ಸಮೃದ್ಧ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ: ನಾಡಗೌಡ
Team Udayavani, Jul 15, 2017, 2:20 PM IST
ಗೊರೇಬಾಳ: ಸತತ ಬರಗಾಲದಿಂದ ಬಳಲುತ್ತಿರುವ ಜನರು ನೆಮ್ಮದಿ ಜೀವನ ಸಾಗಿಸಲು ಈ ವರ್ಷ ಸಮೃದ್ಧ ಮಳೆಯಾಗಿ ತುಂಗಾನದಿ ಒಡಲು ತುಂಬಿ ರೈತರೆಲ್ಲರೂ ಸಂತೋಷದಿಂದ ಜೀವನ ಸಾಗಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿರುವುದಾಗಿ ಮಾಜಿ
ಶಾಸಕ ವೆಂಕಟರಾವ ನಾಡಗೌಡ ಹೇಳಿದರು.
ಮಲ್ಕಾಪುರದಲ್ಲಿ ಜಾತ್ಯತೀತ ಜನತಾದಳ ಹ್ಮಮಿಕೊಂಡಿರುವ ಜೆಡಿಎಸ್ ನಡೆ ರೈತರ ಕಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಪಾದಯಾತ್ರೆ 8ನೇ ದಿನಕ್ಕೆ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದೆ. ಅನೇಕ ಕನಸುಗಳನ್ನು ಹೊತ್ತು ನನ್ನ ಕೊರಳಿಗೆ ಮಾಲೆ ಹಾಕಿದ್ದಾರೆ. ಆ ಕನಸುಗಳನ್ನು ನನಸಾಗಿಸಲು ನಾನು ಸದಾ ಸಿದ್ಧನಾಗಿ ಜನರ ಸೇವೆಗಾಗಿ ಶ್ರಮಿಸುತ್ತೇನೆ. ಅವರೆಲ್ಲರ ಆಸೆಗಳನ್ನು ಈಡೇರಿಸಲು ಭಗವಂತ ನನಗೆ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಪಾದಯಾತ್ರೆ ಮತ್ತು ಗ್ರಾಮ ವಾಸ್ತವ್ಯಕ್ಕೆ ಜನರು ಸಹಾಯ ಸಹಕಾರ ನೀಡುತ್ತಿದ್ದಾರೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಶಿವನಗೌಡ ಗೊರೇಬಾಳ ಮಾತನಾಡಿ, ಮಣ್ಣಿನ ಮಗನಾದ ದೇವೇಗೌಡರು ರೈತ ಕುಟುಂಬದಿಂದ ಬಂದವರು. ರೈತರ ಬಗ್ಗೆ ಕಾಳಜಿವುಳ್ಳವರು. ರೈತರ ನೋವು ಬಲ್ಲವರು. ದೇವೇಗೌಡರಿಗೆ ರೈತರ ಬಗ್ಗೆ ಇರುವ
ಕಾಳಜಿ ಯಾವ ರಾಜಕೀಯ ವ್ಯಕ್ತಿಗೂ ಇಲ್ಲ. ಈ ಬಾರಿ ಜೆಡಿಎಸ್ ಅ ಧಿಕಾರಕ್ಕೆ ಬಂದರೆ ಸಮಸ್ಯೆಗಳಿಗೆ ಪರಿಹಾರ ಕಾಣಲಿವೆ ಎಂದು ಹೇಳಿದರು. ತಾಪಂ ಸದಸ್ಯ ಉದಯಗೌಡ ಮಾತನಾಡಿದರು. ತಾಪಂ ಸದಸ್ಯ ಗೋವಿಂದರಾಜ ಸೋಮಲಾಪುರ, ಜೆಡಿಎಸ್
ವಕ್ತಾರ ಬಸವರಾಜ ನಾಡಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಲಿಂಗಪ್ಪ ದಢೆಸುಗೂರು, ಮುಖಂಡರಾದ ಹನುಮಂತಪ್ಪ ನಾಯಕ,
ದೇವೇಂದ್ರಗೌಡ, ಶಂಕರಗೌಡ ಮಲ್ಕಾಪುರ, ಬರಗೂರು ಹನುಮಂತಪ್ಪ, ಧರ್ಮನಗೌಡ ಮಲ್ಕಾಪುರ, ಮಲ್ಲನಗೌಡ ಮಾವಿನಮಡು,
ಬಸವನಗೌಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.