ಕೌ ಶಬ್ದ ತೆಗೆಯಲು ಸೂಚನೆ!
Team Udayavani, Jul 13, 2017, 3:25 AM IST
ನವದೆಹಲಿ/ಕೋಲ್ಕತಾ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಡಾ.ಅಮರ್ತ್ಯ ಸೆನ್ ಕುರಿತಾಗಿ ನಿರ್ಮಾಣಗೊಂಡ ಸಾಕ್ಷ್ಯಚಿತ್ರ ‘ದ ಆರ್ಗ್ಯುಮೆಂಟೆಟಿವ್ ಇಂಡಿಯನ್’ನಲ್ಲಿ ಬಳಕೆ ಮಾಡಲಾಗಿರುವ ಹಲವು ಪದಗಳನ್ನು ತೆಗೆದು ಹಾಕುವಂತೆ ಕೇಂದ್ರೀಯ ಸಿನಿಮಾ ಪ್ರಮಾಣ ಮಂಡಳಿ (ಸಿಬಿಎಫ್ಸಿ) ಸೂಚಿಸಿದೆ. ಮಂಡಳಿಯ ಕ್ರಮವನ್ನು ವಿರೋಧಿಸಿರುವ ಚಿತ್ರನಿರ್ದೇಶಕ, ಅರ್ಥಶಾಸ್ತ್ರಜ್ಞ ಸುಮನ್ ಘೋಷ್ ಸೆನ್ಸಾರ್ ಮಂಡಳಿಯ ನಿರ್ದೇಶನವನ್ನು ಅನುಸರಿಸುವುದಿಲ್ಲ ಎಂದು ಹೇಳಿದ್ದಾರೆ. ಸೆನ್ಸಾರ್ ಮಂಡಳಿಯ ಕ್ರಮ ಈಗ ವಿವಾದವನ್ನು ಹುಟ್ಟುಹಾಕಿದೆ.
ಮಂಗಳವಾರ ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದ ಮಂಡಳಿ. ಸಾಕ್ಷ್ಯಚಿತ್ರದಲ್ಲಿದ್ದ ಗುಜರಾತ್, ಕೌ, ಹಿಂದುತ್ವ ವ್ಯೂ ಆಫ್ ಇಂಡಿಯಾ, ಹಿಂದು ಇಂಡಿಯಾ ಎಂಬ ಪದಗಳನ್ನು ತೆಗೆಯುವಂತೆ ಸೂಚಿಸಿತ್ತು. ಬೀಪ್ ಸದ್ದು ಬಳಿಸಿದ ಬಳಿಕ ‘ಯುಎ’ ಪ್ರಮಾಣದ ಜೊತೆ ಚಿತ್ರವನ್ನು ಪ್ರದರ್ಶಿಸಬಹುದು ಎಂದಿತ್ತು. ‘ಈ ಸಾಕ್ಷ್ಯಚಿತ್ರದಲ್ಲಿ ಸೇನ್ ಭಾರತದಲ್ಲಿ ಹೆಚ್ಚಾಗಿರುವ ಅಸಹಿಷ್ಣುತೆ ಕುರಿತು ಮಾತನಾಡಿದ್ದಾರೆ.
ಭಾರತದಂಥ ಪ್ರಜಾಪ್ರಭುತ್ವವಿರುವ ದೇಶದಲ್ಲಿ ಸಾಕ್ಷ್ಯಚಿತ್ರವೊಂದರಲ್ಲಿ ಸರ್ಕಾರವನ್ನು ಟೀಕಿಸುವುನ್ನೂ ಸಹಿಸದೇ ಇರುವುದು ನಿಜಕ್ಕೂ ಆಶ್ಚರ್ಯಕರ. ಈಗಿನ ಸಮಯದ ಪ್ರಮುಖ ಚಿಂತಕನೊಬ್ಬರ ಅಭಿಪ್ರಾಯವನ್ನು ಚಿತ್ರದಲ್ಲಿ ನಿಶ್ಯಬ್ದಗೊಳಿಸಿ ಎಂದು ಹೇಳಿರುವುದು ಖಂಡನೀಯ ಎಂದಿದ್ದಾರೆ. ಇದೇ ವೇಳೆ ಸಿನಿಮಾ ಪ್ರಮಾಣೀಕರಣ ವ್ಯವಸ್ಥೆ ಆನ್‌ಲೈನ್ ಆಗಿರುವುದರಿಂದ ಶೀಘ್ರವೇ ಬಿಕ್ಕಟ್ಟು ಮಕ್ತಾಯವಾಗಬಹುದೆಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಮಂಡಳಿ ಕ್ರಮ ಪ್ರಶ್ನಿಸಿದ್ದಾರೆ. ಸರ್ಕಾರದ ವಿರುದ್ಧವಾಗಿರುವ ಯಾವುದೇ ಧ್ವನಿಯನ್ನು ಅಡಗಿಸುವಂಥ ಸ್ಥಿತಿ ಉಂಟಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.