ಕನ್ನಡ ಮೀಡಿಯಂ ರಾಜು ಪಾಸ್: ಆವಂತಿಕಾ ಕೇಸ್ ವಾಪಸ್
Team Udayavani, Jul 15, 2017, 11:00 AM IST
ನಿರ್ಮಾಪಕರ ವಿರುದ್ಧ ಕಿರುಕುಳದ ಆರೋಪ ಮಾಡಿ ‘ರಾಜು ಕನ್ನಡ ಮೀಡಿಯಂ’ ಚಿತ್ರದಿಂದ ಹೊರ ಉಳಿದಿದ್ದ ನಟಿ ಆವಾಂತಿಕಾ ಶೆಟ್ಟಿ ಇದೀಗ ರಾಜಿಯಾಗಿದ್ದಾರೆ. ಹಾಗಾಗಿ ‘ರಾಜು ಕನ್ನಡ ಮೀಡಿಯಂ’ ನಿರ್ಮಾಪಕರಿಗೆ ಇದೀಗ ತಲೆನೋವು ದೂರವಾಗಿದೆ.
ನಿರ್ಮಾಪಕ ಸುರೇಶ್ ಹಾಗೂ ನಟಿ ಆವಾಂತಿಕ ಶೆಟ್ಟಿ ನಡುವಿನ ಜಗಳ ಸುಖಾಂತ್ಯ ಕಂಡರೂ ಸಿನಿಮಾ ಬಿಡುಗಡೆಗೆ ಆವಂತಿಕಾ ನಡೆ ಅಡ್ಡಿಯಾಗಬಹುದೇ ಎಂಬ ಆತಂಕ ‘ರಾಜು ಕನ್ನಡ ಮೀಡಿಯಂ’ ನಿರ್ಮಾಪಕ ಅವರನ್ನು ಕಾಡಿತ್ತು. ಆದರೆ ಇದೀಗ ಫಿಲಂ ಛೇಂಬರ್ ಮಧ್ಯಸ್ಥಿಕೆ ನಂತರ ಆವಂತಿಕಾ ತಾನು ಹೂಡಿದ್ದ ಎಲ್ಲಾ ದೂರುಗಳನ್ನು ಹಿಂಪಡೆಯಲು ತೀರ್ಮಾನಿಸಿದರು. ಇದೀಗ ಎಲ್ಲಾ ವಿವಾದಗಳೂ ಸುಖಾಂತ್ಯ ಕಂಡಿದೆ.
ಬಡವಾಗಿದ್ದ ಕನ್ನಡ ಮೀಡಿಯಂ ಟೀಮ್ :
ನಟಿ ಆವಾಂತಿಕಾ ಶೆಟ್ಟಿ ಹಾಗೂ ನಿರ್ಮಾಪಕ ಸುರೇಶ್ ಜಟಾಪಟಿಯಿಂದಾಗಿ ‘ರಾಜು ಕನ್ನಡ ಮೀಡಿಯಂ’ ಚಿತ್ರ ಬಡವಾಗಿತ್ತು. ಅವಾಂತಿಕಾ ಶೆಟ್ಟಿ ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿ ತಮ್ಮನ್ನು ಚಿತ್ರದಿಂದ ಹೊರಗಿಟ್ಟು ತಮ್ಮ ಬದಲಿಗೆ ಬೇರೊಬ್ಬರ ವಾಯ್ಸ್ ಡಬ್ಬಿಂಗ್ ಗೆ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದರು. ತಮ್ಮ ಬದಲಿಗೆ ಬೇರೊಬ್ಬರ ವಾಯ್ಸ್ ಡಬ್ಬಿಂಗ್ ಗೆ ಅವಕಾಶ ನೀಡಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.
ಇನ್ನೊಂದೆಡೆ ನಿರ್ಮಾಪಕ ಸುರೇಶ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿ ವಿವಾದ ಬಗೆಹರಿಸುವಂತೆ ಕೋರಿದ್ದರು. ಈ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್, ಈ ಇಬ್ಬರೊಂದಿಗೆ ಸಂಧಾನ ನಡೆಸಿ ವಿವಾದವನ್ನು ಬಗೆಹರಿಸಿದ್ದರು.
ಆವಾಂತಿಕಾ ಶೆಟ್ಟಿ ಅವರಿಗೆ ಡಬ್ಬಿಂಗ್ ಅವಕಾಶ ನೀಡಬೇಕು ಎಂದು ಸಾರಾ ಗೋವಿಂದ್ ತಿಳಿಸಿದ್ದರು. ಇದರಿಂದ ಸಂತುಷ್ಟರಾಗಿರುವ ಆವಾಂತಿಕಾ ಶೆಟ್ಟಿ ತಾವು ಕೋರ್ಟ್ ನಲ್ಲಿ ಹೂಡಿರುವ ದಾವೆಯನ್ನು ವಾಪಾಸ್ ಪಡೆಯುವುದಾಗಿ ಹೇಳಿದ್ದರು.
ಆದರೆ ಅನಂತರ ನಟಿ ತಾನು ಹೂಡಿರುವ ದಾವೆಯನ್ನೂ ವಾಪಸ್ ಪಡೆದಿರಲಿಲ್ಲ. ನಿರ್ಮಾಪಕರ ಕೈಗೂ ಸಿಗುತ್ತಿರಲಿಲ್ಲ. ಈ ನಡುವೆ ಶುಕ್ರವಾರ ಇವರಿಬ್ಬರ ಜಗಳ ಬಗೆಹರಿಸಲು ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಿತು. ಈ ಸಭೆಯಲ್ಲಿ ಆವಂತಿಕಾ ಹಾಗೂ ಸುರೇಶ್ ಉಪಸ್ಥಿತರಿದ್ದರು.
ಚಿತ್ರೋದ್ಯಮದ ಗಣ್ಯರ ಸಲಹೆಗೆ ಒಪ್ಪಿಕೊಂಡ ನಟಿ ಆವಂತಿಕಾ ತಾನು ಸುರೇಶ ವಿರುದ್ಧ ಹೂಡಿರುವ ಎಲ್ಲಾ ಕೇಸ್ ಗಳನ್ನೂ ಹಿಂಪಡೆಯುವುದಾಗಿ ಹೇಳಿದರು. ಈ ಮೂಲಕ ಕನ್ನಡ ಮೀಡಿಯಂ ರಾಜು ಸಿನಿಮಾ ಬಿಡುಗಡೆಗೆ ಅಡ್ಡಿಯಾಗಿದ್ದ ಬಲು ದೊಡ್ಡ ವಿವಾದವೊಂದು ಬಗೆಹರಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TAMATE MOVIE: ಟೀಸರ್‌ನಲ್ಲಿ ತಮಟೆ ಸದ್ದು
Rishab Shetty: ʼಜೈ ಹನುಮಾನ್ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್ ಶೆಟ್ಟಿ?
Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್ʼ ರಿಲೀಸ್ ಡೇಟ್.. ಫ್ಯಾನ್ಸ್ ಖುಷ್
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್ ಮೂಲಕ ನಕ್ಸಲ್ ಸೋಮನ್ ವಿಚಾರಣೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ
Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್ ರಿಜಿಜು
Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.