ತಮಿಳುನಾಡಿಗೆ ನೀರು ಬೀಡಲು ನಮಗೇನು ಹುಚ್ಚಾ: ಸಿದ್ದರಾಮಯ್ಯ
Team Udayavani, Jul 15, 2017, 11:29 AM IST
ನಂಜನಗೂಡು: ರಾಜ್ಯದ ರೈತರಿಗೆ ನೀರಿಲ್ಲದಿದ್ದರೂ ತಮಿಳು ನಾಡಿಗೆ ನೀರು ಬೀಡಲು ನಮಗೇನು ಹುಚ್ಚು ಹಿಡಿದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ತಾಲೂಕಿನ ಹೊಸಕೋಟೆಯಲ್ಲಿ ನೂತನ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು.
ಮೂರು ವರ್ಷದಿಂದ ಲೂ ಬರಗಾಲ ಎದುರಿಸಿದ ನಮಗೆ ಈ ಬಾರಿಯೂ ಮಳೆ ಕೈ ಕೊಟ್ಟಿದೆ. ಆದರೂ ತಮಿಳುನಾಡಿಗೆ ನೀàರು ಬಿಡುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ ನೀವೇ ಯೋಚಿಸಿ ನೀರು ಬಿಡಲಿಲ್ಲ ಎಂದರೆ ಅವರು ಕೋರ್ಟ್‌ಗೆ ಹೋಗುತ್ತಾರೆ. ಅದಕ್ಕೆ ಮೊದಲು ನಾವೇ ಒಂದಿಷ್ಟು ನೀರು ಬಿಟ್ಟರೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.
ಬಿಜೆಪಿಗೆ ತಾಕತ್ತಿದ್ದರೆ ಲೋಕಸಭೆಗೆ ಮುತ್ತಿಗೆ ಹಾಕಲಿ: ರೈತರ ಸಾಲ ಮನ್ನಾ ಮಾಡದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎನ್ನುತ್ತಿದ್ದ ಬಿಜೆಪಿ ನಾಯಕರು ತಾಕತ್ತಿದ್ದರೆ ಲೋಕಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿ. ರೈತರ ಸಾಲ ಮನ್ನಾ ಮಾಡುವ ಸ್ಥಿತಿಯಲ್ಲಿ ನಾವಿಲ್ಲದಿದ್ದರೂ ಬರಗಾಲಕ್ಕೆ ಸಿಲುಕಿ ಬಸವಳಿದ ರೈತರ ಸಂಕಷ್ಟಕ್ಕೆ ನೆರವಾಗಬೇಕೆಂಬ ಸದುದ್ದೇಶದಿಂದ ತಾವು ಸಾಲ ಮನ್ನಾ ಮಾಡಿರುವುದಾಗಿ ಹೇಳಿದರು.
ಕಳೆದ ಬಾರಿ ಚುನಾವಣೆಯಲ್ಲಿ ಆಶ್ವಾಸನೆ ನೀಡಿದ ಶೇ.95ರಷ್ಟು ಭರವಸೆಗಳನ್ನು ಈಡೇರಿಸಿದ ತೃಪ್ತಿ ತಮಗಿದೆ. ನೀವು ಆಶೀರ್ವದಿಸಿ ನೀಡಿದ ಅಧಿಕಾರದ ಬಲದಿಂದ ಇವೆಲ್ಲವನ್ನೂ ಮಾಡಲು ಸಾಧ್ಯವಾಯಿತು. ರಾಜ್ಯದ ಎಸ್ಸಿ ಹಾಗೂ ಎಸ್ಟಿ ಜನರ ಅಭಿವೃದ್ಧಿಗಾಗಿ ಪಣತೊಟ್ಟ ತಮ್ಮ ಸರ್ಕಾರ ಅವರ ಪಾಲಿನ ಹಣದಲ್ಲಿ ಅವರ ಬೀದಿಗಳ ರಸ್ತೆ ಚರಂಡಿ ಅಭಿವೃದ್ಧಿ ಪಡಿಸಿ ಉಳಿದ ಹಣದಲ್ಲಿ ಉಚಿತ ಬಸ್ ಪಾಸ್ ನೀಡಿರುವುದಾಗಿ ತಿಳಿಸಿದರು.
ಸಂಸದ ಆರ್.ಧ್ರುವನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ನೀರಾವರಿ ಸಚಿವ ಎಂ.ಬಿ.ಪಾಟೀಲ್, ಶಾಸಕ ಕಳಲೆ ಕೇಶವ ಮೂರ್ತಿ, ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಉಪಾಧ್ಯಕ್ಷ ಗೋವೀಂದರಾಜು, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಗುರುಪಾದಸ್ವಾಮಿ ನಿಗಮ ಮಂಡಳಿಗಳ ಅಧ್ಯಕ್ಷ ನಂದಕುಮಾರ, ವೆಂಕಟೇಶ, ನಂಜನಗೂಡು ಎಪಿಎಂಸಿ ಅಧ್ಯಕ್ಷ ಕಾಗಲವಾಡಿ ಮಾದಪ್ಪ, ಎಸ್.ಸಿ.ಬಸವರಾಜು, ಜಿಪಂ ಮಾಜಿ ಅಧ್ಯಕ್ಷ ಧಮೇಂದ್ರ, ಗ್ರಾಪಂ ಅಧ್ಯಕ್ಷ ನಂಜೇಶಕುಮಾರ, ಉಪಾಧ್ಯಕ್ಷೆ ಇಂದ್ರಾಣಿ, ಕುಮಾರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.