ಬಯಲಾಟ ಮೂಲೆಗುಂಪಾಗಲು ವಿದ್ಯಾವಂತರೇ ಕಾರಣ
Team Udayavani, Jul 15, 2017, 3:10 PM IST
ದಾವಣಗೆರೆ: ಯಕ್ಷಗಾನ ಕಲೆ ಉಳಿದು, ಬೆಳೆಯುತ್ತಿರುವುದಕ್ಕೇ ವಿದ್ಯಾವಂತರು ಕಾರಣಾದರೆ, ಬಯಲಾಟ ಮೂಲೆ ಗುಂಪಾಗಲೂ ಸಹ ಅವರೇ ಕಾರಣ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ಮಲ್ಲಿಕಾರ್ಜುನ ಕಲಮರಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಕುವೆಂಪು ಕನ್ನಡ ಭವನದಲ್ಲಿ ಯಕ್ಷಗಾನ ಬಯಲಾಟ ಕಲಾ ಸಂಭ್ರಮದಲ್ಲಿ ಸಮಾರೋಪ ನುಡಿಗಳನ್ನಾಡಿದ ಅವರು,
ಕರಾವಳಿ ಭಾಗದಲ್ಲಿ ವಿದ್ಯೆ ಕಲಿತು ಸುಶಿಕ್ಷಿತರಾದವರು ಯಕ್ಷಗಾನವನ್ನು ಪ್ರೀತಿಸಿದರು. ಜೊತೆಗೆ ಅದನ್ನು ತಾವೂ ಸಹ ಅಭ್ಯಾಸ ಮಾಡಿಕೊಂಡು ಬಂದರು. ಇದರಿಂದ ಕಲೆ ಉಳಿದಿದ್ದು ಮಾತ್ರವಲ್ಲ, ಒಂದು ಹೊಸ ಮೌಲ್ಯ ಕಂಡುಕೊಂಡಿತು. ಆದರೆ, ಬಯಲಾಟದ
ವಿಷಯದಲ್ಲಿ ಇದು ವ್ಯತಿರಿಕ್ತವಾಯಿತು ಎಂದರು.
ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿದ್ದ ಬಯಲಾಟ ಇತರೆ ಭಾಗಗಳಲ್ಲಿ ಹರಡಿಕೊಳ್ಳುತ್ತಿತ್ತು. ಆದರೆ, ಅಲ್ಲಿನ ಗ್ರಾಮೀಣ
ಯುವ ಜನಾಂಗ ನಗರಕ್ಕೆ ಬಂದು ವಿದ್ಯಾಭ್ಯಾಸ ಕಲಿತ ನಂತರ ಆ ಕಲೆಗೆ ಪ್ರಾಮುಖ್ಯತೆ ಕೊಡಲಿಲ್ಲ. ಇದರಿಂದ ಆ ಕಲೆಗಿದ್ದ ಆರಾಧಕರ ಸಂಖ್ಯೆ ಕಡಮೆಯಾಗುತ್ತಾ ಬಂದಿತು. ಈಗಲೂ ಕೆಲ ನಡು, ಇಳಿ ವಯಸ್ಸಿನವರು ಈ ಬಯಲಾಟದ ಬಗ್ಗೆ ಅಭಿಮಾನ ಹೊಂದಿದ್ದಾರೆ. ಅವರಿಂದಲೇ ಕಲೆ ಇನ್ನೂ ಉಳಿದುಕೊಂಡಿದೆ ಎಂದು ಹೇಳಿದರು.
ಯಕ್ಷಗಾನ ಬಯಲಾಟ ಅಕಾಡೆಮಿ ಯಕ್ಷಗಾನಕ್ಕೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತದೆ ಎಂಬ ಆರೋಪ ಇತ್ತು. ಇದೀಗ
ಎರಡೂ ಬೇರೆ ಬೇರೆ ಆಗುತ್ತಿವೆ. ಎರಡೂ ಕಲೆಗಳಿಗೆ ಸಮಾನ ಪ್ರಾಮುಖ್ಯತೆ ಕೊಡಬೇಕು ಎಂಬುದು ಇದರ ಹಿಂದಿನ ಸದುದ್ದೇಶ.
ಆದರೆ, ಅಕಾಡೆಮಿ ಬೇರೆ ಆದ ನಂತರ ಕಲೆಯ ಪ್ರಸರಣ ಪ್ರಮಾಣ ಕಡಮೆಯಾಗಬಾರದು. ಯಕ್ಷಗಾನ ಕೇವಲ ದಕ್ಷಿಣ ಕರ್ನಾಟಕಕ್ಕೆ,
ಬಯಲಾಟ ಕೇವಲ ಉತ್ತರ ಕರ್ನಾಟಕಕ್ಕೆ ಎಂಬಂತೆ ಆಗಬಾರದು. ಎರಡೂ ಕಲೆಗಳನ್ನೂ ಎಲ್ಲಾ ಕಡೆ ಪಸರಿಸುವಂತಹ ಕೆಲಸವನ್ನು
ಅಕಾಡೆಮಿಗಳು ಮಾಡಬೇಕು ಎಂದು ಅವರು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಬಾರಿಕೇರ ಕರಿಯಪ್ಪ, ಯಕ್ಷಗಾನ ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ ಎನ್.ಎಸ್. ರಾಜು, ಯಕ್ಷಗಾನ
ಬಯಲಾಟ ಅಕಾಡೆಮಿಯ ರಿಜಿಸ್ಟಾರ್ ಎಸ್. ಎಚ್. ಶಿವರುದ್ರಪ್ಪ, ಅಕಾಡೆಮಿ ಸದಸ್ಯ ಡಾ| ಬಿ.ಎಂ. ಗುರುನಾಥ್ ವೇದಿಕೆಯಲ್ಲಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ಬೆಳಗಾವಿಯ ಶಿವಲಿಂಗಪ್ಪ ಮತ್ತು ತಂಡದವರು ಸಣ್ಣಾಟ, ಸಾಲಿಗ್ರಾಮ ಗಣೇಶ್ ಶೆಣೈ ಮತ್ತು
ತಂಡ ಗದಾಯುದ್ಧ ಯಕ್ಷಗಾನ ಪ್ರಸಂಗ, ದಾವಣಗೆರೆಯ ಹನುಮಂತಾಚಾರ್ ಮತ್ತು ತಂಡ ದೇವಧೂತ ಪ್ರಸಂಗ ಬಯಲಾಟ
ಪ್ರಸ್ತುತ ಪಡಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.