ಭಾಷಾ ಪ್ರಬುದ್ಧತೆ ಬೆಳೆಸಿ ಸಿರಿವಂತರಾಗಿ : ಅಣ್ಣಪ್ಪ
Team Udayavani, Jul 13, 2017, 11:47 PM IST
ಮಹಾನಗರ: ವಿದ್ಯಾರ್ಥಿ ಜೀವನದಲ್ಲಿಯೇ ಮಕ್ಕಳು ವಿವಿಧ ಭಾಷೆಗಳನ್ನು ಕಲಿತು ಭಾಷಾ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಬಹಳ ಲಾಭವಿರುತ್ತದೆ. ದೈನಂದಿನ ಜೀವನ ಹಾಗೂ ದೇಶ – ವಿದೇಶದಲ್ಲಿನ ವ್ಯಾಪಾರ ಕ್ಷೇತ್ರದಲ್ಲಿ ವ್ಯವಹರಿಸಲು ಬಹುಭಾಷೆಗಳನ್ನು ಕಲಿತು ಕೊಳ್ಳುವುದು ಅತೀ ಅಗತ್ಯ. ಇದರಿಂದ ವ್ಯಕ್ತಿತ್ವ ನಿರ್ಮಾಣವು ಸಲೀಸಾಗಿ ನೆರವೇರುತ್ತದೆ. ಇಂತಹ ಕಲಿಕಾ ವ್ಯವಸ್ಥೆಗೆ ಸಾಹಿತ್ಯ ಹಾಗೂ ಲಲಿತಕಲೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಕೆನರಾ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ಅಣ್ಣಪ್ಪ ಪೈ ಅಭಿಪ್ರಾಯಪಟ್ಟರು. ಕೆನರಾ ಪ್ರೌಢಶಾಲೆಯ ವಿವಿಧ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತನ್ನ ಪ್ರತಿಭೆಗಳನ್ನು ಒರೆಗೆ ಹಚ್ಚುವ ದೃಷ್ಟಿಯಿಂದ ಪ್ರತಿಯೊಬ್ಬ ಮಗು ಯಾವುದಾದರೊಂದು ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ಶಿಕ್ಷಕ ಮುರಾರಿ ಅವರು ಸಾಹಿತ್ಯ, ಲಲಿತಕಲೆ, ಆರೋಗ್ಯ, ಎನ್‌ಸಿಸಿ, ವಿಜ್ಞಾನ, ಪರಿಸರ ಹಾಗೂ ಇಂಟರಾಕ್ಟ್ ಸಂಘಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ನೀಡಿ ಸಂಘಗಳ ಸಂಚಾಲಕರು ಹಾಗೂ ಶಿಕ್ಷಕರನ್ನು ಪರಿಚಯಿಸಿದರು. ಮುಖ್ಯೋಪಾಧ್ಯಾಯಿನಿ ಅರುಣಾ ಕುಮಾರಿ ಅವರು ಸಂಘಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಅವುಗಳಲ್ಲಿ ಭಾಗ ವಹಿಸುವಂತೆ ಕರೆ ಕೊಟ್ಟರು. ಪ್ರತಿ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶಾಲಾ ಸಂಚಾಲಕ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಹಿರಿಯ ಶಿಕ್ಷಕಿ ಲಕ್ಷ್ಮೀ ಜಿ., ಪೆರ್ಮುದೆ ಮೋಹನ್ ಕುಮಾರ್, ಕೆನರಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲಲನಾ ಜೆ. ಶೆಣೈ ಮುಂತಾದವರು ಉಪಸ್ಥಿತರಿದ್ದರು. ಪ್ರಾಪ್ತಿ ಸ್ವಾಗತಿಸಿದರು. ಜ್ವಿನ್ ವಂದಿಸಿದರು. ವಿದ್ಯಾರ್ಥಿಗಳಾದ ಸೃಷ್ಟಿ, ನಂದನ್, ಸ್ಫೂರ್ತಿ ಹಾಗೂ ಅದಿತಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.