ಸೂರಿಲ್ಲದ ಕುಟುಂಬಕ್ಕೆ ಬಿಜೆಪಿ ಸದಸ್ಯನಿಂದ ಸೂರಿನಾಸರೆಯ ಭರವಸೆ
Team Udayavani, Jul 14, 2017, 2:50 AM IST
ಉಪ್ಪಿನಂಗಡಿ: ಪೆರ್ನೆ ಗ್ರಾಮದ ಮುಮ್ಮಾರಿ ನಿವಾಸಿ ಬಾಲಕೃಷ್ಣ ಪೂಜಾರಿ ಅವರ ಮನೆ ಕುಸಿದು ಬಿದ್ದಿದ್ದು, ಈ ಕುಟುಂಬದ ಅಸಹಾಯಕ ಪರಿಸ್ಥಿತಿಯನ್ನು ಮನಗಂಡ ದ.ಕ. ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು, ಬಾಲಕೃಷ್ಣ ಅವರ ಮನೆ ನಿರ್ಮಾಣಕ್ಕೆ ಸಹಕಾರ ನೀಡುವ ಭರವಸೆ ನೀಡಿದರು.
ಬಾಲಕೃಷ್ಣ ಪೂಜಾರಿ ಹಾಗೂ ಸುನಂದಾ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಮುಮ್ಮಾರಿಯಲ್ಲಿ ವಾಸ್ತವ್ಯವಿದ್ದರು. ಆದರೆ ಇವರ ವಾಸ್ತವ್ಯದ ಮನೆ ಇತ್ತೀಚೆಗೆ ಕುಸಿದು ಬಿದ್ದು, ನಿರಾಶ್ರಿತರಾಗಿದ್ದರು. ಬಳಿಕ ಅವರಿಗೆ ಸ್ಥಳೀಯರಾದ ಗೋಪಾಲ ಶೆಟ್ಟಿ ಎಂಬವರು ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು. ಈ ಕುಟುಂಬದ ಅಸಹಾಯಕ ಪರಿಸ್ಥಿತಿಯನ್ನು ಅರಿತ ಅಶೋಕ್ ಕುಮಾರ್ ರೈ, ಖುದ್ದು ಸ್ಥಳಕ್ಕೆ ಭೇಟಿ ನೀಡಿದ ಅಶೋಕ್ ಕುಮಾರ್ ರೈ ಅವರು ಮನೆ ನಿರ್ಮಾಣಕ್ಕೆ ಸಹಕಾರ ನೀಡುವ ಭರವಸೆ ನೀಡಿದರಲ್ಲದೆ, ಬಾಲಕೃಷ್ಣ ಪೂಜಾರಿಯವರ ಮಕ್ಕಳ ಖರ್ಚಿಗಾಗಿ ಆರ್ಥಿಕ ನೆರವನ್ನೂ ನೀಡಿದರು.
ಇದೇ ಸಂದರ್ಭ ಸ್ವಂತ ನಿವೇಶನವಿಲ್ಲದ ಬಾಲಕೃಷ್ಣ ಪೂಜಾರಿಯವರ ಕುಟುಂಬಕ್ಕೆ ಐದು ಸೆಂಟ್ಸ್ ಜಾಗವನ್ನು ನೀಡುವುದಾಗಿ ಸ್ಥಳೀಯರಾದ ಗೋಪಾಲಕೃಷ್ಣ ಶೆಟ್ಟಿ ಭರವಸೆ ನೀಡಿದರು. ಈ ಸಂದರ್ಭ ಪೆರ್ನೆ ಬಿಳಿಯೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ ಗೌಡ, ಗ್ರಾ.ಪಂ. ಸದಸ್ಯರಾದ ನವೀನ್ ಪೂಜಾರಿ ಪದಬರಿ, ಶಿವಪ್ಪ ನಾಯ್ಕ, ಬಿಜೆಪಿ ಕಾರ್ಯಕರ್ತರಾದ ಸೀತಾರಾಮ ಶೆಟ್ಟಿ ಕಾರ್ಲ, ಸಂಜೀತ್ ಶೆಟ್ಟಿ, ಐತಪ್ಪ ಭಂಡಾರಿ, ಕುಸುಮಾಧರ ಗೌಡ, ಶರತ್ ಶೆಟ್ಟಿ, ಸದಾನಂದ ಭಂಡಾರಿ, ಲಿಂಗಪ್ಪ ಭಂಡಾರಿ, ಉದಯ ಗೌಡ, ಪೂವಪ್ಪ ಪೂಜಾರಿ, ಮಹೇಶ್ ಪೂಜಾರಿ, ನಿತಿನ್, ಸುರೇಶ್, ಪ್ರಸಾದ್, ಅಶೋಕ್ ಕುಮಾರ್ ರೈ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.