ಧರ್ಮ ರಕ್ಷಣೆಗಾಗಿ ಎಲ್ಲರೂ ಒಂದಾಗಬೇಕು : ಆನೆಗುಂದಿಶ್ರೀ


Team Udayavani, Jul 15, 2017, 2:55 AM IST

14ksde5.jpg

ಕಾಸರಗೋಡು: ನಮ್ಮ ಧರ್ಮಾಚರಣೆಗೆ ತೊಂದರೆಯಾದಲ್ಲಿ ಧರ್ಮ ರಕ್ಷಣೆಗಾಗಿ ನಾವೆಲ್ಲರೂ ಒಂದಾಗಬೇಕು. ಎಲ್ಲಾ ಎಲ್ಲೆಗಳನ್ನು ಮೀರಿ ಸಮಸ್ತ ಜೀವ ಸಂಕುಲವನ್ನು ಒಂದೇ ಕುಟುಂಬ ಎಂದು ಭಾವಿಸುವ  ಸಂತರು. ಗುರುಗಳಾಗಿ ಮುಕ್ತಿ ಪಥದತ್ತ ಕೊಂಡೊಯ್ಯುವ ಮಾರ್ಗದರ್ಶಕರು ಎಂದು ಕಟಪಾಡಿ ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಹೇಳಿದರು.

ಅವರು ಕಾಪು ಕಳತ್ತೂರು ಕುಶಲಶೇಖರ ಶೆಟ್ಟಿ ಅಡಿಟೋರಿಯಂನಲ್ಲಿ ಶ್ರೀ ಸ್ವಾಮೀಜಿಗಳವರು ಕುತ್ಯಾರಿನ ಶ್ರೀ ಮಠದ ನಿವೇಶನದಲ್ಲಿ ಕೈಗೊಳ್ಳಲಿರುವ ಚಾತುರ್ಮಾಸ್ಯ ವ್ರತಾಚರಣೆ ಸಂಬಂಧ ನಡೆಯಲಿರುವ ಪುರಪ್ರವೇಶೋತ್ಸವದ ಸಂಬಂಧ ಸಾರ್ವಜನಿಕ ಸ್ವಾಗತ ಸಮಿತಿ ವತಿಯಿಂದ ನಡೆದ ಧಾರ್ಮಿಕ ಸಭೆ ಸಂತ ದರ್ಶನ ಕಾರ್ಯಕ್ರಮದಡಿ ಪೌರಸಮ್ಮಾನವನ್ನು ಸ್ವೀಕರಿಸಿ ತಮ್ಮ ಆಶೀರ್ವಚನದಲ್ಲಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುರಪ್ರವೇಶೋತ್ಸವ ಸಾರ್ವಜನಿಕ ಸ್ವಾಗತ ಸಮಿತಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಗುರ್ಮೆ ಮಾತನಾಡಿ, ಅರಿವಿನ ಅರಮನೆಯ ಹೆಬ್ಟಾಗಿಲು ಗುರುಪೀಠ. ದೊರಕಿರುವ ಗುರುವನ್ನು ಉಳಿಸಿಕೊಳ್ಳುವ ಗುರುತರ ಹೊಣೆ ಹಿಂದು ಸಮಾಜಕ್ಕಿದೆ. ಸಜ್ಜನರ ಕೂಟ ಬದುಕಿಗೆ ಸದಾ ಸಂಭ್ರಮ, ಸಡಗರವನ್ನು ಕೊಡುತ್ತದೆ. ಊರಿಗೆ ಊರೇ ಹಬ್ಬವನ್ನಾಚರಿಸುವ ಸಡಗರ ಸಂಭ್ರಮವು ಈ ಸಂದರ್ಭ ಆಗುತ್ತಿದೆ. ತಿದ್ದಿ ತೀಡಿ ಸಮಾಜವನ್ನು ಕಟ್ಟುವ ಕೆಲಸ ಧರ್ಮಗುರುಗಳಿಂದಾಗಲಿದೆ. ಆ ನಿಟ್ಟಿನಲ್ಲಿ ಸಮಸ್ತರು ಕಾಲಗತಿಯೊಂದಿಗೆ ಹೆಜ್ಜೆ ಹಾಕಬೇಕಿದೆ ಎಂದರು.
ವಿಧಾನ ಪರಿಷತ್‌ ಸದಸ್ಯ, ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹಿಂದು ಧರ್ಮದ ಜಗದ್ಗುರುಗಳಾದ ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರಿಂದ ಆತಂಕದ ನಡುವೆಯೂ ಹಿಂದೂ ಧರ್ಮ ವನ್ನು ಕಟ್ಟುವ ಕಾಯಕ ಕಾರ್ಯರೂಪಕ್ಕಿಳಿ ಯಬೇಕಿದೆ. ನಮ್ಮ ಧರ್ಮ, ಸ್ವಾಭಿಮಾನ, ವಿಶ್ವಾಸ ನಂಬಿಕೆ ಇದ್ದಲ್ಲಿ ನಿಶ್ಚಯವಾಗಿ ಗೆಲುವು ಲಭಿಸುತ್ತದೆ. ಚಾತುರ್ಮಾಸ್ಯವು ಹಿಂದು ಸಮಾಜಕ್ಕೆ ಶಕ್ತಿ ಸಾಮರ್ಥ್ಯ ಕೊಡಲಿ ಎಂದರು.  

ಧಾರ್ಮಿಕ ಉಪನ್ಯಾಸ ನೀಡಿದ ಯಕ್ಷಗಾನ ಅರ್ಥಧಾರಿಗಳಾದ ಉಜಿರೆ ಅಶೋಕ ಭಟ್‌, ಧಾರ್ಮಿಕ, ವೇದೋಕ್ತ ಅನುಷ್ಠಾನ ಚಾತುರ್ಮಾಸ್ಯ, ತ್ಯಾಗದಿಂದ ಮಾತ್ರ ಗುರುಗಳ ಅನುಗ್ರಹವಾಗುತ್ತದೆ. ಸಮಾಜವನ್ನು ಸಂಘಟಿಸುವ, ಸಮಾಜವನ್ನು ಮೋಕ್ಷದೆಡೆ ಕೊಂಡೊಯ್ಯುವ ಧಾರ್ಮಿಕ ಸಂದೇಶ ಗುರುಗಳಿಂದಾಗುತ್ತದೆ. ಕ್ರಿಯಾ ಯಜ್ಞ, ಜ್ಞಾನಯಜ್ಞ, ತ್ಯಾಗದ ಆದರ್ಶವೇ ಚಾತುರ್ಮಾಸ್ಯವಾಗಿದೆ ಎಂದರು.

ಜಿ.ಪಂ. ಅಧ್ಯಕ್ಷ ದಿನಕರಬಾಬು, ರಾಜ್ಯಧಾರ್ಮಿಕ ಪರಿಷತ್‌ ಸದಸ್ಯ ಕೇಂಜ ಶ್ರೀಧರ ತಂತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಮಾತನಾಡಿದರು.

ಮಾಜಿ ಶಾಸಕರಾದ ಲಾಲಾಜಿ ಆರ್‌.ಮೆಂಡನ್‌, ಪ್ರತಿಷ್ಠಾನ ಅಧ್ಯಕ್ಷರಾದ ತ್ರಾಸಿ ಸುಧಾಕರ ಆಚಾರ್ಯ, ಚಾತು ರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷರಾದ ಕೆ.ಕೇಶವ ಆಚಾರ್ಯ, ಮಾತೃ ಮಂಡಳಿ ಅಧ್ಯಕ್ಷೆ ಶಿಲ್ಪಾ ಜಿ. ಸುವರ್ಣ, ಕುತ್ಯಾರು ಅರಮನೆ ಜಿನೇಶ್‌ ಬಲ್ಲಾಳ್‌, ಶ್ರೀ ಕ್ಷೇತ್ರ ಎಲ್ಲೂರಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ವಿವಿಧ ಸಮಾಜದ ಮುಖ್ಯಸ್ಥರು ವೇದಿಕೆಯಲ್ಲಿದ್ದರು.

ಸಾರ್ವಜನಿಕ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಮುರಲೀಧರ ಪೈ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕುತ್ಯಾರು ಪ್ರಸಾದ್‌ ಪ್ರಸ್ತಾವನೆಗೈದರು. ಕಾರ್ಯದರ್ಶಿ ಜಯಪ್ರಕಾಶ್‌ ಪ್ರಭು ವಂದಿಸಿದರು. ರೇಶ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನಂತರ ಭಕ್ತಾದಿಗಳೊಂದಿಗೆ ಶ್ರೀ ಸ್ವಾಮೀಜಿಯವರ ಬೃಹತ್‌ ಶೋಭಾ ಯಾತ್ರೆಯ ಮೂಲಕ ಪಡುಕುತ್ಯಾರಿನ ಶ್ರೀ ಮಠದ ನಿವೇಶನಕ್ಕೆ ತೆರಳಲಾಯಿತು.

ಸನಾತನ ಧರ್ಮವು ಎಲ್ಲ ಧರ್ಮಕ್ಕೂ ಮಾತೃಸ್ಥಾನದಲ್ಲಿದೆ. ಯಾವುದನ್ನು ಅರಿತು, ವಿಮರ್ಶೆ ಮಾಡಿ, ಅರಿತುಕೊಂಡು ಮುಕ್ತವಾದುದನ್ನು ಅಳವಡಿಸಿಕೊಂಡು ಧಾರ್ಮಿಕನನ್ನಾಗಿಸುತ್ತದೋ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂತರಂಗದಿಂದ ಆದ ಸುಧಾರಣೆಯಿಂದ ಪರಿವರ್ತನೆ ಸಾಧ್ಯ. ವ್ಯಕ್ತಿ ಹಿತಚಿಂತನೆ ಬಿಟ್ಟು, ಸಮಷ್ಟಿಯ ಚಿಂತನೆ ಹಿಂದೂ ಬಾಂಧವರು ಬೆಳೆಸಿಕೊಳ್ಳಬೇಕು. ಕಾನೂನು ಮಾಡದೆ ಸಮಾಜದ ಸುಧಾರಣೆಯು ಸಂತರ ಸಂಪರ್ಕದಿಂದಾಗುತ್ತದೆ ಎಂದರು.

ಕಟಪಾಡಿ ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚಿಸಿದರು.

ಟಾಪ್ ನ್ಯೂಸ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.