ಅಮರನಾಥ ಟೆರರ್ ಅಟ್ಯಾಕ್; ಪಿಡಿಪಿ ಶಾಸಕನ ಚಾಲಕನ ಬಂಧನ, ವಿಚಾರಣೆ
Team Udayavani, Jul 15, 2017, 3:00 PM IST
ಶ್ರೀನಗರ್: ಅಮರನಾಥ ಯಾತ್ರಾರ್ಥಿಗಳ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರ ಪೊಲೀಸರು ಶನಿವಾರ ಪಿಡಿಪಿ ಶಾಸಕ ಐಜಾಜ್ ಅಹ್ಮದ್ ಮೀರ್ ಅವರ ಚಾಲಕನನ್ನು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.
ತೌಸೀಫ್ ಅಹ್ಮದ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಶೋಪಿಯಾನ್ ಪೊಲೀಸ್ ವರಿಷ್ಠಾಧಿಕಾರಿ ಅಂಬಾರ್ಕರ್ ಶ್ರೀರಾಮ್ ದಿನಕರ್ ಅವರು ಖಚಿತಪಡಿಸಿದ್ದಾರೆ. ತೌಸೀಫ್ ತನಿಖಾಧಿಕಾರಿಗಳಿಗೆ ಸಹಕಾರ ನೀಡಿರುವುದಾಗಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರ್ ಪೊಲೀಸ್ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತೌಸೀಫ್ ಅಹ್ಮದ್ ನನ್ನು 7 ತಿಂಗಳ ಹಿಂದೆ ಶಾಸಕರ ಕಾರು ಚಾಲಕನನ್ನಾಗಿ ನಿಯೋಜಿಸಲಾಗಿತ್ತು. ಇದೀಗ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.