ಸಂಸ್ಕೃತಿ ಉಳಿವಿಗೆ ವ್ಯಾಸರ ಕೊಡುಗೆ ಅಪಾರ: ಉಮೇಶ್
Team Udayavani, Jul 14, 2017, 2:15 AM IST
ನೆಹರೂನಗರ: ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಮತ್ತು ಬೆಳೆಸುವಲ್ಲಿ ವ್ಯಾಸರ ಕೊಡುಗೆ ಅಪಾರವಾದುದು. ಆಚಾರ್ಯನಾದವನು ತಾನೂ ಬೆಳೆಯುತ್ತ ತನ್ನೊಂದಿಗೆ ಅನೇಕ ಜನರನ್ನು ಬೆಳೆಸುತ್ತಾನೆ ಎಂದು ಮೂರ್ಗಜೆ ಮೈತ್ರೇಯಿ ಗುರುಕುಲಂನ ಉನ್ನತ ಶಿಕ್ಷಣ ವಿಭಾಗದ ಪ್ರಾಂಶುಪಾಲ ಉಮೇಶ್ ಹೆಗ್ಡೆ ಅವರು ಹೇಳಿದರು.
ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗ ಹಾಗೂ ವಿಕಾಸಂ ಸಂಸ್ಕೃತ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ವ್ಯಾಸ ಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಾಸರೇ ಹೇಳುವಂತೆ ಮನುಷ್ಯ ಎಂದರೆ ಅನುಕಂಪವುಳ್ಳ ಜೀವಿ. ವ್ಯಕ್ತಿ ಗಳು ಸ್ವಾರ್ಥವನ್ನು ಬಿಟ್ಟು ಇತರರಿಗೂ ಜೀವನವನ್ನು ಕೊಟ್ಟಾಗ ಮಾನವರೆನಿಸಿ ಕೊಳ್ಳುತ್ತಾರೆ. ನಮ್ಮ ಸಮಯವನ್ನು ಇತರರಿಗೂ ಕೊಟ್ಟಾಗ ನಾವೂ ಬೆಳೆ ಯುತ್ತೇವೆ. ಬಾಹ್ಯ ಸೌಂದರ್ಯ ಮಾತ್ರ ಮುಖ್ಯವಾಗದೆ ಆಂತರಿಕ ಸೌಂದರ್ಯ ವನ್ನೂ ಕಾಪಾಡಿಕೊಳ್ಳಬೇಕು ಎಂದರು.
ಜವಾಬ್ದಾರಿ ತೋರಬೇಕು
ಮನುಷ್ಯ ಜೀವನಕ್ಕೆ ಜೀವಾತ್ಮ, ಪರಮಾತ್ಮ ಹಾಗೂ ಪ್ರಕೃತಿ ಮೂರೂ ಮುಖ್ಯ. ಜೀವಾತ್ಮವನ್ನು ಗುರುವಿನ ಮೂಲಕ ಪರಿಚಯಿಸಿಕೊಳ್ಳಬೇಕು. ಹಾಗೆಯೇ ಪ್ರಕೃತಿ ಮಾತೆಯನ್ನು ಕೇವಲ ಬಳಸಿಕೊಳ್ಳದೆ ಉಳಿಸಿಕೊಂಡು, ಬೆಳೆಸಿ ಕೊಂಡು ಹೋಗುವ ಜವಾಬ್ದಾರಿಯನ್ನು ತೋರಬೇಕು ಎಂದು ಹೇಳಿದರು.
ಗುರುವಿನ ಮಾರ್ಗದರ್ಶನ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶು ಪಾಲ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ತಂದೆ, ತಾಯಿಯ ಅನಂತರದ ಸ್ಥಾನವನ್ನು ನಾವು ಗುರುವಿಗೆ ನೀಡಬೇಕು. ಶಿಷ್ಯನಾದವನ ಭವಿಷ್ಯ ರೂಪಿಸುವ, ಜ್ಞಾನ ಸಂಪಾದನೆಯ ಹಾದಿ ತೋರಿಸುವ ದೊಡ್ಡ ಜವಾಬ್ದಾರಿ ಗುರುವಿನದ್ದು. ಗುರಿ ತಲುಪಲು ಗುರು ವಿನ ಮಾರ್ಗದರ್ಶನ ಅತೀ ಅಗತ್ಯ. ವ್ಯಾಸ ಪೂರ್ಣಿಮೆ ಎಂಬುದು ಗುರು ಶಿಷ್ಯರ ಪರಂಪರೆಯನ್ನು ಗುರುತಿಸಿ ಗೌರವಿಸುವ ದಿನ ಮಾತ್ರವಲ್ಲದೆ ಆ ಪವಿತ್ರ ಸಂಬಂಧವನ್ನು ಮನನ ಮಾಡುವ ದಿನವೂ ಹೌದು ಎಂದರು.
ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ| ವಿN°àಶ್ವರ ವರ್ಮುಡಿ, ವಿಕಾಸಂ ಸಂಯೋಜಕ ಡಾ| ಶ್ರೀಶ ಕುಮಾರ್ ಎಂ.ಕೆ., ಕಾರ್ಯದರ್ಶಿ ಮನೋಜ್ ಉಪಸ್ಥಿತರಿದ್ದರು. ವಿಕಾಸಂ ಅಧ್ಯಕ್ಷೆ ಸಾಯಿಶ್ರೀಪದ್ಮ ಸ್ವಾಗತಿಸಿ, ವಿದ್ಯಾರ್ಥಿನಿ ಪೂರ್ಣಿಮಾ ವಂದಿಸಿದರು. ವಿದ್ಯಾರ್ಥಿ ನಿಖೇತ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
Hubli: ಕಾಂಗ್ರೆಸ್‌ನವರಿಂದ ಹಾವು ತೋರಿಸಿ ಹೆದರಿಸುವ ಕೆಲಸ: ಶಾಸಕ ರಾಜುಗೌಡ
Bollywood: ʼಕಲ್ಕಿʼ ನಿರ್ದೇಶಕನ ಸಿನಿಮಾದಲ್ಲಿ ಬಿಟೌನ್ ಬ್ಯೂಟಿ ಆಲಿಯಾ?
Sasthana: ಸ್ಥಳೀಯರಿಗೆ ಟೋಲ್ ಬಗ್ಗೆ ಪ್ರತಿಭಟನೆ
Bantwala: ಪ್ರಿಯತಮೆಯನ್ನು ಭೇಟಿಯಾಗಲು ಬಂದ ಯುವಕನಿಗೆ ಸ್ಥಳೀಯರಿಂದ ಹಲ್ಲೆ: ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.