ತ್ರಿವಳಿ ಮಹಿಳೆಯರಿಂದಾಯ್ತು ಶೌಚಮುಕ್ತ ಮೇದಿನಿ ಗ್ರಾಮ
Team Udayavani, Jul 14, 2017, 2:45 AM IST
ಮೈಸೂರು: ಇನ್ನೇನು ಕೆಲಸ ಇಲ್ವಾ ನಿಮ್ಗೆ, ಹಳ್ಳಿಗ್ಯಾಕೆ ಕಕ್ಕಸ್ಸು ಗುಂಡಿ ಎಂದು ಅಧಿಕಾರಿಗಳನ್ನೇ ಹೀಯಾಳಿಸಿದ ಗ್ರಾಮಸ್ಥರೀಗ ಒಂದೇ ದಿನ 170 ಶೌಚಾಲಯ ನಿರ್ಮಿಸಿ, ಇದೀಗ ತಮ್ಮ ಗ್ರಾಮವನ್ನು ಶೌಚಮುಕ್ತ ಮಾಡಿ ರಾಜ್ಯಕ್ಕೆ
ಮಾದರಿಯಾಗಿ ಹೊರಹೊಮ್ಮಿದ್ದಾರೆ. ಹೀಗೆ ಗ್ರಾಮದ ವಸ್ತುಸ್ಥಿತಿಯೇ ಬದಲಾಗಲು ಕಾರಣರಾಗಿದ್ದು ಮಾತ್ರ ಆ ಮೂವರು ಮಹಿಳಾ ಅಧಿಕಾರಿಗಳು, ಆ ಗ್ರಾಮದ ಮಹಿಳೆಯರು ಶೌಚಕ್ಕೆ ಹೋಗಲು ಸೂರ್ಯ ಮೂಡುವ ಮುಂಚೆ ಅಥವಾ ಸೂರ್ಯ ಮುಳುಗಿದ ನಂತರ ಹೊಲಗಳ ಬೇಲಿ, ಪೊದೆಗಳನ್ನು ಹುಡುಕಿಕೊಂಡು ಹೋಗಿ ನಿತ್ಯಕರ್ಮ ಮುಗಿಸಿ
ಬರಬೇಕಾದ ದಯನೀಯ ಸ್ಥಿತಿ ಇತ್ತು.
ಇದ್ಯಾವುದೋ ದೂರದ ಕಾಡಂಚಿನ ಗ್ರಾಮವೊಂದರ ದುಸ್ಥಿತಿಯಲ್ಲ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಹೊಳೆಸಾಲು ಗ್ರಾಪಂ ವ್ಯಾಪ್ತಿಯ ಮೇದಿನಿ ಗ್ರಾಮದಲ್ಲಿ ನಿತ್ಯ ಕಂಡು ಬರುತ್ತಿದ್ದ ಚಿತ್ರಣವದು. ಒಟ್ಟು 456 ಕುಟುಂಬಗಳಿರುವ ಈ ಪುಟ್ಟ ಹಳ್ಳಿಯಲ್ಲಿ ಪರಿಶಿಷ್ಟರ ಕುಟುಂಬಗಳೇ ಹೆಚ್ಚು. ಪರಿಶಿಷ್ಟ ವರ್ಗಗಳ 337, ಪರಿಶಿಷ್ಟ ಜಾತಿಯ 31 ಸೇರಿ ಒಟ್ಟಾರೆ 368 ಪರಿಶಿಷ್ಟ ಕುಟುಂಬಗಳಿವೆ.
170 ಮನೆಯಲ್ಲಿರಲಿಲ್ಲ ಶೌಚಾಲಯ:
ಗ್ರಾಮದ 456 ಕುಟುಂಬಗಳ ಪೈಕಿ ಅನುಕೂಲ ಸ್ಥರಾದ 147 ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿದ್ದರೆ, ವಿವಿಧ ವಸತಿ ಯೋಜನೆಗಳಡಿ ಮನೆ ಮಂಜೂರಾಗಿರುವ 139 ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡಿದ್ದವು, ಇನ್ನುಳಿದ 170 ಮನೆಗಳಲ್ಲಿ ಶೌಚಾಲಯವಿರಲಿಲ್ಲ. ಸ್ವತ್ಛಭಾರತ್ ಮಿಷನ್ ಯೋಜನೆಯಡಿ ಬಯಲು ಶೌಚಮುಕ್ತಗೊಳಿಸುವ ಜಿಪಂ ಕಾರ್ಯಕ್ರಮದಂತೆ ಗ್ರಾಮವನ್ನು ಸಂಪೂರ್ಣ ಬಯಲು ಶೌಚ ಮುಕ್ತಗೊಳಿಸಲು
ಮುಂದಾದಾಗ ಆರಂಭದಲ್ಲಿ ಗ್ರಾಮಸ್ಥರು ಮುಂದೆ ಬಂದಿರಲಿಲ್ಲ. ತಾಪಂ ಸಂಜೀವಿನಿ ಒಕ್ಕೂಟದ ಎನ್‌ಆರ್‌ಎಲ್‌ಎಂನಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುವ ಶಶಿಕಲಾ ಎಸ್., ಸೌಮ್ಯ ಹಾಗೂ ರೋಹಿಣಿ ಅವರಿಗೆ ತಾಪಂ ವತಿಯಿಂದ ಹೊಳೆಸಾಲು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಶೌಚಾಲಯದ ಸಮೀಕ್ಷೆ ಕೆಲಸ ವಹಿಸಲಾಯಿತು.
ಸೊಪ್ಪು ಹಾಕದ ಗ್ರಾಮಸ್ಥರು: ಕಳೆದ ಆರು ತಿಂಗಳ ಹಿಂದೆ ಮೇದಿನಿ ಗ್ರಾಮದಲ್ಲಿ ಈ ಮೂವರು ಮಹಿಳೆಯರು ಸಮೀಕ್ಷೆ ಮಾಡಿದಾಗ 172 ಮನೆಗಳು ಶೌಚಾಲಯ ಹೊಂದಿಲ್ಲದಿರುವುದು ಕಂಡುಬಂತು. ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳುವಂತೆ ತಿಳಿ ಹೇಳಿದರೂ ಗ್ರಾಮದ ಪುರುಷರು ಇವರ ಮಾತಿಗೆ ಸೊಪ್ಪು ಹಾಕಲಿಲ್ಲ. ಕಡೆಗೆ ಗ್ರಾಮದ ಸ್ತ್ರೀಶಕ್ತಿ ಸ್ವಹಾಯ ಸಂಘಗಳ ಸಭೆಗಳಲ್ಲಿ ಶೌಚಕ್ಕೆ ಹೋಗುವಾಗ ಮಹಿಳೆಯರು ಯಾವ ರೀತಿಯ ಸಮಸ್ಯೆಗಳನ್ನು
ಎದುರಿಸಬೇಕೆಂಬ ವಿಚಾರಗಳನ್ನು ಮನವರಿಕೆ ಮಾಡಿಕೊಟ್ಟ ನಂತರ ಎರಡು ಕುಟುಂಬದವರು ಶೌಚಾಲಯ ನಿರ್ಮಿಸಿಕೊಂಡಿದ್ದರು.
ಒಂದೇ ದಿನಕ್ಕೆ ಶೌಚ ಮುಕ್ತ: ಗಾಂಧಿಜಯಂತಿ ವೇಳೆಗೆ ಜಿಲ್ಲೆಯನ್ನು ಬಯಲು ಶೌಚಮುಕ್ತಗೊಳಿಸಬೇಕೆಂಬ ಜಿಪಂ ಆಡಳಿತದ ಪ್ರಯತ್ನದ ಫಲವಾಗಿ ಸಣ್ಣ ಗ್ರಾಮವಾದ ಮೇದಿನಿಯನ್ನು ಆಯ್ಕೆ ಮಾಡಿಕೊಂಡಿದ್ದು, ಇದೀಗ ಫಲ ನೀಡಿದ್ದು, ಬುಧವಾರ ಒಂದೇ ದಿನದಲ್ಲಿ 170 ಶೌಚಾಲಯಗಳನ್ನು ಕಟ್ಟಿಸುವ ಮೂಲಕ ಈಗ ಮೇದಿನಿ ಗ್ರಾಮ ಸಂಪೂರ್ಣ ಬಯಲು ಶೌಚ ಮುಕ್ತವಾಗಿದೆ. ಸುಮಾರು 40 ಜನ ಗಾರೆ ಕೆಲಸಗಾರರ ಜತೆಗೆ ಗ್ರಾಮಸ್ಥರೂ ಕೈಜೋಡಿಸಿದ್ದರಿಂದ, ಒಂದೇ ದಿನದಲ್ಲಿ 170 ಶೌಚಾಲಯ ನಿರ್ಮಾಣ ಕಾರ್ಯ ಸಾಧ್ಯವಾಗಿದೆ.
– ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.