ಸುಳ್ಯ: ಗಡಿಭಾಗದಲ್ಲಿ ಮುಂದುವರಿದ ವಿದ್ಯುತ್ ವ್ಯತ್ಯಯ
Team Udayavani, Jul 15, 2017, 2:55 AM IST
ಸುಳ್ಯಪದವು: ಕರ್ನಾಟಕ – ಕೇರಳದ ಗಡಿಭಾಗವಾದ ಸುಳ್ಯಪದವು, ಕನ್ನಡ್ಕದಲ್ಲಿ ಕಳೆದ ಕೆಲವು ದಿನಗಳಿಂದ 33/11 ಕೆ.ವಿ. ಮೆಸ್ಕಾಂ ತುರ್ತು ಕಾಮಗಾರಿ ಮತ್ತು ಪ್ರಕೃತಿ ವಿಕೋಪದಿಂದ ವಿದ್ಯುತ್ ವ್ಯತ್ಯಯ ಮುಂದುವರಿದೆ. ಗುರುವಾರ ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಸುಳ್ಯಪದವಿನ ಅಜ್ಜಿಕಲ್ಲು ಎಂಬಲ್ಲಿ ಭಾರೀ ಗಾತ್ರದ ಮರದ ಕೊಂಬೆ ಎಚ್.ಟಿ. ಲೈನ್ ಮೇಲೆ ಬಿದ್ದು ಸುಳ್ಯಪದವು, ಕನ್ನಡ್ಕದ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಘಟನೆ ಯಲ್ಲಿ ಎರಡು ವಿದ್ಯುತ್ ಕಂಬಗಳು ತುಂಡಾಗಿದ್ದು, ತಂತಿಗಳು ನೆಲಕ್ಕೆ ಬಿದ್ದಿವೆ. ಮೆಸ್ಕಾಂ ಇಲಾಖೆಯು ಶೀಘ್ರ ಸ್ಪಂದಿಸಿದರೂ ಶುಕ್ರವಾರ ಸಂಜೆವರೆಗೆ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ. ವಾರದಲ್ಲಿ ಮೂರು ದಿನ ಮೆಸ್ಕಾಂ ತುರ್ತುಕಾಮಗಾರಿ ನಡೆಯುತ್ತಿರುವುದರಿಂದ ಶನಿವಾರ ಮತ್ತೆ ವಿದ್ಯುತ್ ನಿಲುಗಡೆಗೊಳ್ಳಲಿದೆ.
ಬಡಗನ್ನೂರುನಿಂದ ಸುಳ್ಯಪದವು- ಕನ್ನಡ್ಕಗೆ ಬರುವ ಎಚ್.ಟಿ. ಲೈನ್ ಕನ್ನಡ್ಕ ರಕ್ಷಿತಾರಣ್ಯದಲ್ಲಿ ಹಾದು ಹೋಗಿದ್ದು, ಇಲ್ಲಿ ಮರಗಳು ತಂತಿಗಳ ಮೇಲೆ ಬೀಳುವುದು ಸಾಮಾನ್ಯವಾಗಿದೆ. ವಿದ್ಯುತ್ ವ್ಯತ್ಯಯದ ಸಂದರ್ಭದಲ್ಲಿ ಎಲ್ಲಿ ಲೈನ್ ಫಾಲ್ಟ್ ಆಗಿದೆ ಎಂದು ತಿಳಿಯುವುದು ಮೆಸ್ಕಾಂನ ಲೈನ್ ಮ್ಯಾನ್‌ಗಳಿಗೆ ಕಷ್ಟವಾಗುತ್ತಿದೆ.ಗುರುವಾರ ರಾತ್ರಿ ಭಾರೀ ಗಾತ್ರದ ಮರದ ಕೊಂಬೆಯು ಎಚ್.ಟಿ. ಲೈನ್ ಮೇಲೆ ಬಿದ್ದು ಸುಳ್ಯ ಪದವು -ಈಶ್ವರಮಂಗಲ ಜಿ.ಪಂ. ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಚಾರ ವ್ಯತ್ಯ ಯವಾದರೂ, ಸ್ಥಳೀಯ ನಿವಾಸಿಗಳು ಕೊಂಬೆಯ ಗೆಲ್ಲನ್ನು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.