2011 ವಿಶ್ವಕಪ್ನಲ್ಲಿ ಫಿಕ್ಸಿಂಗ್?: ತನಿಖೆಗೆ ರಣತುಂಗ ಆಗ್ರಹ
Team Udayavani, Jul 15, 2017, 3:45 AM IST
ಕೊಲಂಬೊ: 2011ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತದ ವಿರುದಟಛಿ ಶ್ರೀಲಂಕಾ ಸೋತಿರುವುದಕ್ಕೆ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಅನುಮಾನ ವ್ಯಕ್ತಪಡಿಸಿದ್ದಾರೆ.
ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆ ಬಗ್ಗೆ ತನಿಖೆ ನಡೆಸಬೇಕು ಎಂದುಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗ ಆಗ್ರಹಿಸಿದ್ದಾರೆ. ಆ ಸಂದರ್ಭದಲ್ಲಿ ನಾನು ಭಾರತದಲ್ಲಿದ್ದೆ.ತಂಡ ಸೋತಾಗ ನನಗೆ ಆಘಾತವಾಗಿತ್ತು. ಲಂಕಾ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಅದರಲ್ಲೂ ಅಂತಿಮ
ಪಂದ್ಯದಲ್ಲಿ ಮಹತ್ವದ ನಾಲ್ಕು ಆಟಗಾರರನ್ನು ಕೈಬಿಡಲಾಗಿತ್ತುಎಂದು ರಣತುಂಗ ಹೇಳಿದ್ದಾರೆ. ಇದು ರಣತುಂಗ ಮತ್ತು 2011ರಲ್ಲಿ ತಂಡದ ನಾಯಕತ್ವ ವಹಿಸಿದ್ದ ಕುಮಾರ ಸಂಗಕ್ಕರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.