ನೆಟ್ಟಣಿಗೆ ಮುಟ್ನೂರು ಗ್ರಾ.ಪಂ.ಗೆ ಪ್ರತಾಪಚಂದ್ರ ಭೇಟಿ
Team Udayavani, Jul 14, 2017, 2:40 AM IST
ನೆಟ್ಟಣಿಗೆ ಮುಟ್ನೂರು : ಇಲ್ಲಿನ ಗ್ರಾಮ ಪಂಚಾಯತ್‌ಗೆ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.
ವಿಧಾನಪರಿಷತ್ ಸದಸ್ಯ ಕೆ. ಪ್ರತಾಪ ಚಂದ್ರ ಶೆಟ್ಟಿ ಮಾತನಾಡಿ, ಜನಪರ ಯೋಜನೆಗಳನ್ನು ಸರಕಾರ ಜಾರಿಗೊಳಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತದೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಜನರಿಗೆ ತೊಂದರೆಯಾಗುತ್ತಿದೆ. ಅದಕ್ಕೆ ಪರಿಹಾರಗಳು ಇವೆ. 94ಸಿ ಮನೆಯ ಹಕ್ಕುಪತ್ರವನ್ನು ಕಂದಾಯ ಇಲಾಖೆ ನೀಡುವಾಗ ಅದರ ಜತೆಯಲ್ಲಿ ಪಹಣಿ ಪತ್ರ ನೀಡಿದಾಗ ಪಹಣಿ ಪತ್ರದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ರಾಜ್ಯ ಗಡಿಭಾಗದ ಜನರ ಸಮಸ್ಯೆಗಳಿಗೆ ಗಡಿಭಾಗದ ಜನ ರನ್ನು ಸೇರಿಸಿ ಸಭೆ ನಡೆಸುವಂತೆ ಸಚಿವ ಎಚ್.ಕೆ. ಪಾಟೀಲ ಅವರಲ್ಲಿ ಹೇಳಿದ್ದೇನೆ. ಪಂಚಾಯತ್‌ಗಳಿಗೆ ಬರುವ ಅನುದಾನ ಕಡಿಮೆ ಇದೆ ಇದರ ಬಗ್ಗೆ ಸರಕಾರದ ಗಮನ ತರುವುದಾಗಿ ಹೇಳಿದರು.
ತಪ್ಪು ಕಲ್ಪನೆ
ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ವಿಧಾನ ಪರಿಷತ್ತ್ ಸದಸ್ಯರು 5 ವರ್ಷಗಳಿಗೊಮ್ಮೆ ಮಾತ್ರ ಬರುತ್ತಾರೆ ಎಂಬ ತಪ್ಪು ಕಲ್ಪನೆ ಮತದಾರರಲ್ಲಿ ಇದೆ. ಪ್ರತಾಪಚಂದ್ರರು ಈಗಾಗಲೇ ಹಲವು ಪಂಚಾಯತ್ ಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಸರಕಾರದ ಗಮನಕ್ಕೆ ತಂದಿದ್ದಾರೆ. ಸರಕಾರದಿಂದ ಬರುವ ಅನುದಾನವನ್ನು 13 ವಿಧಾನಸಭಾ ಕ್ಷೇತ್ರ ಗಳಿಗೆ ಹಂಚಬೇಕು ಎಂದರು.
ನೆಟ್ಟಣಿಗೆಮುಟ್ನೂರು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದೇನೆ. ಹೆಚ್ಚಿನ ಎಲ್ಲ ರಸ್ತೆ ಅಭಿವೃದ್ಧಿಯಾಗಿದೆ. ಈಶ್ವರಮಂಗಲ ಪೊಲೀಸ್ ಹೊರಠಾಣೆಗೆ ಹೊಸ ಕಟ್ಟಡಕ್ಕೆ ಅನುದಾನ ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ. ನೆರೆಯ ಗ್ರಾಮದ ಮುಡಿಪಿನಡ್ಕ -ಬಡಗನ್ನೂರು- ಸುಳ್ಯಪದವು – ಈಶ್ವರಮಂಗಲ – ಪಂಚೋಡಿ – ಗಾಳಿಮುಖ ರಸ್ತೆಯನ್ನು ಮುಖ್ಯ ಜಿಲ್ಲಾ ರಸ್ತೆಯಾಗಿ ಮಾಡುವಂತೆ ಒತ್ತಾಯಿಸಿದ್ದೇನೆ. 94ಸಿಯಲ್ಲಿ ಸುಮಾರು 5,100 ಮನೆಗಳನ್ನು ಫಲಾನುಭಗಳಿಗೆ ನೀಡಿದ್ದೇನೆ ಎಂದು ಹೇಳಿದರು.
ನೆಟ್ಟಣಿಗೆ ಮುಟ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಂಕರಿ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಪ್ರತಾಪಚಂದ್ರ ಶೆಟ್ಟಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಯ ಸದಸ್ಯರ ಗೌರವಧನ ಹೆಚ್ಚಾಗಲು ಕಾರಣ ರಾಗಿದ್ದಾರೆ. ಜಿಲ್ಲಾ ಪಂಚಾಯತ್‌ಗೆ ಹೆಚ್ಚು ಅನುದಾನ ನೀಡುವಂತೆ ಸರಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಸಿದರು.
ಪಂ. ಅಭಿವೃದ್ಧಿ ಅಧಿಕಾರಿ ಎಚ್.ಟಿ. ಸುನೀಲ್, ಪಂ. ಉಪಾಧ್ಯಕ್ಷ ಶ್ರೀರಾಮ ಪಕ್ಕಳ, ಸದಸ್ಯರಾದ ಅಬ್ದುಲ್ ಖಾದರ್, ಇಬ್ರಾಹಿಂ ಕೆ., ಕೆ.ಎಂ. ಮಹಮ್ಮದ್, ಗ್ರಾಮಸ್ಥರಾದ ಅಬ್ದುಲ್ ರಮಾನ್, ಅಬ್ದುಲ್ ಕುಂಞಿ ಮೇಲ್ಮನೆ ಸದಸ್ಯರೊಂದಿಗೆ ಚರ್ಚಿಸಿದರು. ತಾ.ಪಂ. ಸದಸ್ಯೆ ಫೌಝೀಯಾ ಇಬ್ರಾಹಿಂ ಮಾತನಾಡಿದರು. ಮಾಯಿಲನಾಥ ಶೆಟ್ಟಿ, ಪಂಚಾಯತ್ ಸದಸ್ಯರಾದ ಲೀಲಾವತಿ, ಆಯಿಷಾ, ಇಂದಿರಾ ಅವರು ಅತಿಥಿಗಳನ್ನು ಗೌರವಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.