ಉಡುಪಿ: ಸರಕಾರಿ ದಾದಿಯರಿಂದ ನೇತ್ರದಾನದ ಸಂಕಲ್ಪ


Team Udayavani, Jul 15, 2017, 3:50 AM IST

140717ppe5.jpg

ಉಡುಪಿ: ರಾಜ್ಯದ ಎಲ್ಲ ಕಡೆಗಳಲ್ಲಿ ಈಗ ಸರಕಾರಿ ಆಸ್ಪತ್ರೆ, ವೈದ್ಯರು, ದಾದಿಯರ ಬಗ್ಗೆ ಕೆಟ್ಟ ಸುದ್ದಿಗಳೇ ಹೆಚ್ಚಾಗಿ ಪ್ರತಿಧ್ವನಿಸುತ್ತಿದೆ. ಆದರೆ ಉಡುಪಿಯ ಸರಕಾರಿ ದಾದಿಯರು ಸಮಾಜಮುಖೀ ಕಾರ್ಯಕ್ಕೆ ಮುನ್ನುಡಿ ಬರೆಯುವ ಮೂಲಕ ಸುದ್ದಿಯಲ್ಲಿದ್ದಾರೆ. ದಾದಿಯರೆಂದರೆ ಆಸ್ಪತ್ರೆಗಳ ಹೃದಯವಿದ್ದಂತೆ ಎನ್ನುವ ಮಾತು ಅಕ್ಷರಶಃ ನಿಜ ಮಾಡುವತ್ತ ಈ ನರ್ಸ್‌ಗಳು ಹೆಜ್ಜೆಯಿಟ್ಟಿದ್ದಾರೆ. ಉಡುಪಿ ಜಿಲ್ಲೆಯ 25 ಸರಕಾರಿ ನರ್ಸ್‌ಗಳು ಸ್ವಯಂ ಇಚ್ಛೆಯಿಂದ ನೇತ್ರದಾನ ಮಾಡಲು ಮುಂದಾಗಿದ್ದಾರೆ. 

ಸರಕಾರಿ ಆಸ್ಪತ್ರೆಯ ದಾದಿಯರೆಂದರೆ ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಮೂಡುವುದು ಕಣ್ಣಿನಲ್ಲಿ ಕರುಣೆಯೇ ಇಲ್ಲದ, ಬಡ ರೋಗಿಗಳ ಜೀವ ಹಿಂಡುವವರು ಎಂದು. ಆದರೆ ಅವರಿಗೂ ಒಂದು ಒಳ್ಳೆಯ ಮನಸ್ಸಿದೆ. ಉತ್ತಮ ಆಶಯಗಳನ್ನು ಹಾಕಿಕೊಳ್ಳುವ ಮೂಲಕ ಅದನ್ನು ಸಾಕಾರಗೊಳಿಸಿಕೊಳ್ಳಬೇಕು ಎನ್ನುವ ಮಹತ್ವಾಕಾಂಕ್ಷೆ ಇದೆ ಎನ್ನುವುದು ಈ ಕಾರ್ಯದ ಮೂಲಕ ಸಾಬೀತಾಗಿದೆ. 

ಅಂಧರ ಬಾಳಿಗೆ “ಬೆಳಕು’
ಉಡುಪಿ ಜಿಲ್ಲೆಯ ಜಿಲ್ಲಾಸ್ಪತ್ರೆ, ಪ್ರಾಥಮಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸರಕಾರಿ ಶುಶ್ರೂಷಕಿಯರು ಸೇರಿ ಬೆಳಕು ಎನ್ನುವ ಒಂದು ವಾಟ್ಸ್‌ಆ್ಯಪ್‌ ಗುಂಪೊಂದನ್ನು ರಚಿಸಿ ಆ ಮೂಲಕ ನೇತ್ರದಾನ, ಅಂಗದಾನ ಜಾಗೃತಿ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರಥಮ ಹೆಜ್ಜೆಯಾಗಿ ಅಂತಾರಾಷ್ಟ್ರೀಯ ನರ್ಸ್‌ಗಳ ದಿನ ಜಿಲ್ಲೆಯ 25 ಮಂದಿ ದಾದಿಯರು ನೇತ್ರದಾನ ಮಾಡುವ ಸಂಕಲ್ಪದೊಂದಿಗೆ ಅಂಧರ ಬಾಳಿಗೆ ಬೆಳಕಾಗಿದ್ದಾರೆ.
 
ಅದಲ್ಲದೆ ಆಸ್ಪತ್ರೆಯ ಕರ್ತವ್ಯ ಮುಗಿದ ಬಳಿಕವೂ ರೋಗಿಗಳ ಶುಶ್ರೂಷೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಡ್ರಗ್ಸ್‌, ಎಚ್‌ಐವಿ, ಏಡ್ಸ್‌ನಂತಹ ಕಾಯಿಲೆಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಬೀದಿ ನಾಟಕಗಳನ್ನು ದಾದಿಯರೇ ನಿರ್ದೇಶಿಸಿ, ನಟಿಸಿ ಅಲ್ಲಲ್ಲಿ ಪ್ರದರ್ಶನ ನೀಡುವ ಯೋಜನೆಯಿದೆ. 

ಸರಕಾರಿ ಆಸ್ಪತ್ರೆಗಳಲ್ಲಿ ಏನೇ ಅನಾಹುತ, ಅಚಾತುರ್ಯ ನಡೆದರೂ ಮೊದಲು ನರ್ಸ್‌ಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತಾರೆ. ವಾಸ್ತವದಲ್ಲಿ ಅವರ ತಪ್ಪಿಲ್ಲದಿದ್ದರೂ ಹೆಚ್ಚಿನ ಸಂದರ್ಭ ಅವರು ಬಲಿಪಶುಗಳಷ್ಟೇ. ಆರೋಪಗಳು ಏನೇ ಇದ್ದರೂ ಉಡುಪಿಯ ಸರಕಾರಿ ದಾದಿಯರು ಕೈಗೊಂಡ ಕಾರ್ಯ ಮೆಚ್ಚಲೇಬೇಕಾದುದು. 

ಎಲ್ಲರೂ ಸಂಕಲ್ಪ ಮಾಡಬಹುದು
121 ಕೋಟಿಗೂ ಅಧಿಕ ಜನಸಂಖ್ಯೆ ಇರುವ ದೇಶದಲ್ಲಿ ಪ್ರತಿ ದಿನ ಸುಮಾರು 86,853 ಮಂದಿ ಹುಟ್ಟಿದರೆ, ದಿನ 62, 389 ಮಂದಿ ಸಾವವನ್ನಪ್ಪುತ್ತಾರೆ. ಭಾರತದಲ್ಲಿ ಕಣ್ಣಿಲ್ಲದವರ ಸಂಖ್ಯೆ 6,82,460 ಎಂದು ತಿಳಿದು ಬಂದಿದೆ. ದೇಶದಲ್ಲಿ ವರ್ಷಕ್ಕೆ 1 ಲಕ್ಷಕ್ಕೂ ಮಿಕ್ಕಿ ಕಣ್ಣು ದಾನ ಮಾಡುವವರ ಅಗತ್ಯವಿದ್ದು, ಆದರೆ ವರ್ಷದಲ್ಲಿ ಕೇವಲ 30 ಸಾವಿರದಷ್ಟು ಮಂದಿ ಮಾತ್ರ ನೇತ್ರದಾನಕ್ಕೆ ಮುಂದಾಗುತ್ತಿದ್ದಾರೆ. ಸಾಯುವವರೆಲ್ಲರೂ ತಮ್ಮ ಕಣ್ಣನ್ನು ದಾನ ಮಾಡುವ ನಿರ್ಧಾರ ಕೈಗೊಂಡರೆ ಬಹುಃ ಒಂದೇ ವರ್ಷದಲ್ಲಿ ಭಾರತದಲ್ಲಿ ಅಂಧರೇ ಇಲ್ಲವಾಗಬಹುದು. ಕಣ್ಣು ದಾನ ಮಾಡಲು ಇಚ್ಛೆಯುಳ್ಳವರು ನೋಂದಾಯಿತ ಕಣ್ಣು ದಾನ ಕೇಂದ್ರಗಳಲ್ಲಿ ಅರ್ಜಿ ಭರ್ತಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ಸಮಾಜದ ಋಣ ಸಂದಾಯ
ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಉಡುಪಿಯ ಸಮಾನ ಮನಸ್ಕ ಶುಶ್ರೂಷಕಿಯರು “ಬೆಳಕು’ ಹೆಸರಿನ ವಾಟ್ಸ್‌ಆ್ಯಪ್‌ ಗುಂಪಿನ ಮೂಲಕ ತಮ್ಮ ಕಣ್ಣುಗಳನ್ನು ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ನಮ್ಮ ಕುಟುಂಬ ವರ್ಗವೂ ಸೇರಿದೆ. ನಮ್ಮಿಂದ ಪ್ರೇರಿತರಾದ ಹಲವರು ನಮ್ಮ ಗುಂಪಿಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಅಂಧತ್ವದಿಂದ ಬಳಲುತ್ತಿರುವವರು ಅನೇಕರಿದ್ದಾರೆ. ಸತ್ತ ಅನಂತರ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡುವ ನಿರ್ಧಾರ ತೆಗೆದುಕೊಂಡರೆ ಎಷ್ಟೋ ಅಂಧರ ಬಾಳಲ್ಲಿ ಬೆಳಕು ಕಾಣಬಹುದು. ಇದು ಪ್ರಚಾರಕ್ಕಾಗಿ ಮಾಡುತ್ತಿರುವುದಲ್ಲ. ಒಳ್ಳೆಯ ಆಶಯ ಈಡೇರಿಸುತ್ತಿದ್ದೇವೆ. 
– ಸಜನಿ ಸುಬ್ರಹ್ಮಣ್ಯ, ಮಹಿಳಾ ಆರೋಗ್ಯ ಸಹಾಯಕಿಯರ ಕೇಂದ್ರ ಉಡುಪಿ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.