ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯ: ಅಯ್ಯಪ್ಪ ಮಾಗಿ
Team Udayavani, Jul 15, 2017, 2:30 AM IST
ಉಡುಪಿ: ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕಕರ, ಆಡಳಿತ ಮಂಡಳಿಯ ಮತ್ತು ಮುಖ್ಯವಾಗಿ ವಿದ್ಯಾರ್ಥಿಗಳ ಸಾಧನೆ, ಸಹಕಾರ ಅತಿ ಮುಖ್ಯವೆಂದು ಶಿಕ್ಷಣಾಧಿಕಾರಿ ಅಯ್ಯಪ್ಪ ಮಾಗಿ ಹೇಳಿದರು.
ಅವರು ಜು. 14ರಂದು ವಳಕಾಡು ಸರಕಾರಿ ಸಂಯುಕ್ತ ಶಾಲೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರಿ ಶಾಲೆಗಳ ಸಾಲಿನಲ್ಲಿ ವಳಕಾಡು ಶಾಲೆ ವಿಶಿಷ್ಟ ಸಾಧನೆಯನ್ನು ಮಾಡುತ್ತಿದೆ. ಈ ಬಗ್ಗೆ ವಿಷಯಗಳನ್ನು ಕೇಳಲು ಹೆಮ್ಮೆಯಾಗುತ್ತದೆ. ಈ ಶಾಲೆಯನ್ನು ಇತರ ಸರಕಾರಿ ಶಾಲೆಗಳು ಅನುಸರಿಸಬೇಕೆಂದೂ ಅವರು ಹೇಳಿದರು.
ಶಾಲಾ ಕ್ಯಾಲೆಂಡರ್ ಅನ್ನು ಕೆನರಾ ಬ್ಯಾಂಕ್ ಕೋರ್ಟು ರಸ್ತೆಯ ಪ್ರಬಂಧಕ ವಿನಯಕುಮಾರ್ ಬಿಡುಗಡೆ ಗೊಳಿಸಿದರು.ಉಡುಪಿ ತಾಲೂಕು ಇಂಡಸ್ಟ್ರಿಯಲ್ ಕೋ-ಅಪರೇಟಿವ್ ಸೊಸೈಟಿಯ ರಾಜೇಶ್, ಮಣಿಪಾಲ ಪ್ರತಿಷ್ಠಾನದ ಸ್ಮಾರ್ಟ್ ಕ್ಲಾಸ್‌ನ ಉಷಾ ಪೈ, ನಗರ ಸಭಾ ಸದಸ್ಯೆ ಗೀತಾ ರವಿ ಶೇಟ್, ಪ್ರಾಥಮಿಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ನಾಗಭೂಷಣ ಶೇಟ್, ಪ್ರೌಢ ಶಾಲಾ ವಿಭಾಗದ ಉಪಾಧ್ಯಕ್ಷರಾದ ಇಂದು ರಾಮಾನಂದ ಭಟ್,ನೋಡಲ್ ಅಧಿಕಾರಿಗಳಾದ ಸುಬ್ರಹ್ಮಣ್ಯ ಭಟ್,ನಾಗರಾಜ್, ಪದವೀಧರೇತರ ಮುಖ್ಯೋಪಾಧ್ಯಾಯಿನಿ ಕುಸುಮ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಮೈಸ್‌ನ ಗಾಯತ್ರಿ ಉಪಾಧ್ಯಾಯ ಎಸ್‌ಎಸ್‌ಎಲ್‌ಸಿ ಸಾಧಕರಿಗೆ ನಗದು ಬಹುಮಾನ ನೀಡಿದರು.
ವಳಕಾಡು ಶಾಲೆಗಾಗಿ ಪ್ರಸ್ತುತ ಪಡಿಸಿದ ಹೊಸಹಾಡನ್ನು ಸುರೇಶ್ ಕಾಮತ್, ಮಾಧವ್ ಕಾಮತ್ ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಸರಕಾರದ ಶೂ ಭಾಗ್ಯವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಬಿ ಸ್ವಾಗತಿಸಿ, ಶಿಕ್ಷಕಿ ಸುಗುಣಾ ವಂದಿಸಿದರು. ವಿದ್ಯಾರ್ಥಿಗಳಾದ ನಚಿಕೇತ, ವಿಸ್ಮಯ್ ಕಾರ್ಯಕ್ರಮ ನಿರೂಪಿಸಿದರು.
“ಉದಯವಾಣಿ’ ಶಿಕ್ಷಣ ಮಾರ್ಗದರ್ಶಿ ಬಿಡುಗಡೆ
ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ವಿಶೇಷ ಕೊಡುಗೆ ನೀಡುತ್ತಿರುವ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ಸಂಚಿಕೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮೃತ್ ಶೆಣೈ ಬಿಡುಗಡೆಗೊಳಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ವಿದ್ಯೆ ಪಡೆಯುವುದು ಕಷ್ಟಕರವಾಗಿತ್ತು. ಯಾವುದೇ ಸವಲತ್ತುಗಳು ಸಿಗುತ್ತಿರಲಿಲ್ಲ. ಈಗಿನ ವಿದ್ಯಾರ್ಥಿಗಳು ಅದೃಷ್ಟವಂತರು. ಎಲ್ಲ ರೀತಿಯ ಸೌಕರ್ಯಗಳು ಸಿಗುತ್ತಿವೆ. ಹೆತ್ತವರಲ್ಲಿಯೂ ಮಕ್ಕಳಿಗೆ ಉತ್ತಮ ವಿದ್ಯೆ ಕೊಡಿಸಬೇಕೆಂಬ ಹಂಬಲವಿರುತ್ತದೆ. ಹಾಗೆಯೇ ವಿವಿಧ ಸಂಘ-ಸಂಸ್ಥೆಗಳು, ನೆರವಾಗುತ್ತಿದ್ದಾರೆ. ಹಿಂದೆ ಗೈಡ್‌ಗಳಿಗೆ ಹೆಚ್ಚು ಮೊರೆ ಹೋಗುತ್ತಿದ್ದರು. ಆದರೆ ಈಗ ವಿದ್ಯಾರ್ಥಿಗಳಿಗೆ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಬಹಳಷ್ಟು ನೆರವಾಗುತ್ತಿದೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮೃತ್ ಶೆಣೈ ಅವರು ಉದಯವಾಣಿಯ ಶಿಕ್ಷಣ ಮಾರ್ಗದರ್ಶಿ ಪತ್ರಿಕೆಯನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ವಿತರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.