ರಮ್ಯಾ ಬಾರ್ನಾ ಮದುವೆಯಾಗಿದ್ದಾರೆ!
Team Udayavani, Jul 15, 2017, 10:55 AM IST
ಇತ್ತೀಚೆಗೆ ನಡೆದ “ಟಾಸ್’ ಚಿತ್ರದ ಪ್ರಮೋಶನ್ಗೆ ನಾಯಕಿ ರಮ್ಯಾ ಬಾರ್ನಾ ಯಾಕೆ ಬಂದಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ನಿರ್ದೇಶಕ ದಯಾಳ್ ಆಕೆಯ ತಾಯಿಗೆ ಹುಷಾರಿಲ್ಲ ಎಂದು ಉತ್ತರಿಸಿದ್ದರು. ಸದ್ಯ ರಮ್ಯಾ ಬಾರ್ನಾ ನಟಿಸಿರುವ “ಟಾಸ್’ ಚಿತ್ರ ಮುಂದಿನ ವಾರ ಬಿಡುಗಡೆಯಾಗುತ್ತಿದೆ.
ಈ ನಡುವೆಯೇ ರಮ್ಯಾ ಬಾರ್ನಾ ಕುರಿತಾದ ಸುದ್ದಿಯೊಂದು ಬಂದಿದೆ. ಅದು ರಮ್ಯಾ ಬಾರ್ನಾ ಮದುವೆ ಸುದ್ದಿ. ಹೌದು, ರಮ್ಯಾ ಬಾರ್ನಾ ಅವರು ಫಹಾದ್ ಆಲಿ ಖಾನ್ ಎನ್ನುವವರನ್ನು ಮದುವೆಯಾಗಿದ್ದು, ಮೇ 29 ರಂದು ಶಿವಾಜಿನಗರದ ರಿಜಿಸ್ಟರ್ ಆಫೀಸಿನಲ್ಲಿ ತಮ್ಮ ಮದುವೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ಸದ್ದಿಲ್ಲದೇ ವಿವಾಹವಾಗಿ ಚಿತ್ರರಂಗದಿಂದ ದೂರವಾಗಿದ್ದಾರೆ ರಮ್ಯಾಬಾರ್ನಾ.
2008ರಲ್ಲಿ “ಹನಿ ಹನಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಮ್ಯಾ ಬಾರ್ನಾ, ಆ ನಂತರ ಕನ್ನಡ, ತಮಿಳು, ತೆಲುಗು ಹಾಗೂ ತುಳು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಮ್ಯಾ ಬಾರ್ನಾ, ಇತ್ತೀಚೆಗೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಸದ್ಯ ಐದು ವರ್ಷಗಳ ಹಿಂದೆ ರಮ್ಯಾ ಬಾರ್ನಾ ಒಪ್ಪಿಕೊಂಡ “ಟಾಸ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.