ಒಲಿಂಪಿಕ್ಸ್ ಸ್ಪರ್ಧೆಯತ್ತ ಸಂಶೀರ್ ಚಿತ್ತ
Team Udayavani, Jul 14, 2017, 2:45 AM IST
ಸುಳ್ಯ ತಾಲೂಕಿನ ಭರವಸೆಯ ಕ್ರೀಡಾಪಟು
ಸುಳ್ಯ: ಕೇರಳದ ತಿರುವಾಂಕೂರಿನ ಕ್ರೀಡಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಸುಳ್ಯ ಜಯನಗರ ನಿವಾಸಿ ಸಂಶೀರ್ (23) ಮುಂದಿನ ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ಸಹಿತ 2020ರಲ್ಲಿ ನಡೆಯುವ ಒಲಿಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸುವತ್ತ ಪಯಣ ಆರಂಭಿಸಿದ್ದಾರೆ.
ಇತ್ತೀಚೆಗೆ ಭುವನೇಶ್ವರದಲ್ಲಿ ಜರಗಿದ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪ್ರತಿನಿಧಿಯಾಗಿ ಉದ್ದಜಿಗಿತದಲ್ಲಿ ಫೈನಲ್ ಹಂತದಲ್ಲಿ ಸ್ಪರ್ಧಿಸಿ ಭರವಸೆಯ ಕ್ರೀಡಾಪಟುವಾಗಿ ಹೊರಹೊಮ್ಮಿದ್ದರು. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಂಬರುವ ಏಷ್ಯನ್‌ಗೆàಮ್ಸ್ ಹಾಗೂ ಕಾಮನ್‌ವೆಲ್ತ್‌ಗಾಗಿ ಸಿದ್ಧತೆ ಆರಂಭಿಸಿದ್ದೇನೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದು, ದೇಶದಿಂದ ಅತ್ಯುನ್ನತ ಇಬ್ಬರು ಸ್ಪರ್ಧಿಗಳನ್ನು ಆಯ್ಕೆ ಮಾಡಿ ಕಳುಹಿಸುವರು. ಈ ಪೈಕಿ ನಾನು ಆಯ್ಕೆಯಾಗುವ ವಿಶ್ವಾಸದಲ್ಲಿದ್ದೇನೆ. ಎರಡು ವರ್ಷಗಳಿಂದ ತಿರುವಾಂಕೂರಿನಲ್ಲಿರುವ ಇಂಡಿಯನ್ ನ್ಯಾಶನಲ್ ಕ್ಯಾಂಪ್‌ನಲ್ಲಿ ತರಬೇತಿ ಪಡೆಯುತ್ತಿದ್ದೇನೆ ಎಂದು ತಿಳಿಸಿದರು.
ಅತ್ಯುತ್ತಮ ಕ್ರೀಡಾಳು
ಸುಳ್ಯ ಸೈಂಟ್ ಬ್ರಿಜಿಡ್ಸ್ ಸ್ಕೂಲ್‌ನಲ್ಲಿ ಪ್ರಾಥಮಿಕ, ದುಗ್ಗಲಡ್ಕದಲ್ಲಿ ಹೈಸ್ಕೂಲ್, ಪಿಯು ಹಾಗೂ ಪದವಿ ಬಿಬಿಎಂನ್ನು ಆಳ್ವಾಸ್‌ನಲ್ಲಿ ಮುಗಿಸಿದ್ದಾರೆ. ಕೆಲವು ಸಮಯ ಅಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಿದ್ದರು. ಉದ್ದಜಿಗಿತ ಮತ್ತು ಟ್ರಿಪಲ್ ಜಂಪ್‌ನಲ್ಲಿ ವಿಶೇಷ ಪ್ರತಿಭೆ ಹೊಂದಿರುವ ಅವರು ಉದ್ದಜಿಗಿತದಲ್ಲಿ ಹಲವು ಪದಕಗಳನ್ನು ಪಡೆದಿದ್ದಾರೆ.
ಶಾಲಾ ಹಂತದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ದಾಖಲೆಯನ್ನು ನಿರ್ಮಿಸಿದ್ದರು. 2015ರ ನ್ಯಾಶನಲ್ ಗೇಮ್ಸ್‌ನಲ್ಲಿ ಕಂಚಿನ ಪದಕ, 2016ರಲ್ಲಿ ಅಂತಾರಾಜ್ಯ ಕ್ರೀಡಾಕೂಟದಲ್ಲಿ ಕಂಚು, 2017ರಲ್ಲಿ ಓಪನ್ ನ್ಯಾಶನಲ್ ಫೆಡರೇಶನ್‌ನಲ್ಲಿ ಬೆಳ್ಳಿ (7.63ಮೀ.) ಹಾಗೂ ಪ್ರಸ್ತುತ ಉದ್ದ ಜಿಗಿತದಲ್ಲಿ ಗರಿಷ್ಠ 7.67 ಮೀಟರ್ ನಷ್ಟು ದಾಖಲೆ ನಿರ್ಮಿಸಿದ್ದಾರೆ.
ರೈಲ್ವೆ ಉದ್ಯೋಗಿ
ಕ್ರೀಡಾ ಸಾಧನೆಯಿಂದಾಗಿ ಮುಂಬಯಿ ವೆಸ್ಟರ್ನ್ ರೈಲ್ವೇ ಇಲಾಖೆಯಲ್ಲಿ ಹುದ್ದೆ ಪಡೆದಿದ್ದು, ಪ್ರಸ್ತುತ ಟಿ.ಸಿ.ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಕೈಕ ಸಹೋದರ ಸಂಶುದ್ದೀನ್ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ತಂದೆ ಇಬ್ರಾಹಿಂ ಹಾಗೂ ತಾಯಿ ಆಯಿಷಾ ಸುಳ್ಯದಲ್ಲಿದ್ದಾರೆ.
ವಿಶ್ವಾಸವಿದೆ
ಚಿಕ್ಕಂದಿನಿಂದಲೇ ಟ್ರಿಪಲ್ ಜಂಪ್ ಹಾಗೂ ಉದ್ದ ಜಿಗಿತದಲ್ಲಿ ಪ್ರತಿಭೆ ಹೊಂದಿದ್ದೆ. ಪ್ರಸ್ತುತ ಕೇರಳದ ತರಬೇತಿ ಕೇಂದ್ರದಲ್ಲಿದ್ದು, ಮುಂಬರುವ ಏಷ್ಯನ್‌ಗೆàಮ್ಸ್, ಕಾಮನ್‌ವೆಲ್ತ್‌ನಲ್ಲಿ ಸ್ಪರ್ಧಿಸಲು ಆಯ್ಕೆಯಾಗುವ ವಿಶ್ವಾಸವಿದೆ.
– ಸಂಶೀರ್ ಜಯನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.