ಭಕ್ತರ ಬ(ಭ)ತ್ತದ ಭಕ್ತಿ “ರಾಮ ನ್ಯೆವೇದ್ಯ’
Team Udayavani, Jul 14, 2017, 2:45 AM IST
ಮೀಯಪದವು: ಶ್ರೀ ರಾಮ ಚಂದ್ರಾಪುರ ಮಠ ಹೊಸನಗರ ಇದರ ಕೋಳ್ಯೂರು ವಲಯದ ವತಿಯಿಂದ ಮಠದ ಶ್ರೀ ರಾಮ ದೇವರ ನೈವೇದ್ಯಕ್ಕೆ ಸಾವಯವ ಭತ್ತದ ಬೇಸಾಯವನ್ನು ಪ್ರಾರಂಭಿಸಲಾಯಿತು.
ಕೋಳ್ಯೂರು ವಲಯದ ಭಕ್ತರು ಸಭೆ ಸೇರಿ ಮಠದ ದೇವರ ನೈವೇದ್ಯಕ್ಕೆ ಭತ್ತ ಬೆಳೆಯುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಇದನ್ನು ಮಠಕ್ಕೆ ತಿಳಿಸಿದಾಗ ಬೇಸಾಯಕ್ಕೆ ಅಗತ್ಯವಾದ ಸಾಂಪ್ರದಾಯಿಕ ಬಿತ್ತನೆ ಬೀಜವನ್ನು ವಲಯಕ್ಕೆ ಪೂರೈಸಿದರು.
ಗದ್ದೆ ಬೇಸಾಯಕ್ಕೆ ಅಗತ್ಯವಾದ ಸ್ಥಳವನ್ನು ಮುಂಡ್ರಕಜೆ ವಿಶ್ವೇಶ್ವರ ರಾವ್ ಒದಗಿಸಿದರು. ಅವರು ತಾವು ವ್ಯವಸಾಯ ಮಾಡುವ ಗದ್ದೆಯಲ್ಲಿ ಎರಡು ಗದ್ದೆಯನ್ನು ಮಠದ ನೈವೇದ್ಯ ಭತ್ತ ಬೆಳೆಸಲು ಮೀಸಲಿರಿಸಿ ಎಲ್ಲಾ ಭಕ್ತರ ನೆರವಿನೊಂದಿಗೆ ಕೆಲಸ ಪ್ರಾರಂಭಿಸಿಯೇ ಬಿಟ್ಟರು. ಗದ್ದೆಯನ್ನು ಉಳುಮೆ ಮಾಡಿ ಬೀಜವನ್ನು ಬಿತ್ತಿ ಗಿಡವನ್ನು ಗದ್ದೆಯಲ್ಲಿ ನಾಟಿ ಮಾಡಿದರು. ವಲಯದ ಎಲ್ಲಾ ಭಕ್ತರು ಒಗ್ಗಟ್ಟಾಗಿ ಗದ್ದೆಗೆ ಇಳಿದು ಬೇಸಾಯದ ಖುಷಿಯನ್ನು ಸವಿದರು ಹಾಗೂ ಅದರ ಕುರಿತಾಗಿ ಮಾಹಿತಿಯನ್ನು ಪಡೆದುಕೊಂಡರು.
ಕುರಿಯ ಗೋಪಾಲಕೃಷ್ಣ ಶಾಸ್ತಿÅ ಅವರು ಎಲ್ಲಾ ಕೆಲಸದ ನೇತೃತ್ವವನ್ನು ವಹಿಸಿಕೊಂಡು ಅಗತ್ಯ ನಿರ್ದೇಶನವನ್ನು ನೀಡಿದರು. ಉತ್ತಮವಾದ ಇಳುವರಿಯು ಬಂದು ಕಳಸ ತುಂಬಲಿ ಎಂಬುದೆ ಎಲ್ಲರ ಹಾರೈಕೆಯಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.