿ
ವಿದೇಶೀ ಶಿಕ್ಷಣ ಪದ್ಧತಿಯನ್ನು ಅನುಸರಿಸುತ್ತಿರುವುದರಿಂದ ಇಂದು ಆರ್ಥಿಕ ವ್ಯವಸ್ಥೆ, ಶಿಕ್ಷಣ, ಜೀವನ ಶೈಲಿ ಎಲ್ಲವೂ ವಿದೇಶೀ ಮಯವಾಗಿದೆ. ನಮ್ಮ ಬುದ್ಧಿಯನ್ನೂ ಒಳಗೊಂಡಂತೆ ನೀರು, ಭೂಮಿ ಎಲ್ಲವೂ ಕಲುಷಿತಗೊಂಡಿವೆ. ಆದರೆ ಇದನ್ನೇ ಪ್ರಗತಿ ಎನ್ನಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿ ಸಿದರು.
ಸಲಹೆ ಪತ್ರ
25 ರಾಜ್ಯಗಳ ಭೇಟಿ ಸಂದರ್ಭದಲ್ಲಿ ಅಲ್ಲಿನ ಮುಖ್ಯಮಂತ್ರಿಗಳಿಗೆ ಪತ್ರ ನೀಡುತ್ತಿದ್ದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ರಾಜ್ಯಗಳಿಗೆ ಭೇಟಿ ನೀಡಿದಾಗ ಅಲ್ಲಿ ಕಂಡ ಒಳ್ಳೆಯ ಸಂಗತಿ ಮತ್ತು ಸಮಸ್ಯೆಗಳ ಕುರಿತು ಸಲಹೆಯ ಪತ್ರವನ್ನು ಬರೆದಿದ್ದೇನೆ ಎಂದು ತಿಳಿಸಿದರು.
ಹಳ್ಳಿಯ ಕಡೆಗೆ ಹೋಗಬೇಕು
ಯಾತ್ರೆ ಸಮಾಪ್ತಿಯಾದ ಬಳಿಕದ ತಮ್ಮ ನಡೆಯ ಕುರಿತು ಯಾವುದೇ ನಿರ್ಧಾರ ಹೊಂದಿಲ್ಲ. ಯಾತ್ರೆ ಆರಂಭಿ
ಸುವ ಸಂದರ್ಭದಲ್ಲೂ ಯಾವುದೇ ಪೂರ್ವ ನಿರ್ಧಾರಗಳನ್ನು ಹೊಂದಿರಲಿಲ್ಲ. ನಡೆಯ ಮೂಲಕ ಎಲ್ಲರೂ ಹಳ್ಳಿಯ ಕಡೆಗೆ ಹೋಗಬೇಕು ಎಂದರು.
ಈ ಸಂದರ್ಭದಲ್ಲಿ ಆರೆಸ್ಸೆಸ್ ಮಂಗಳೂರು ವಿಭಾಗ ಕಾರ್ಯಕಾರಿಣಿ ಸದಸ್ಯ ಅಚ್ಯುತ ನಾಯಕ್, ಮಂಗಳೂರು ವಿಭಾಗ ಪ್ರಚಾರಕ್ ಪ್ರಮುಖ್ ಕೃಷ್ಣಪ್ರಸಾದ್, ಸ್ವಯಂಸೇವಕ ಸೂರ್ಯನಾರಾಯಣ ರಾವ್ ಶಿಶಿಲ, ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯೆ ಡಾ| ಸುಧಾ ಎಸ್. ರಾವ್ ಮೊದಲಾದವರಿದ್ದರು.
ಯೋಗ ಜೀವನವೇ ಶ್ರೇಷ್ಠ
ಭೋಗವಾದ, ಉಪಭೋಗವಾದ ವಿದೇಶಿ ಶೈಲಿ. ಇದರ ಅನುಷ್ಠಾನದಿಂದ ರೋಗಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಈ ಕಾರಣದಿಂದಲೇ ಅಮೆರಿಕ ಆಧುನಿಕ ವಿಕಾಸವನ್ನು ಹೊಂದಿದ್ದರೂ ರೋಗಗಳಿಗೆ ದಾಸನಾಗಿದೆ. ಆತ್ಮಹತ್ಯೆ ಪ್ರಕರಣಗಳೂ ಹೆಚ್ಚಾಗಿವೆ. ಜೀವನದ ನೆಮ್ಮದಿ, ಶಾಂತಿಗಾಗಿ ಯೋಗ ಜೀವನವೇ ಶ್ರೇಷ್ಠ. ತ್ಯಾಗದಿಂದ ಯೋಗ ಸಿದ್ಧಿ ಸಾಧ್ಯವಿದೆ. ಇದನ್ನೇ ಭಾರತೀಯ ಪರಂಪರೆ ಜಗತ್ತಿಗೆ ತಿಳಿಸಿರುವುದು ಎಂದು ವಿವರಿಸಿದರು.
ವಿಕಾಸವೆಂದರೆ …
ವಿಕಾಸವೆಂದರೆ ಕಲುಷಿತಗೊಳಿಸುವುದಲ್ಲ. ಸ್ವದೇಶೀ ಪರಿಕಲ್ಪನೆ ನಮ್ಮಲ್ಲಿ ಬೆಳೆಯಬೇಕು. ಪ್ರಕೃತಿಯೊಂದಿಗೆ ಪ್ರಾಕೃತಿಕವಾಗಿ ಬದುಕುವುದು ಸ್ವದೇಶಿ. ಈ ಪಾಠವನ್ನು ದೇವನಿರ್ಮಿತ ಪುಸ್ತಕದಿಂದ ಕಲಿಯಬೇಕು. ಭೂಮಿ, ಗುಡ್ಡ, ತೊರೆ, ಗದ್ದೆಗಳ ನಡುವಿನ ಗ್ರಾಮಗಳ ಜೀವನ ಶೈಲಿಯಿಂದ ಇದನ್ನು ಕಲಿತುಕೊಳ್ಳಲು ಸಾಧ್ಯ. ಆ ಮೂಲಕವೇ ಭಾರತವನ್ನು ಅರಿತುಕೊಳ್ಳಲು ಸಾಧ್ಯ. ಹಾಗಾಗಿ ಭಾರತವನ್ನು ಭಾರತದಂತೆ ಕಟ್ಟಿ ಬೆಳೆಸುವುದೇ ಸ್ವದೇಶಿ ಎಂದು ಸೀತಾರಾಮ ಕೆದಿಲಾಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.