ಪ್ರಧಾನಿ ಕಚೇರಿ ತಲುಪಿದ ಪರ್ಕಳ ನಿಲ್ದಾಣದ ಕತೆ!
Team Udayavani, Jul 15, 2017, 2:10 AM IST
ಉಡುಪಿ: ಅಂತಾರಾಷ್ಟ್ರೀಯ ನಗರ ಮಣಿಪಾಲದಿಂದ ಕೇವಲ ಎರಡೇ ಕಿ.ಮೀ. ದೂರದಲ್ಲಿರುವ ಪರ್ಕಳ ಬಸ್ ನಿಲ್ದಾಣ ಮಳೆ ಬಂದಾಗ ಕೆಸರು ಗದ್ದೆಯಂತಾಗುತ್ತಿದೆ. ಅಗಲ ಕಿರಿದಾದ ಇಲ್ಲಿ ಮಳೆ ನೀರು ನಿಂತು ವಾಹನಗಳು ಸಂಚರಿಸುವುದೇ ಕಷ್ಟ. ನೀರು ಹರಿದು ಹೋಗಲು ಇಲ್ಲಿ ಚರಂಡಿಗಳಿಲ್ಲ. ರಸ್ತೆ ಅಂಚಿಗೆ ಹೊಂಡವಿರುವುದು ಗೊತ್ತಿಲ್ಲದೆ ಮೊನ್ನೆ ವಾಹನ ಚಲಾಯಿಸುತ್ತಿದ್ದ ಪತಿ, ಪತ್ನಿಯರು ಬಿದ್ದು ಗಾಯಗೊಂಡಿದ್ದರು.
ಮಣಿಪಾಲ ಆಸ್ಪತ್ರೆಗೆ ಬರುವ ವಾಹನಗಳು, ವಾಪಸು ಹೋಗುವ ವಾಹನಗಳು ಹೆಚ್ಚಿಗೆ ಇದೆ. ಮಣಿಪಾಲಕ್ಕೆ ನಿತ್ಯ ಬರುವ ಜನರು ಅಷ್ಟಿಷ್ಟಲ್ಲ. ಆ್ಯಂಬುಲೆನ್ಸ್ಗಳೂ ಹಾರ್ನ್ ಹೊಡೆದು ಮುಂದಕ್ಕೆ ಚಲಿಸಲಾಗದ ಸ್ಥಿತಿ ಸಂಭವಿಸುತ್ತಿದೆ. ಎಂತಹ ಬುದ್ಧಿವಂತ ದ್ವಿಚಕ್ರವಾಹನ ಚಾಲಕರೂ ಇಲ್ಲಿ ಚಲಿಸಿದರೆ ಬೀಳಲು ಸಾಧ್ಯ.
ರಸ್ತೆ ದುಃಸ್ಥಿತಿ ಕಂಡ ಪರ್ಕಳ ಅಚ್ಯುತ
ನಗರದ ನಿವಾಸಿ ಕೆ.ಎಸ್.ರೈ, ಗಣೇಶರಾಜ್ ಸರಳೆಬೆಟ್ಟು ಅವರು ಪ್ರಧಾನಮಂತ್ರಿಯವರಿಗೆ ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ರಸ್ತೆಯನ್ನು ಮೇಲ್ದರ್ಜೆಗೇರಿಸಿದರೂ ರಸ್ತೆ ದುಃಸ್ಥಿತಿ ಮುಂದುವರಿಯುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಪ್ರಧಾನಿಯವರಿಗೆ ದೂರು ಸಲ್ಲಿಸಿದರೆ ತ್ವರಿತವಾಗಿ ಪರಿಹಾರ ಸಿಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಪರ್ಕಳಕ್ಕೂ ಇದು ಅನ್ವಯವಾಗುತ್ತದೋ ನೋಡಬೇಕು…ಅಂತೂ ಒಟ್ಟಾರೆ ಪ್ರಧಾನಮಂತ್ರಿ ಕಚೇರಿ ತಲುಪುವ ಭಾಗ್ಯ ಪರ್ಕಳ ಬಸ್ ನಿಲ್ದಾಣಕ್ಕೆ ದಕ್ಕಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.