ಮಣಿಪಾಲ ಆ್ಯಡ್ ಸಿಂಡಿಕೇಟ್ ಕಾರ್ಪೊರೇಟ್ ಕಚೇರಿ ಸ್ಥಳಾಂತರ
Team Udayavani, Jul 15, 2017, 10:54 AM IST
ಉಡುಪಿ: ಮಣಿಪಾಲದ ಜಾಹೀರಾತು ಸಂಸ್ಥೆ ಆ್ಯಡ್ಸಿಂಡಿಕೇಟ್ ಸರ್ವಿಸಸ್ ಪ್ರೈ.ಲಿ.ನ ಕಾರ್ಪೊರೇಟ್ ಕಚೇರಿ ಶುಕ್ರವಾರ ಮಣಿಪಾಲ ಸಿಂಡಿಕೇಟ್ ಸರ್ಕಲ್ನ ಸಾಯಿರಾಂ ಸೆಂಟ್ರಲ್ ಮಾಲ್ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ನೂತನ ಕಚೇರಿಯನ್ನು ಮಣಿಪಾಲ್ ಮೀಡಿಯ ನೆಟ್ವರ್ಕ್ ಲಿ. ಆಡಳಿತ ನಿರ್ದೇಶಕ ಟಿ.ಸತೀಶ್ ಯು. ಪೈ ಅವರು ಉದ್ಘಾಟಿಸಿದರು.
“ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ, ಮಣಿಪಾಲ್ ಟೆಕ್ನಾಲಜೀಸ್ ಲಿ. ಆಡಳಿತ ನಿರ್ದೇಶಕ ಟಿ.ಗೌತಮ್ ಪೈ, ವನಿತಾ ಪೈ, ಎಂಐಟಿ ನಿರ್ದೇಶಕ ಡಾ|ಜಿ.ಕೆ. ಪ್ರಭು, ಸಂಸ್ಥೆಯ ಸಿಇಒ ದ್ವಿಜೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾ ಶಕ್ತಿ ಇದ್ದಾಗ ಯೋಜನೆಗಳು ಯಶಸ್ಸು ಕಾಣುತ್ತವೆ. ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದಿದೆ. ಸಕಾರಾತ್ಮಕ ಇಚ್ಛೆ ಇದ್ದಲ್ಲಿ ಸಕಾರಾತ್ಮಕ ಶಕ್ತಿಗಳು ಪೂರಕವಾಗಿರುತ್ತವೆ ಎನ್ನುವುದು ವಿಶ್ವ ಶಕ್ತಿಯ ಸೂತ್ರ. ಪರಿಪೂರ್ಣ ನಾಯಕತ್ವ ಯಾವಾಗಲೂ ಕೇವಲ ಬೆಂಬಲ ಕೊಡುವುದಲ್ಲ, ಒಂದು ನಾಯಕತ್ವ ಇನ್ನೊಂದು ನಾಯಕತ್ವ
ವನ್ನು ಸೃಷ್ಟಿಸುತ್ತದೆ. ಇದು ವೈಯಕ್ತಿಕವಾಗಿಯೂ ಸಂಸ್ಥೆಗಳಿಗೂ ಅನ್ವಯ ಎಂದು ಡಾ| ಸಂಧ್ಯಾ ಪೈ ಹೇಳಿದರು.
ಮೌಲ್ಯ, ನೈತಿಕತೆಯೊಂದಿಗೆ ಸಂಸ್ಥೆ ಸಮಗ್ರ ವಿಕಾಸವನ್ನು ಕಂಡಿದೆ. ಇದು ಪ್ರಗತಿಯಲ್ಲದೆ ಬದಲಾವಣೆಯ ಹಿಂದಿರುವ ಚಾಲನಶಕ್ತಿಯಾಗಿದೆ. ಹಿಂದೆ ನಮ್ಮದೇ ಸಮೂಹದಿಂದ ಜಾಹೀರಾತನ್ನು ಪಡೆಯುತ್ತಿದ್ದ ಸಂಸ್ಥೆ ಅನಂತರ ಮಾರುಕಟ್ಟೆಗೆ ಮುನ್ನುಗ್ಗಿ ಸೇವೆ ಸಲ್ಲಿಸಿದ್ದರಿಂದ ಬೆಳವಣಿಗೆ ಕಂಡಿದೆ. ಇದು ವಿಶೇಷ ದಿನ ಎಂದು ಟಿ. ಗೌತಮ್ ಪೈ ಹರ್ಷ ವ್ಯಕ್ತಪಡಿಸಿದರು. ಚೀಫ್ ಕ್ರಿಯೇಟಿವ್ ಆಫೀಸರ್ ಗಣೇಶ ಸುಬ್ರಹ್ಮಣ್ಯಮ್ ಪ್ರಸ್ತಾವನೆಗೈದರು. ಕ್ರಿಯೇಟಿವ್ ಡೈರೆಕ್ಟರ್ ಪ್ರೀತಿ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್ಎಫ್ಡಿಪಿ ಪೋರ್ಟಲ್ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.