ಬಂದ್ರು, ಬಿರಿಯಾನಿ ತಿಂದ್ರು, ಹಣ ತಗೊಂಡು ಹೋದ್ರು!

Team Udayavani, Jul 15, 2017, 3:50 AM IST

1407bdre1a.jpg

ಹಳ್ಳಿ ಹಳ್ಳಿಗಳಲ್ಲಿ ಪಸರಿಸಿದೆ ಮದ್ಯ ಮಾರಾಟದ ಕಮಾಲ್‌
ಬೈಂದೂರು: ಇತ್ತೀಚೆಗಿನ ಕೆಲವು ಇಲಾಖೆಯ ನಡವಳಿಕೆಗಳು ವಾಸ್ತವವೊ ಅಥವಾ ಸಿನಿಮಾದ ದೃಶ್ಯವೊ ಎಂದು ಯೋಚಿಸುವಂತೆ ಮಾಡುತ್ತಿದೆ. ಕಾನೂನು ಪಾಲಿಸಬೇಕಾದ ಇಲಾಖೆಯ ಅಧಿಕಾರಿಗಳು ಕಣ್ಣೆದುರೆ ಕಾನೂನು ಬಾಹಿರ ಚಟುವಟಿಕೆ ನಡೆದರೂ ನಾಟಕೀಯವಾಗಿ ಕಾನೂನು ಕ್ರಮ ಕೈಗೊಳ್ಳುವ ಕಣ್ಣುಮುಚ್ಚಾಲೆಯಾಟ ಆಡಿದ ಘಟನೆ ಬೈಂದೂರು ಭಾಗದಲ್ಲಿ ಕಳೆದೆರಡು ದಿನಗಳಲ್ಲಿ ನಡೆದಿದೆ.

ಏನಿದು ಘಟನೆ
ತಾಲೂಕು ಕೇಂದ್ರವಾಗಿ ಘೋಷಣೆಯಾದ ಬೈಂದೂರು ಅತ್ಯಂತ ವಿಶಾಲ ವ್ಯಾಪ್ತಿ, ಜನಸಂಖ್ಯೆಯ ಅಧಿಕ ಸಾಂದ್ರತೆಯಿದ್ದರೂ ಪಟ್ಟಣ ಪ್ರದೇಶ ಮಾತ್ರ ಸೀಮಿತ ವ್ಯಾಪ್ತಿ ಹೊಂದಿದೆ.

ಅನಧಿಕೃತ ಮದ್ಯ ಮಾರಾಟ 
ಸರಕಾರ ಇತ್ತೀಚೆಗೆ ಹೆದ್ದಾರಿ ಸಮೀಪವಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕೆನ್ನುವ ಮಹತ್ವಾಕಾಂಕ್ಷೆಯ ನಿರ್ಣಯದಿಂದಾಗಿ ಬಹುತೇಕ ಮದ್ಯ ಮಾರಾಟಗಾರರು ಅತಂತ್ರರಾಗುವಂತೆ ಪರಿಸ್ಥಿತಿ ಉಂಟಾಗಿರುವುದು ಎಲ್ಲಾ ಕಡೆ ಕಂಡು ಬಂದಿದೆ. ಹೊಸದಾಗಿ ಮದ್ಯದಂಗಡಿ ತೆಗೆಯುವ ಪ್ರಯತ್ನಕ್ಕೆ ನೂರೆಂಟು ವಿಘ್ನ ಒಂದೆಡೆಯಾದರೆ, ಸೂಕ್ತ ಸ್ಥಳಗಳಲ್ಲಿ ಅಂಗಡಿ ಹುಡುಕುವುದು ಇನ್ನಷ್ಟು ಸವಾಲಾಗಿ ಪರಿಣಮಿಸಿದೆ. ಇದರ ನಡುವೆ ಬೈಂದೂರು ಭಾಗದ ಬಹುತೇಕ ಮದ್ಯದಂಗಡಿ ಮಾಲಕರು ಒಳ ರಸ್ತೆಗಳಲ್ಲಿ ಪ್ರತಿಷ್ಠಿತ ಬಡಾವಣೆಗಳಲ್ಲಿ ಮದ್ಯದಂಗಡಿ ಪ್ರಾರಂಭಿಸಿದ್ದಾರೆ. ಈ ಮೂಲಕ ರಾಜಕೀಯವಾಗಿ ಪರಸ್ಪರ ಹಾವು ಮುಂಗಿಸಿಯಾದರು ಸಹ ವ್ಯವಹಾರದಲ್ಲಿ ಒಗ್ಗಟ್ಟು ತೋರಿಸುವ ವ್ಯಕ್ತಿಗತ ಹಿರಿಮೆ ತೋರಿದ್ದಾರೆ. ಇದರ ನಡುವೆ ಪ್ರತಿದಿನ ಮದ್ಯ ಸೇವಿಸದಿದ್ದರೆ ನಿದ್ರೆ ಬಾರದೆ ಪಾನಪ್ರಿಯರು ಮಾತ್ರ ಊರಲ್ಲಿರುವ ಒಂದೊಂದು ಮದ್ಯದಂಗಡಿ ಬಾಗಿಲು ಮುಚ್ಚಿರುವುದರಿಂದ ಪ್ರತಿದಿನ ಬೈಂದೂರಿಗೆ ಪ್ರಯಾಣಿಸಬೇಕಾಗಿರುವುದು ಅನಿವಾರ್ಯವಾಗಿದೆ. ಇದರಿಂದ ಬಾಟಲಿಗೆ ತಗಲುವ ದರಕ್ಕಿಂತ ವಾಹನಕ್ಕೆ ತಗಲುವ ವೆಚ್ಚವೆ ಅಧಿಕವಾಗಿದೆ. ಇಂತಹ ಸಂದಿಗ್ಧತೆ ಅರಿತ ಕೆಲವು ಗ್ರಾಮೀಣ ಭಾಗದ ಅಂಗಡಿಗಳು, ಹೊಟೇಲ್‌ಗ‌ಳು ಅನಧಿಕೃತ ಮದ್ಯ ಮಾರಾಟ ಪ್ರಾರಂಭಿಸಿವೆ.

ಸಾರ್ವಜನಿಕರ ಆರೋಪ
ಮಳೆಗಾಲದ ಮಳೆಯ ಅಬ್ಬರದಲ್ಲಿ ಸಣ್ಣ ಪುಟ್ಟ ಅಂಗಡಿಗಳು ಮಿನಿ ಬಾರ್‌ಗಳಾಗಿ ಮಾರ್ಪಟ್ಟಿವೆ. ಸರಕಾರದ ಕಾನೂನುಗಳಿಂದ ಮದ್ಯ ಮುಕ್ತವಾಗಿದೆ ಎಂದು ಸಂಭ್ರಮಿಸಿದ ಮಹಿಳಾ ಸಂಘ, ಗ್ರಾಮಾಭಿವೃದ್ಧಿ ಯೋಜನೆಗಳಿಗೆ ಮಾತ್ರ ಅನಧಿಕೃತ ಮದ್ಯ ಮಾರಾಟದಿಂದ ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎನ್ನುವಂತಾಗಿದೆ. ಹೀಗಾಗಿ ಮಹಿಳೆಯರು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು ಮಾತ್ರ ಹೊಟೇಲ್‌ಗ‌ಳಲ್ಲಿ ಬಿರಿಯಾನಿ ಊಟ ಮಾಡಿ ಕಾಟಾಚಾರದ ದಾಳಿ ನಡೆಸಿ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಪಡೆದು ಹೋಗಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಸಿನಿಮೀಯ ಮಾದರಿಯಲ್ಲಿ ಮಾತುಕತೆ 
ಬೈಂದೂರು – ಶಿರೂರು ಭಾಗದಲ್ಲಿ ನಡೆದ ಅಬಕಾರಿ ದಾಳಿ ಮಾತ್ರ ಒಂಥರಾ ಸಿನಿಮೀಯ ಶೈಲಿಯ ಅನುಕರಣೆ ಎಂಬಂತಿದೆ. ಮದ್ಯ ಸಮೇತ ಸಿಕ್ಕಿ ಬಿದ್ದವರನ್ನು ವಶಕ್ಕೆ ಪಡೆದು ನಿರ್ಜನ ರಸ್ತೆಗೆ ಕರೆದೊಯ್ದ ಬಳಿಕ ಅವರನ್ನು ಮಾಲು ಸಮೇತ ಅಂಗಡಿಗೆ ಬಿಟ್ಟು ಹೋಗಿರುವುದು ಇಲಾಖೆಯ ನಾಟಕೀಯತೆಯನ್ನು ಬಿಂಬಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ಮಹಿಳಾ ಮಂಡಳಿಯವರು ಇಷ್ಟೊಂದು ಬೆಳವಣಿಗೆ ಸಾಧಿಸಿದ ಸಮಾಜದ ನಡುವೆ ಅಧಿಕಾರಿಗಳು ಈ ರೀತಿ ವರ್ತಿಸಿದರೆ ಇನ್ನು ಜನಸಾಮಾನ್ಯರು ಕಾನೂನು ಹಾಗೂ ಅಧಿಕಾರಿಗಳ ಮೇಲೆ ನಂಬಿಕೆ ಇಡುವುದಾದರೂ ಹೇಗೆ ಎನ್ನುವಂತಾಗಿದೆ ಎನ್ನುತ್ತಾರೆ.

ಮದ್ಯ ಬಾಟಲಿ ಹೋಮ್‌ ಡೆಲಿವರಿ
ಹಿಂದೆಲ್ಲಾ ಮದ್ಯದಂಗಡಿಗೆ ಹೋಗಿ ಮದ್ಯಪಾನ ಮಾಡಬೇಕಾಗಿತ್ತು. ಆದರೆ ಬೈಂದೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಈಗ ಮೊಬೈಲ್‌ ಮದ್ಯ ಪೂರೈಕೆ ಪ್ರಾರಂಭವಾಗಿದೆ.ಮದ್ಯದಂಗಡಿ ಬಂದ್‌ ಆದ ಪರಿಣಾಮ ಕೆಲಸ ಕಳೆದುಕೊಂಡ ಹುಡುಗರು ತಮ್ಮ ಹಳೆಯ ಗಿರಾಕಿಗಳಿಗೆ ಪೋನ್‌ ಮೂಲಕ ಸಂಪರ್ಕಿಸಿ ಬೈಕ್‌ ಢಿಕ್ಕಿಯಲ್ಲಿ ಬಾಟಲಿ ಸಂಗ್ರಹಿಸಿಟ್ಟುಕೊಂಡು ಹೋಮ್‌ ಡೆಲಿವರಿ ಪ್ರಾರಂಭಿಸಿದ್ದಾರೆ. ಅದೇನಿದ್ದರೂ ಸಂಬಂಧಪಟ್ಟ ಇಲಾಖೆಯವರಿಗೆ ಸಾರ್ವಜನಿಕರು ದೂರು ನೀಡಿದರೂ ಕಾಟಾಚಾರದ ದಾಳಿ ಮಾಡುವ ಜತೆಗೆ ಪರೋಕ್ಷವಾಗಿ ಅನಧಿಕೃತ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿರುವ ವಿಷಯ ಬೈಂದೂರು ಭಾಗದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇಲಾಖೆ ಹಳ್ಳಿ ಹಳ್ಳಿಗಳಲ್ಲಿ ಎಗ್ಗಿಲ್ಲದೆ ನಡೆಯುವ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ಸಾಮಾಜಿಕ ಸಾಮರಸ್ಯ ಕಾಪಾಡಿಕೊಳ್ಳಬೇಕಾಗಿದೆ.

– ಅರುಣ ಕುಮಾರ್‌ ಶಿರೂರು

ಟಾಪ್ ನ್ಯೂಸ್

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1

Kundapura; ಜಪ್ತಿ: ಅಂಗಡಿಗೆ ಬೆಂಕಿ: ‘ದ್ವೇಷದ ಕಿಡಿ’ ಎಂಬ ಶಂಕೆ; ದೂರು

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

7-shahapur

Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.