ಲೇಡಿ ಅಮೀರಾಳ ಹೊಟೇಲ್ ಪುರಾಣ
Team Udayavani, Jul 14, 2017, 3:50 AM IST
ಅದೃಷ್ಟ ಕೈಕೊಡದಿದ್ದರೆ ಅಮೀರಾ ದಸ್ತೂರ್ ಎಂಬ ಈ ಬೆಡಗಿ ಬಾಲಿವುಡ್‌ನಲ್ಲಿ ಯಶಸ್ವಿ ನಾಯಕಿಯರ ಸಾಲಿನಲ್ಲಿ ಮಿಂಚುವ ಅರ್ಹತೆ ಇರುವವಳು ನಟಿಯಾಗಲು ಅಗತ್ಯವಿರುವ ಎಲ್ಲ ಅರ್ಹತೆಗಳೂ ಇದ್ದು ಮೂಲೆಗುಂಪಾದ ಪ್ರತಿಭೆ ಈಕೆ. ಮುಖ್ಯವಾಗಿ ಭಾವಪೂರ್ಣ ಕಣ್ಣುಗಳೇ ಅವಳ ಬಂಡವಾಳ. ಜತೆಗೆ ಅದ್ಭುತವಾದ ಮೈಮಾಟ, ಲೀಲಾಜಾಲ ಅಭಿನಯ ಇವೆಲ್ಲ ಅವಳ ಪ್ಲಸ್‌ಪಾಯಿಂಟ್‌ಗಳು. ಆದರೆ, ಅದೃಷ್ಟ ಕೈಕೊಟ್ಟ ಕಾರಣ ಇದು ಯಾವುದೂ ಚಿತ್ರರಂಗದಲ್ಲಿ ಬಳಕೆಯಾಗದೆ ಸೊರಗಿ ಹೋಗಿದೆ.
ಪಾರ್ಸಿ ಸಮುದಾಯಕ್ಕೆ ಸೇರಿದ ಅಮೀರಾಳಿಗೆ ಚಿತ್ರರಂಗ ದೂರದ ಊರಾಗಿರಲಿಲ್ಲ. ಹಾಗೆಂದು ಆಗರ್ಭ ಶ್ರೀಮಂತ ಕುಟುಂಬದ ಅವಳಿಗೆ ಹೊಟ್ಟೆ ಹೊರೆಯಲು ಬಣ್ಣ ಹಚ್ಚುವ ಅಗತ್ಯವೂ ಇರಲಿಲ್ಲ. ಮುಂಬಯಿಯ ಅತಿ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಕಲಿತ ಅಮೀರಾ ಚಿತ್ರರಂಗಕ್ಕೆ ಬಂದಿರುವುದು ಬರೀ ಅದರ ಕುರಿತಾಗಿದ್ದ ಆಕರ್ಷಣೆಯಿಂದ ಮಾತ್ರ. ಹೀಗಾಗಿ ಅವಕಾಶಗಳಿಗಾಗಿ ನಿರ್ಮಾಪಕರ ಎದುರು ಹಲ್ಲುಗಿಂಜಿ ನಿಲ್ಲುವ ಅಗತ್ಯ ಅವಳಿಗಿರಲಿಲ್ಲ.
ಈ ಕಾರಣಕ್ಕೋ ಏನೋ ಅಮೀರಾಳಿಗೆ ಹೇಳಿಕೊಳ್ಳುವಂಥ ಉತ್ತಮ ಸಿನೆಮಾಗಳು ಸಿಗಲಿಲ್ಲ. ಇಸಾಕ್ ಎಂಬ ಚಿತ್ರದಲ್ಲಿ ಪ್ರತೀಕ್ ಬಬ್ಬರ್ ಎದುರು ನಾಯಕಿಯಾಗಿ ನಟನೆ ಆರಂಭಿಸಿದ ಅಮೀರಾ ಅನಂತರ ಮಿಸ್ಟರ್ ಎಕ್ಸ್ ಚಿತ್ರದಲ್ಲಿ ಇಮ್ರಾನ್ ಹಶ್ಮಿಗೆ ನಾಯಕಿಯಾದಳು. ಎರಡೂ ಸಾಧಾರಣ ಚಿತ್ರವಾಗಿದ್ದ ಕಾರಣ ಅಮೀರಾ ಗಮನ ಸೆಳೆಯಲಿಲ್ಲ. ಆದರೆ ಜಾಕಿಚಾನ್ ಎದುರು ಕುಂಗ್‌ಫು ಯೋಗ ಚಿತ್ರದಲ್ಲಿ ನಟಿಸಿದ ಬಳಿಕ ಅಮೀರಾ ಎಂಬ ನಟಿಯನ್ನು ಎಲ್ಲರೂ ಹುಬ್ಬೇರಿಸಿ ನೋಡಿದರು. ಬರೀ ಎರಡು ಚಿತ್ರಗಳಲ್ಲಿ ನಟಿಸಿದವಳಿಗೆ ಜಾಕಿಚಾನ್ ಎದುರು ನಟಿಸುವ ಅವಕಾಶ ಸಿಕ್ಕಿದ್ದನ್ನು ನಂಬಲು ಕೆಲವರಿಗೆ ಸಾಧ್ಯವಾಗಿರಲಿಲ್ಲ. ಆದರೆ ದುರದೃಷ್ಟ ಮಾತ್ರ ಇಲ್ಲೂ ಹಿಂಬಾಲಿಸಿಕೊಂಡು ಬರಬೇಕೆ. ಈ ಚಿತ್ರವೂ ಸಾಧಾರಣ ಯಶಸ್ಸು ಕಂಡ ಕಾರಣ ಅಮೀರಾಳಿಗೆ ಹೆಚ್ಚಿನ ಪ್ರಯೋಜನವಾಗಲಿಲ್ಲ. ಇದೀಗ ಅಮೀರಾ ಚಿತ್ರರಂಗದ ಉಸಾಬರಿಯೇ ಬೇಡ ಎಂದು ವ್ಯಾಪಾರಕ್ಕಿಳಿದಿದ್ದಾಳೆ. ಸದ್ಯದಲ್ಲೇ ಸಹೋದರನ ಜತೆಗೂಡಿ ಅಮೀರಾ ಮುಂಬಯಿಯಲ್ಲಿ ಹೊಟೇಲು ಪ್ರಾರಂಭಿಸಲಿದ್ದಾಳೆ.
ಅಂದ ಹಾಗೆ ಇದು ಸಂಪೂರ್ಣವಾಗಿ ಪಾರ್ಸಿ ಶೈಲಿಯ ಹೊಟೇಲಂತೆ. ಅಂದರೆ ಅಮೀರಾಳ ಹೊಟೇಲಲ್ಲಿ ಸಿಗುವುದು ಬರೀ ಪಾರ್ಸಿ ಸಮುದಾಯದ ಸಾಂಪ್ರದಾಯಿಕ ಐಟಂಗಳು ಮಾತ್ರ. ಮೊದಲಿನಿಂದಲೂ ಅಮೀರಾಳಿಗೆ ಮನೆಯೂಟ ಎಂದರೆ ಇಷ್ಟವಂತೆ. ಹೀಗಾಗಿ ತನ್ನ ಹೊಟೇಲಿನಲ್ಲೂ ಪಾರ್ಸಿ ಸಮುದಾಯದ ಅಡುಗೆಯನ್ನೇ ಪರಿಚಯಿಸಲಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.