ಜರ್ಮನಿಗೂ ಹೊರಟ ಮಂಗಳೂರು ಮೊಟ್ಟೆ

Team Udayavani, Jul 13, 2017, 1:35 PM IST

Ondu-Motteya-Kathe-(1).jpg

ರಾಜ್‌ ಬಿ. ಶೆಟ್ಟಿ ನಿರ್ದೇಶನದ “ಒಂದು ಮೊಟ್ಟೆಯ ಕಥೆ’ ಎಲ್ಲೆಡೆ ಸಖತ್‌ ಹವಾ ಎಬ್ಬಿಸುತ್ತಿದೆ. ಇದು ಸಹಜವಾಗಿಯೇ ನಿರ್ಮಾಪಕರಾದ ಪವನ್‌ಕುಮಾರ್‌ ಹಾಗೂ ಸುಹಾನ್‌ಗೆ ಖುಷಿಕೊಟ್ಟಿದೆ. ಚಿತ್ರ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೂ ಚಿತ್ರ ಹೌಸ್‌ಫ‌ುಲ್‌ ಪ್ರದರ್ಶನ ಕಂಡಿದೆ. ಅಷ್ಟೇ ಅಲ್ಲ, ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಜನರು ಜೈ ಎಂದಿದ್ದಾರೆ. ಸಿನಿಮಾಗೆ ಸಿಕ್ಕ ಮೆಚ್ಚುಗೆ ಮೆಚ್ಚಿಕೊಂಡ ಪವನ್‌ ಕುಮಾರ್‌, ಆ ತಂಡವನ್ನು ಮಾಧ್ಯಮ ಎದುರು ಕರೆದು ಕೂರಿಸಿದ್ದರು. ಅಷ್ಟೇ ಅಲ್ಲ, ನಿರ್ದೇಶಕ ರಾಜ್‌ ಬಿ.ಶೆಟ್ಟಿ ತಮ್ಮ ತಂಡದ ಸದಸ್ಯರಾದ ನಿರ್ಮಾಪಕ ಸುಹಾನ್‌, ಕ್ಯಾಮೆರಾಮೆನ್‌ ಪ್ರವೀಣ್‌, ಕಲಾವಿದರಾದ, ಶೈಲಶ್ರೀ, ಅಮೃತಾನಾಯಕ್‌, ಪ್ರಕಾಶ್‌, ರಾಮ್‌ದಾಸ್‌, ವಿನೀತ್‌, ರಾಹುಲ್‌, ರಾಜೇಶ್‌ ಹಾಗೂ ಸಂಗೀತ ನಿರ್ದೇಶಕ ಮಿಧುನ್‌ ಮುಕುಂದ್‌ ಅವರನ್ನು ಪರಿಚಯಿಸಿಕೊಟ್ಟರು. ಎಲ್ಲರೂ
ಸಿನಿಮಾದಲ್ಲಿ ಸಿಕ್ಕ ಅವಕಾಶ ಹಾಗೂ ಅನುಭವ ಹಂಚಿಕೊಂಡರು.

ಅಂದಹಾಗೆ, ಚಿತ್ರಕ್ಕೆ ಮೊದಲ ದಿನವೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮಲ್ಟಿಪ್ಲೆಕ್ಸ್‌ನಲ್ಲಿ ಅತಿಹೆಚ್ಚು ಪ್ರದರ್ಶನ ಕಂಡು ದಾಖಲೆ ಮಾಡಿದೆ. ಚಿತ್ರಮಂದಿರಗಳಲ್ಲೂ ಒಳ್ಳೆಯ ಗಳಿಕೆ ಮಾಡಿದೆ. ಇದು ಸಹಜವಾಗಿಯೇ ನಿರ್ಮಾಪಕ ಪವನ್‌ಕುಮಾರ್‌ ಹಾಗೂ ವಿತರಕ ಜಾಕ್‌ ಮಂಜು ಅವರಿಗೆ ಖುಷಿಕೊಟ್ಟಿದೆ.

ತಮಿಳು ಚಿತ್ರ ಪ್ರದರ್ಶನವಾಗು ಸಂಪಿಗೆ ಚಿತ್ರಮಂದಿರದಲ್ಲಿ ನಿರೀಕ್ಷಿಸದ ಗಳಿಕೆ ಆಗಿರುವುದು ಚಿತ್ರದ ಮತ್ತೂಂದು ಪ್ಲಸ್‌. ಕೆ.ಜಿ.ರಸ್ತೆಯ ಚಿತ್ರಮಂದಿರದಿಂದಲೂ ಚಿತ್ರಕ್ಕೆ ಈಗ ಬೇಡಿಕೆ ಬಂದಿದೆ ಎಂಬುದು ಇನ್ನೊಂದು ವಿಶೇಷ. ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಈ ಚಿತ್ರ, ಮಂಗಳೂರಿನ ಮಲ್ಟಿಪ್ಲೆಕ್ಸ್‌ನಲ್ಲಿ 19 ಪ್ರದರ್ಶನ ಕಂಡಿದೆ. ಮುಂದಿನ ವಾರದಿಂದ ಸಿಂಗಲ್‌ ಥಿಯೇಟರ್‌ನಲ್ಲೂ “ಮೊಟ್ಟೆ’ ಕಾಣಿಸಿಕೊಳ್ಳಲಿದೆ. ಸದ್ಯಕ್ಕೆ ಹೈದರಾಬಾದ್‌, ಮುಂಬೈನಲ್ಲೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ ವಾರ ವಿದೇಶದಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರಿಗಿದೆ. 

ಈ ಮಧ್ಯೆ ಚಿತ್ರ ಜರ್ಮನಿ ಮತ್ತು ಗಲ್ಫ್ನಲ್ಲಿ ಬಿಡುಗಡೆಯಾಗಲಿದೆ. ಜುಲೈ 15ರಂದು ಜಮರ್ನಿಯ ಲಿವರ್‌ ಕುಸನ್‌ನ ಸ್ಕಾಲಾ ಸಿನಿಮಾದಲ್ಲಿ ಮೊದಲು ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಫ್ರಾಂಕ್‌ಫ‌ರ್ಟ್‌, ಮ್ಯೂನಿಚ್‌, ಬಾನ್‌, ಬರ್ಲಿನ್‌, ಹ್ಯಾಂಬರ್ಗ್‌ ಮುಂತಾದ ಕಡೆ ಚಿತ್ರ ಬಿಡುಗಡೆಯಾಗಿ ಪ್ರದರ್ಶನ ಕಾಣಲಿದೆ.

ಇದಾದ ಬಳಿಕ ಆಗಸ್ಟ್‌ನಲ್ಲಿ ಚಿತ್ರವು ಗಲ್ಫ್ನಲ್ಲಿ ಬಿಡುಗಡೆಯಾಗಲಿದೆ. ಹಾಗೆ ನೋಡಿದರೆ, “ಒಂದು ಮೊಟ್ಟೆಯ ಕಥೆ’ ಚಿತ್ರ
ಮೊದಲು ಬಿಡುಗಡೆಯಾಗಿದ್ದೇ ಹೊರ ದೇಶದಲ್ಲಿ. ಮೇನಲ್ಲಿ ನಡೆದ ನ್ಯೂಯಾರ್ಕ್‌ ಇಂಡಿಯನ್‌ ಫಿಲ್ಮ್
ಫೆಸ್ಟಿವಲ್‌ನಲ್ಲಿ ಪ್ರೀಮಿಯರ್‌ ಆದ ಈ ಚಿತ್ರವು, ನಂತರ ಲಂಡನ್‌ ಚಿತ್ರೋತ್ಸವದಲ್ಲೂ ಬಿಡುಗಡೆಯಾಗಿತ್ತು.
ಈಗ ಚಿತ್ರ ಕರ್ನಾಟಕದಲ್ಲಿ ತೆರೆಕಂಡಿದ್ದು ಮತ್ತು ಮುಂದಿನ ದಿನಗಳಲ್ಲಿ ಹೊರದೇಶಗಳಲ್ಲಿ ಬಿಡು ಗಡೆಯಾಗಲಿದೆ. ಈ ಚಿತ್ರ ಎಷ್ಟು ದೇಶಗಳನ್ನು ಸುತ್ತಿ ಬರುತ್ತದೆ ಎಂಬ ಕುತೂಹಲ ಸದ್ಯಕ್ಕೆ ಎಲ್ಲರಿಗೂ ಇದೆ. 

ಟಾಪ್ ನ್ಯೂಸ್

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Theft Case: ಕುಕ್ಕೆ; ದೇವಸ್ಥಾನದಿಂದ ಕಳವು; ಆರೋಪಿ ಸೆರೆ

Theft Case: ಕುಕ್ಕೆ; ದೇವಸ್ಥಾನದಿಂದ ಕಳವು; ಆರೋಪಿ ಸೆರೆ

Bantwala: ತಲೆಮರೆಸಿಕೊಂಡಿದ್ದ ಕಳವು ಆರೋಪಿ ಬಂಧನ

Bantwala: ತಲೆಮರೆಸಿಕೊಂಡಿದ್ದ ಕಳವು ಆರೋಪಿ ಬಂಧನ

Bantwal: ಟೆಂಪೋ ಹಿಂದಕ್ಕೆ ಸರಿದು ಮೂರರ ಹರೆಯದ ಮಗು ಸಾವು

Bantwal: ಟೆಂಪೋ ಹಿಂದಕ್ಕೆ ಸರಿದು ಮೂರರ ಹರೆಯದ ಮಗು ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಹನುಮಂತು

BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಆದ ಹನುಮಂತು

Shwetha Srivatsav: ಶ್ವೇತಾ ಕಲರ್‌ಫುಲ್‌ ಫೋಟೋಶೂಟ್‌

Shwetha Srivatsav: ಶ್ವೇತಾ ಕಲರ್‌ಫುಲ್‌ ಫೋಟೋಶೂಟ್‌

13

Dance Music Video: ಆಲ್ಬಂನಲ್ಲಿ ನಿಲ್ಲಬೇಡ!: ಯುವ ಪ್ರತಿಭೆ ಕನಸಿದು

9

BTS Kannada Movie: ತೆರೆ ಹಿಂದಿನ ಕಥೆಗಳ ಬಿಟಿಎಸ್‌

Actor Surya: ಶಿವಣ್ಣ ಜೊತೆ ಸ್ಪರ್ಧೆಯಿಲ್ಲ; ತಮಿಳು ನಟ ಸೂರ್ಯ ಸ್ಪಷ್ಟನೆ  

Actor Surya: ಶಿವಣ್ಣ ಜೊತೆ ಸ್ಪರ್ಧೆಯಿಲ್ಲ; ತಮಿಳು ನಟ ಸೂರ್ಯ ಸ್ಪಷ್ಟನೆ  

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Aranthodu ಸಂಪಾಜೆ: ಮರ ಬಿದ್ದು ಮನೆಗೆ ಹಾನಿ

Aranthodu ಸಂಪಾಜೆ: ಮರ ಬಿದ್ದು ಮನೆಗೆ ಹಾನಿ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.