23ರಿಂದ 10 ಲಕ್ಷಕ್ಕೆ ಇಳಿಯಲಿದೆ ಚೀನಾದ ಸೇನಾ ಬಲ!
Team Udayavani, Jul 13, 2017, 3:20 AM IST
ಬೀಜಿಂಗ್: ಜಗತ್ತಿನ ಅತಿ ದೊಡ್ಡ ಮಿಲಿಟರಿ ಪಡೆ ಎನಿಸಿರುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯಲ್ಲಿನ (ಪಿಎಲ್‌ಎ) ಯೋಧರ ಸಂಖ್ಯೆಯನ್ನು 23 ಲಕ್ಷದಿಂದ 10 ಲಕ್ಷಕ್ಕೆ ಇಳಿಸಲು ಚೀನಾ ಚಿಂತನೆ ನಡೆಸಿದೆ. ಸೇನೆಯ ಸಂಖ್ಯಾಬಲ ಇಳಿಸುವ ಪ್ರಯತ್ನ ನಡೆಯುತ್ತಿರುವುದು ಚಿನಾ ಮಿಲಿಟರಿ ಇತಿಹಾಸದಲ್ಲಿ ಇದೇ ಮೊದಲಾಗಿದ್ದು, ವ್ಯೂಹಾತ್ಮಕ ಕ್ಷಿಪಣಿ ಪಡೆಗಳು ಹಾಗೂ ನೌಕಾ ಪಡೆಯ ಬಲ ಹೆಚ್ಚಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಬೃಹತ್ ಸೇನೆಯನ್ನು ಪುನಾರಚಿಸುವುದು ಹಾಗೂ ಇತರ ಸೇವೆಗಳಿಗೂ ಸಮ ಪ್ರಮಾಣದ ಬಲ ನೀಡುವ ಉದ್ದೇಶದಿಂದ ಯೋಧರ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸುತ್ತಿರುವುದಾಗಿ ಪೀಪಲ್ಸ್ ಲಿಬೆರೇಷನ್ ಆರ್ಮಿಯ ಅಧಿಕೃತ ಪತ್ರಿಕೆ ‘ಪಿಎಲ್‌ಎ ಡೈಲಿ,’ ವರದಿ ಮಾಡಿದೆ. ‘ಚೀನಾದ ವ್ಯೂಹಾತ್ಮಕ ಗುರಿಗಳು ಹಾಗೂ ರಕ್ಷಣಾ ಅಗತ್ಯಗಳಿಗೆ ಅನುಗುಣವಾಗಿ ಈ ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ. ಈವರೆಗೆ ಪಿಎಲ್‌ಎ ಕೇವಲ ಭೂ ಯುದ್ಧ ಹಾಗೂ ದೇಶದ ಸುರಕ್ಷತೆಗೆ ಮೀಸಲಾಗಿತ್ತು. ಈಗ ಸೇನೆಯ ಕಾರ್ಯವಿಧಾನದಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಲಾಗುತ್ತಿದೆ,’ ಎಂದು ಪತ್ರಿಕೆ ಹೇಳಿದೆ.
ಹಿಂದಿನಂತಲ್ಲ: ವಾಸ್ತವಿಕ ನಿಯಂತ್ರಣ ರೇಖೆಗೆ ಸಂಬಂಧಿಸಿದಂತೆ ಈ ಬಾರಿ ಸಿಕ್ಕಿಂ ನಿಲುವು ‘ಭಿನ್ನ’ವಾಗಿರಲಿದೆ ಎಂದು ಚೀನಾ ಹೇಳಿದೆ. ಈ ಹಿಂದಿನ ಎಲ್ಲ ಗಡಿ ತಕರಾರುಗಳ ವೇಳೆ ಸಿಕ್ಕಿಂ ತಳೆದಿದ್ದ ನಿಲುವುಗಳಿಗೆ ಹೋಲಿಸಿದರೆ, ಈ ಬಾರಿ ಅದು ಗಡಿ ರೇಖೆಯ ನಿಯಮಗಳ ವ್ಯಾಪ್ತಿಯಲ್ಲೇ ನಿಲ್ಲಲಿದೆ ಎಂದು ಚೀನಾ ವಿದೇಶಾಂಗ ಕಚೇರಿಯ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದಾರೆ. ಹಾಗೇ ಭಾರತ ನಿಗದಿತ ಗಡಿ ರೇಖೆ ಬಳಿ ಸಾಕಷ್ಟು ಬಾರಿ ಅಕ್ರಮವಾಗಿ ಸೇನೆ ಜಮಾವಣೆ ಮಾಡಿದೆ ಎಂದು ಗೆಂಗ್ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
MUST WATCH
ಹೊಸ ಸೇರ್ಪಡೆ
Thalapathy 69: ರಿಲೀಸ್ ಗೂ ಮುನ್ನ ಕೋಟಿ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ
Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.