‘ಕಲಶದಿಂದ ಸೌಭಾಗ್ಯ ಪ್ರಾಪ್ತಿ’ : ಚಾತುರ್ಮಾಸ್ಯ ಕಲಶ ಸ್ಥಾಪನೆ


Team Udayavani, Jul 15, 2017, 2:50 AM IST

Kalasha-14-7.jpg

ವೇಣೂರು: ಕಲಶ ಪ್ರಾಪ್ತಿ ಮಾಡಿಕೊಂಡವನಿಗೆ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಸಂಕುಚಿತ ಭಾವನೆ ದೂರ ಮಾಡಲು ಚಾತುರ್ಮಾಸ್ಯದಲ್ಲಿ ಕಲಶ ಸ್ಥಾಪನೆ ಮಾಡಲಾಗುತ್ತದೆ. ಕಲಶವನ್ನು ಪಡೆದುಕೊಂಡವರಿಗೆ ಐಶ್ವರ್ಯ, ಸಮೃದ್ಧಿ, ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ಪುಷ್ಪದಂತ ಮುನಿಶ್ರೀ 108 ಶ್ರೀ ಪ್ರಸಂಗ ಸಾಗರ ಮಹಾರಾಜರು ಹೇಳಿದರು. ಅವರು ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಜು. 7ರಿಂದ ಅ. 19ರವರೆಗೆ ನಡೆಯುತ್ತಿರುವ ಚಾತುರ್ಮಾಸ್ಯ ಪುಷ್ಪ ವರ್ಷಾಯೋಗದ ನಿಮಿತ್ತ ಶುಕ್ರವಾರ ಜರಗಿದ ಕಲಶ ಸ್ಥಾಪನಾ ಕಾರ್ಯಕ್ರಮದಲ್ಲಿ ಮಂಗಲ ಪ್ರವಚನ ನೀಡಿದರು.

ಭಾರತೀಯ ಪರಂಪರೆಯಲ್ಲಿ ಬರುವ ಹಬ್ಬ ಹರಿದಿನಗಳ ಮಂಗಲ ಕಾರ್ಯಗಳ ವೇಳೆ ಕಲಶ ಸ್ಥಾಪನೆ ಮಾಡಲಾಗುತ್ತದೆ. ಅದೇ ರೀತಿ ಮುನಿಗಳ ಚಾತುರ್ಮಾಸ್ಯ ಸಂದರ್ಭ ಮಾಡುವ ಕಲಶಗಳಿಗೆ ವಿಶೇಷ ಅರ್ಥ ಮತ್ತು ಸ್ಥಾನವಿದೆ. ಬೆಂಗಳೂರಿನಲ್ಲಿ ಚಾತುರ್ಮಾಸ್ಯ ಆಚರಿಸುತ್ತಿರುವ ಗುರುಗಳಾದ ಶ್ರೀ ಪುಷ್ಪದಂತ ಸಾಗರ್‌ಜೀ ಮುನಿಮಹಾರಾಜರು ವೇಣೂರಿನ ಶ್ರಾವಕ -ಶ್ರಾವಿಕೆಯರಿಗೋಸ್ಕರ ವಿಶೇಷವಾಗಿ ಮಂತ್ರಿತ ಕಲಶಗಳನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಅಪೂರ್ವ ಕಾರ್ಯಕ್ರಮ
ಚಾತುರ್ಮಾಸ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲ ಕಲಶ ಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಜಿಲಸೀಮೆಯಲ್ಲಿ ಇಂತಹ ಅಪೂರ್ವ ಕಾರ್ಯಕ್ರಮ ನಮಗೆಲ್ಲಾ ಸಿಗುತ್ತಿರುವುದು ಸಂತಸ ತಂದಿದೆ. ಇದರಿಂದ ಜೈನ ಧರ್ಮೀಯರಲ್ಲಿ ಚಾರಿತ್ರ್ಯ ಪ್ರಭಾವನೆಯಾಗುತ್ತದೆ. ಮುನಿಗಳ ಚಾತುರ್ಮಾಸ್ಯ ವೇಣೂರಿನಲ್ಲಿ ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಆಶಿಸಿದರು. ಉದ್ಯಮಿ ಪುಷ್ಪರಾಜ ಜೈನ್‌ ಅವರು ಪುಷ್ಪದಂತ ಸಾಗರ್‌ಜೀ ಮುನಿಮಹಾರಾಜರ ಹಾಗೂ ಶ್ರೀ ಗೋಮಟೇಶ್ವರ ಸ್ವಾಮಿಯ ಭಾವಚಿತ್ರವನ್ನು ಅನಾವರಣಗೊಳಿಸಿದರು. ಬಜಿರೆ ಹಲ್ಲಂದೋಡಿ ಶ್ರವಣ ಕುಮಾರಿ ಅವರಿಂದ ಮಂಗಳ ನೃತ್ಯ ನೆರವೇರಿತು.

ಸಮಾರಂಭದಲ್ಲಿ  ಕ್ಷುಲ್ಲಕ ಸುಧರ್ಮಗುಪ್ತ ಮಹಾರಾಜರು, ಬಾಲಬ್ರಹ್ಮಚಾರಿ ಸೋಮದೇವ ಭೆ„ಯ್ನಾಜಿ, ಬಾಲ ಬ್ರಹ್ಮಚಾರಿ ಶ್ರೀಕಾಂತ ಭೈಯಾಜಿ, ಬಾಲಬ್ರಹ್ಮಚಾರಿ ಧರ್ಮನಾಥ ಭೈಯಾಜಿ, ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿ, ವೇಣೂರು ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ, ಜೈನ್‌ ಮಿಲನ್‌, ಯುವಜನ ಸಂಘ, ಮಹಿಳಾ ಸಂಘದ ಸದಸ್ಯರು ಪದಾಧಿಕಾರಿಗಳು, ಶ್ರಾವಕ- ಶ್ರಾವಕಿಯವರು ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಕಾರ್ಯಾಧ್ಯಕ್ಷ ನವೀನ್‌ಚಂದ್‌ ಬಲ್ಲಾಳ್‌ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಉಪನ್ಯಾಸಕ‌ ಮಹಾವೀರ ಜೈನ್‌ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು.

ಶ್ರೀ ಪ್ರಸಂಗಸಾಗರ ಮಹಾರಾಜರ ವೇಣೂರು ಪುರಪ್ರವೇಶವು ಜು. 2ರಂದು ನಡೆದಿತ್ತು. ಜು. 9ರಂದು ಚಾತುರ್ಮಾಸ್ಯ ವರ್ಷಾಯೋಗ ಆಚರಣೆಯನ್ನು ಮುನಿಗಳು ಆರಂಭಿಸಿದ್ದರು. ಮುನಿಗಳು ಅ. 10ರ ತನಕ ವೇಣೂರಿನ ಬಾಹುಬಲಿ ಕ್ಷೇತ್ರದಲ್ಲಿ ಚಾತುರ್ಮಾಸ್ಯವನ್ನು ನಡೆಸಲಿದ್ದಾರೆ. ಈ ವೇಳೆ ವೇಣೂರಿನ ಜೈನ ಬಸದಿಗಳಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಿರಂತರ ಜರಗಲಿವೆ. 

ಮಂಗಲಕಲಶವೆಂದರೆ…
ಮಂಗಲ ಕಲಶವು ಪಂಚಧಾತು, ನವರತ್ನ, ಬೆಳ್ಳಿ ಓಂ, ಬೆಳ್ಳಿ ಸ್ವಸ್ತಿಕ, ಬೆಳ್ಳಿ ನಾಣ್ಯ, ಬಾದಾಮ್‌, ಅಡಿಕೆ, ಕಾಯಿ, ಅರಸಿನ ಬೇರು, ಲವಂಗ, ಹಳದಿ, ಸಾಸಿವೆ, ಅಕ್ಕಿ ಮೊದಲಾದ ಮಂಗಲ ದ್ರವ್ಯಗಳಿಂದ ಕೂಡಿರುತ್ತದೆ. ಮಂಗಲ ದ್ಯವ್ಯಗಳಿಂದ ತುಂಬಿದಂತಹ ಬೆಳ್ಳಿ ಮಂಗಲ ಕಲಶಗಳನ್ನು ಮುನಿಶ್ರೀಗಳು ತಮ್ಮ ಧಾರ್ಮಿಕ ವಿಧಿ ವಿದಾನ ಹಾಗೂ ಸಿದ್ಧಭಕ್ತಿ, ಯೋಗಿ ಭಕ್ತಿ, ಚೈತ್ಯ ಭಕ್ತಿ, ಶಾಂತಿ ಭಕ್ತಿ, ಸಮಾಧಿ ಭಕ್ತಿ ಮತ್ತು ಆದಿ ಭಕ್ತಿ ಮಂತ್ರೋಚ್ಚಾರಣೆ ಮತ್ತು ತಪಸಾಧನೆಯಿಂದ ಕಲಶವನ್ನು ಸ್ಥಾಪನೆ ಮಾಡುತ್ತಾರೆ.

ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ ಮತ್ತು ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಈ ಕಲಶಗಳನ್ನು ಮಂತ್ರೋಚ್ಛಾರದಿಂದ ತುಂಬಲಾಗುತ್ತದೆ.
– ಮುನಿ ಪ್ರಸಂಗ ಸಾಗರ್‌ಜೀ

ಟಾಪ್ ನ್ಯೂಸ್

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.