ಸುಪ್ರೀಂನಲ್ಲೇ ಕಾವೇರಿ ಇತ್ಯರ್ಥ; ನ್ಯಾಯಾಧಿಕರಣಕ್ಕೆ ವರ್ಗಾವಣೆ ಇಲ್ಲ
Team Udayavani, Jul 13, 2017, 3:45 AM IST
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಪ್ರಕರಣವನ್ನು ಮತ್ತೆ ನ್ಯಾಯಾಧಿಕರಣಕ್ಕೆ ವರ್ಗಾವಣೆ ಮಾಡುವುದಿಲ್ಲ.
ಇಲ್ಲೇ ಇತ್ಯರ್ಥಪಡಿಸಲಾಗುವುದು ಎಂದು ಸುಪ್ರಿಂಕೋರ್ಟ್ ತಿಳಿಸಿದೆ. ಕಾವೇರಿ ವಿಶೇಷ ಮೇಲ್ಮನವಿಗಳ ವಿಚಾರಣೆ
ಸಂದರ್ಭದಲ್ಲಿ ರಾಜ್ಯದ ಪರ ವಕೀಲರ ನಾರಿಮನ್, ನ್ಯಾಯಾಧಿಕರಣ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದಾಗ, ಪದೇ ಪದೇ ನ್ಯಾಯಾಧಿಕರಣ ತಪ್ಪುಗಳನ್ನು ಹೇಳಬೇಡಿ. ನ್ಯಾಯಾಧಿಕರಣದ ಆಕ್ಷೇಪಣೆಗಳನ್ನು ದಾಖಲಿಸಿದ್ದೀರಿ.
ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿ. ನ್ಯಾಯಾಧಿಕರಣಕ್ಕೆ ಮತ್ತೆ ಪ್ರಕರಣ ವರ್ಗಾವಣೆ ಮಾಡುವುದಿಲ್ಲ, ಸುಪ್ರೀಂಕೋರ್ಟ್‌ನಲ್ಲೇ ಇತ್ಯರ್ಥ ಪಡಿಸಲಾಗುವುದು ಎಂದು ನ್ಯಾ.ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿತು. ಇದಕ್ಕೂ ಮುಂಚೆ ವಾದ ಮಂಡಿಸಿದ ನಾರಿಮನ್, ಆರಂಭದಿಂದಲೂ ತಮಿಳುನಾಡಿನ ನಡೆಯನ್ನು ಕರ್ನಾಟಕ ವಿರೋಧಿಸಿದೆ. ಆದರೂ ನ್ಯಾಯಾಧಿಕರಣದಲ್ಲಿ ಕೇವಲ ತಮಿಳುನಾಡಿನ ವಾದಕ್ಕೆ ಮನ್ನಣೆ ಸಿಕ್ಕಿದೆ ಎಂದರು.
ಹಳೆಯ ಒಪ್ಪಂದಗಳೂ 1974 ರಲ್ಲಿ ಅಂತ್ಯವಾಗಿವೆ. ಅದನ್ನು ಈಗಲೂ ಮುಂದುವರಿಸುವುದು ಸರಿಯಲ್ಲ.
ನ್ಯಾಯಾಧಿಕರಣದಲ್ಲಿ ಎರಡೂ ರಾಜ್ಯಗಳ ಮೂಲ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿಲ್ಲ. ತಮಿಳುನಾಡು ಹಳೆಯ ಒಪ್ಪಂದಗಳನ್ನು ಉಲ್ಲಂ ಸಿದೆ. ಒಪ್ಪಂದ ಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಂಡಿದೆ. ನ್ಯಾಯಾಧಿಕರಣ ರಾಜ್ಯದ ಪ್ರಮುಖ ವಾದ ಆಲಿಸಿಲ್ಲ. ಸುಪ್ರೀಂ ಈ ಬಗ್ಗೆ ಗಮನ ಹರಿಸಬೇಕು ಎಂದು ನಾರಿಮನ್ ಹೇಳಿದರು. ಒಂದು ಹಂತದಲ್ಲಿ ನ್ಯಾಯಪೀಠ, ಒಪ್ಪಂದಗಳನ್ನು ನಾವು ಮುರಿದು ಹಾಕುತ್ತೇವೆ. ಬಳಿಕ ನೀರು ಯಾವ ಆಧಾರದ ಮೇಲೆ ಹಂಚಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು. ಭಾರತ ಒಕ್ಕೂಟ ವ್ಯವಸ್ಥೆಯ ದೇಶ, ಎರಡೂ ರಾಜ್ಯಗಳು ನೀರಿಗಾಗಿ ಕಿತ್ತಾಡುವುದು ಸರಿಯಲ್ಲ ಎಂದು ಕಿವಿಮಾತು ಹೇಳಿತು.
ನಾರಿಮನ್ ವಾದ ಮಂಡನೆ ವೇಳೆ ತಮಿಳುನಾಡು ಪರ ವಕೀಲ ಶೇಖರ್ ನಾಫಡೆ, 1924ರ ಒಪ್ಪಂದ ಮುಂದುವರಿಸಲು ಮನವಿ ಮಾಡಿದರು. ವಿಚಾರಣೆ 15 ದಿನಗಳ ನಡೆಯುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.