ಕೆಂಪು ಬಸ್‌ನಲ್ಲಿ ಸಿನಿಮಾ ನೋಡಿ,ಎಂಜಾಯ್ ಮಾಡಿ!
Team Udayavani, Jul 15, 2017, 3:50 AM IST
ಬೆಂಗಳೂರು: ವಿಮಾನ ಮತ್ತು ಐಷಾರಾಮಿ “ತೇಜಸ್’ ರೈಲಿನಲ್ಲಿ ಇರುವ ಹೈಟೆಕ್ ಮನರಂಜನಾ ವ್ಯವಸ್ಥೆ “ಇನ್ಫೋಟೇನ್‌ಮೆಂಟ್’ ಇನ್ಮುಂದೆ ದೂರದ ಹಳ್ಳಿಗಳಲ್ಲಿ ಸಂಚರಿಸುವ ಸಾಮಾನ್ಯ ಕೆಂಪು ಬಸ್‌ಗಳಲ್ಲಿ ಕೂಡ ಲಭ್ಯವಾಗಲಿದೆ.
ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸಲು ಮತ್ತು ಪ್ರಯಾಣದುದ್ದಕ್ಕೂ ಜನರಿಗೆ ಮನರಂಜನೆ ಒದಗಿಸುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಸೇರಿದಂತೆ ಮೂರೂ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಬರುವ (ಬಿಎಂಟಿಸಿ ಹೊರತುಪಡಿಸಿ) ಎಲ್ಲ ಪ್ರಕಾರದ ಬಸ್‌ಗಳಲ್ಲಿ ಈ ಇನ್ಫೋಟೇನ್‌ಮೆಂಟ್ ಸೌಲಭ್ಯ ಒದಗಿಸಲು ನಿಗಮ ನಿರ್ಧರಿಸಿದ್ದು, ಆಗಸ್ಟ್ ಮೊದಲ ವಾರದಲ್ಲಿ ಈ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ.
“ಇನ್ಫೋಟೇನ್‌ಮೆಂಟ್’ ಅಡಿ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುವವರಿಗೆ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಚಿತ್ರಗಳು, ಕಾಟೂìನ್‌ಗಳು, ಕಾಮಿಡಿ ಶೋಗಳು ಒಳಗೊಂಡಂತೆ ಹತ್ತಾರು ಪ್ರಕಾರದ ಮನರಂಜನಾ ಕಾರ್ಯಕ್ರಮಗಳನ್ನು ಪ್ರಯಾಣಿಕರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಬೇಕಾದಷ್ಟು ಹೊತ್ತು ವೀಕ್ಷಿಸಬಹುದು. ಜತೆಗೆ ವೈ-ಫೈ ಮೂಲಕ ಇಂಟರ್‌ನೆಟ್ ಸೌಲಭ್ಯ ಹಾಗೂ 10 ಎಂಬಿಗಳವರೆಗೆ ಡೌನ್‌ಲೋಡ್ ಮಾಡಿಕೊಳ್ಳಲು ಕೂಡ ಅವಕಾಶ ಇರಲಿದೆ. ಸರ್ಕಾರಿ ಬಸ್‌ಗಳಲ್ಲಿ ಈ ಮಾದರಿಯ ಪ್ರಯೋಗ ದೇಶದಲ್ಲಿ ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವ್ಯವಸ್ಥೆಗಾಗಿ ಈಗಾಗಲೇ ಕೆಪಿಐಟಿ ಟೆಕ್ನಾಲಜೀಸ್‌ಗೆ ಟೆಂಡರ್ ನೀಡಲಾಗಿದ್ದು, ಸಿಸ್ಟ್‌ಂ ಅಳವಡಿಕೆ ಕಾರ್ಯ ಆರಂಭವಾಗಿದೆ. ಮೊದಲ ಹಂತದಲ್ಲಿ ಕೆಎಸ್‌ಆರ್‌ಟಿಸಿಯ ಶಾಂತಿನಗರ ಘಟಕದಲ್ಲಿರುವ ಐಷಾರಾಮಿ ಬಸ್‌ಗಳಲ್ಲಿ ಈ ಸೇವೆ ನೀಡಲಾಗುವುದು. ಅಕ್ಟೋಬರ್ ವೇಳೆಗೆ ಕೆಂಪು ಬಸ್‌ಗಳಿಗೆ ಇದು ವಿಸ್ತರಣೆ ಆಗಲಿದೆ. ಒಟ್ಟಾರೆ ಕೆಎಸ್‌ಆರ್‌ಟಿಸಿಯ 8,300 ಸೇರಿದಂತೆ ಒಟ್ಟಾರೆ 17 ಸಾವಿರ ಬಸ್‌ಗಳಲ್ಲಿ ಈ ಇನ್ಫೋಟೇನ್‌ಮೆಂಟ್ ಲಭ್ಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವಾಣಿಜ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು ಇನ್ಫೋಟೇನ್‌ಮೆಂಟ್?
ಇನ್ಫೋಟೇನ್‌ಮೆಂಟ್ ಎನ್ನುವುದು ಮನರಂಜನಾ ಕಾರ್ಯಕ್ರಮಗಳನ್ನು ಸಂಗ್ರಹಿಸಿಡುವ ವ್ಯವಸ್ಥೆ. ಒಂದು ಎಲೆಕ್ಟ್ರಾನಿಕ್ ಡಿವೈಸ್‌ನಲ್ಲಿ ಚಲನಚಿತ್ರಗಳು, ಕ್ರೀಡೆ, ಕಾಟೂìನ್‌ಗಳು, ಕಾಮಿಡಿ ಶೋಗಳು, ಸಂಗೀತ, ನೃತ್ಯ, ಇ-ಲೈಬ್ರರಿ ಹೀಗೆ ನಾನಾ ಪ್ರಕಾರದ ಮನರಂಜನಾ ಕಾರ್ಯಕ್ರಮಗಳನ್ನು ತುಂಬಲಾಗುತ್ತದೆ. ಇದನ್ನು ವೈ-ಫೈ ರೂಟರ್ ಮೂಲಕ ಬಸ್ ಬ್ಯಾಟರಿಗೆ ಕನೆಕ್ಟ್ ಮಾಡಲಾಗಿರುತ್ತದೆ. ಬಸ್ ಆನ್ ಆಗುತ್ತಿದ್ದಂತೆ ಈ ಸೇವೆ ಲಭ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.
ಈಗ ಇನ್ಫೋಟೇನ್‌ಮೆಂಟ್‌ನಲ್ಲಿ ಅಳಡಿಸುತ್ತಿರುವ ಕಂಟೆಂಟ್ (ವಿಷಯ)ನಲ್ಲಿ ಶೇ. 50ರಷ್ಟು ಕನ್ನಡ ಇರುತ್ತದೆ. ಉಳಿದ ಶೇ. 50ರಷ್ಟು ಹಿಂದಿ, ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಹೊರರಾಜ್ಯಗಳಲ್ಲೂ ನಿಗಮದ ಸೇವೆಗಳು ಇರುವುದರಿಂದ ಇತರೆ ಭಾಷೆಗಳಲ್ಲೂ ಮನರಂಜನಾ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಪ್ರಯಾಣಿಕರ ಆಕರ್ಷಣೆ ಹಿನ್ನೆಲೆ
ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಬಸ್‌ಗಳ ಹಾವಳಿ ಹೆಚ್ಚಿದೆ. ಕೆಲವು ಕಡೆಗಳಲ್ಲಂತೂ ಬಸ್‌ಗಳು ಖಾಲಿ ಹೋಗುತ್ತಿರುತ್ತವೆ. ಇದರಿಂದ ನಿಗಮಗಳಿಗೆ ನಷ್ಟವಾಗುತ್ತಿದೆ. ಕೆಲವು ವರ್ಷಗಳಿಂದ ವಾಯವ್ಯ, ಈಶಾನ್ಯ ರಸ್ತೆ ಸಾರಿಗೆ ನಿಗಮಗಳು ನಷ್ಟದಲ್ಲೇ ಸಾಗುತ್ತಿವೆ. ಖಾಸಗಿಯವರ ಹಾವಳಿ ಕೂಡ ಇದಕ್ಕೆ ಕಾರಣ ಎನ್ನಲಾಗಿದೆ.
ಇನ್ನು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಬಸ್‌ಗಳಲ್ಲಿ ಟೈಂಪಾಸ್ ಆಗುವುದಿಲ್ಲ. ಇಡೀ ಬಸ್‌ಗೆ ಒಂದು ಎಲ್‌ಇಡಿ ಹಾಕಬಹುದಿತ್ತು. ಆದರೆ, ಒಬ್ಬೊಬ್ಬರದ್ದು ಒಂದೊಂದು ಅಭಿರುಚಿ ಇರುತ್ತದೆ. ಕೆಲವರಿಗೆ ಚಲನಚಿತ್ರ ನೋಡಬೇಕು ಎನಿಸಿದರೆ, ಹಲವರಿಗೆ ಕಾಮಿಡಿ ಶೋ ವೀಕ್ಷಿಸುವ ಆಸೆ. ಈ ನಿಟ್ಟಿನಲ್ಲಿ ವೈಯಕ್ತಿಕವಾಗಿ ಮನರಂಜನೆ ಒದಗಿಸಲು ಇನ್ಫೋಟೇನ್‌ಮೆಂಟ್ ಸೂಕ್ತ. ಇದನ್ನು 2015-16ರಲ್ಲಿ ಸುಮಾರು 25 ಐಷಾರಾಮಿ ಬಸ್‌ಗಳಲ್ಲಿ ಪ್ರಯೋಗ ಮಾಡಲಾಗಿತ್ತು. ಉತ್ತಮ ಸ್ಪಂದನೆ ದೊರಕಿದ್ದರಿಂದ ಈಗ ಎಲ್ಲ ಬಸ್‌ಗಳಿಗೂ ವಿಸ್ತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇದರಲ್ಲಿ ಕೆಎಸ್‌ಆರ್‌ಟಿಸಿ ಸೇರಿದಂತೆ ಸಾರಿಗೆ ನಿಗಮಗಳ ಯಾವುದೇ ವೆಚ್ಚ ಇರುವುದಿಲ್ಲ. ಬದಲಿಗೆ ಟೆಂಡರ್ ಪಡೆದ ಸಂಸ್ಥೆಯಿಂದ ಪರವಾನಗಿ ಶುಲ್ಕದ ರೂಪದಲ್ಲಿ ಮೂರೂ ನಿಗಮಗಳಿಗೆ ತಿಂಗಳಿಗೆ 20 ಲಕ್ಷ ರೂ. ಬರುತ್ತದೆ. ಇದಕ್ಕೆ ಪ್ರತಿಯಾಗಿ ನಿಗಮವು ಜಾಹೀರಾತಿಗೆ ಅವಕಾಶ ನೀಡುತ್ತದೆ. ಇನ್‌ಫೋಟೇನ್‌ಮೆಂಟ್‌ನಲ್ಲಿ ಇಂತಿಷ್ಟು ಸಮಯ ತಮ್ಮ ಕಂಪೆನಿ ಬಗ್ಗೆ ಪ್ರಸಾರ ಮಾಡಬಹುದು ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಾರ್ಯನಿರ್ವಹಣೆ ಹೀಗೆ
ಪ್ರಯಾಣಿಕರು ಬಸ್ ಏರುತ್ತಿದ್ದಂತೆ ತಮ್ಮ ಸ್ಮಾರ್ಟ್ ಫೋನ್‌ನಲ್ಲಿರುವ ವೈ-ಫೈ ಆನ್ ಮಾಡಬೇಕು. ಆಗ ಆ ಮೊಬೈಲ್‌ಗೆ ಪಾಸ್‌ವರ್ಡ್ ಬರುತ್ತದೆ. ಭರ್ತಿ ಮಾಡುತ್ತಿದ ತಕ್ಷಣ ಇನ್ಫೋಟೇನ್‌ಮೆಂಟ್ ಡಿವೈಸ್‌ಗೆ ಕನೆಕ್ಟ್ ಆಗುತ್ತದೆ. ಅದರಲ್ಲಿ ಮನರಂಜನೆಯ ಸಾಕಷ್ಟು ವಿಭಾಗಗಳಿರುತ್ತವೆ. ಪ್ರಯಾಣಿಕರು ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು.ಈ ಮನರಂಜನೆಯು ಅನಿಯಮಿತವಾಗಿರುತ್ತದೆ. ಆದರೆ, ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ. ಬಸ್ ಇಳಿಯುತ್ತಿದ್ದಂತೆ ಈ ಸೇವೆ ಕಡಿತಗೊಳ್ಳುತ್ತದೆ.
ಸರ್ಕಾರಿ ಸ್ಕೀಂಗೂ ವೇದಿಕೆ?
ಪ್ರಸ್ತುತ ಮನರಂಜನೆಗೆ ಮಾತ್ರ ಸೀಮಿತವಾಗಿರುವ ಈ ಇನ್ಫೋಟೇನ್‌ಮೆಂಟ್ ವ್ಯವಸ್ಥೆ ಮುಂದಿನ ದಿನಗಳಲ್ಲಿ ಸ್ವತಃ ನಿಗಮ ಮತ್ತು ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಸೂಕ್ತ ವೇದಿಕೆಯೂ ಆಗಲಿದೆ.
ಈ ಬಗ್ಗೆ ಕೂಡ ಆಲೋಚನೆ ಇದೆ. ಅರ್ಧ ಗಂಟೆ ಅಥವಾ ಗಂಟೆಗೊಮ್ಮೆ ಕೆಲ ನಿಮಿಷಗಳು ಸರ್ಕಾರದ ಯೋಜನೆಗಳು ಅಥವಾ ಸ್ವತಃ ಆಯಾ ನಿಗಮಗಳಲ್ಲಿರುವ ಸೇವೆಗಳನ್ನು ಜಾಹಿರಾತು ರೂಪದಲ್ಲಿ ಇನ್ಫೋಟೇನ್‌ಮೆಂಟ್‌ನಲ್ಲಿ ಪ್ರಸಾರ ಮಾಡಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಕಂಪೆನಿಯೊಂದಿಗೆ ಮುಂದಿನ ದಿನಗಳಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಪ್ರಸ್ತುತ ಇನ್ಫೋಟೇನ್‌ಮೆಂಟ್ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾತ್ರ ಕಂಪೆನಿಯೊಂದಿಗೆ ಒಡಂಬಡಿಕೆ ಪ್ರಕ್ರಿಯೆ ನಡೆದಿದೆ.
ಐಷಾರಾಮಿ ಸಾರಿಗೆ ಸೇವೆಗಳಿಗೆ ಮಾತ್ರ ಸೀಮಿತವಾಗಿರುವ ಇನ್ಫೋಟೇನ್‌ಮೆಂಟ್ ವ್ಯವಸ್ಥೆ ಸಾಮಾನ್ಯ ಬಸ್‌ಗಳಲ್ಲೂ ವಿಸ್ತರಣೆ ಮಾಡುತ್ತಿರುವುದು ಹೊಸ ಪ್ರಯೋಗ. ಖಾಸಗಿ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿದ್ದು, 10-15 ದಿನಗಳಲ್ಲಿ ಈ ಸೇವೆ ಆರಂಭಗೊಳ್ಳಲಿದೆ.
– ಎಸ್.ಆರ್. ಉಮಾಶಂಕರ್, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ.
– ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.