ಕಾಶ್ಮೀರದಲ್ಲಿ ಶಾಂತಿ, ಹುರಿಯತ್ ಜತೆ ಮಾತುಕತೆ: ಷರೀಫ್ ಗೆ ಬುಖಾರಿ
Team Udayavani, Jul 15, 2017, 5:17 PM IST
ಹೊಸದಿಲ್ಲಿ : ದಿಲ್ಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಬುಖಾರಿ ಅವರು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಪತ್ರ ಬರೆದು ಕಾಶ್ಮೀರ ಕಣಿವೆಯಲ್ಲಿನ ಉದ್ರಿಕ್ತ ಸ್ಥಿತಿಯನ್ನು ಕೊನೆಗೊಳಿಸುವುದಕ್ಕೆ ತಮ್ಮ ಅಧಿಕಾರ ಬಳಸಬೇಕೆಂದೂ ಹುರಿಯತ್ ಪ್ರತಿನಿಧಿಗಳೊಂದಿಗೆ ಮಾತುಕತೆಯನ್ನುಆರಂಭಿಸಬೇಕೆಂದೂ ವಿನಂತಿಸಿದ್ದಾರೆ.
“ಕಾಶ್ಮೀರ ಕಣಿವೆಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದರಿಂದಾಗಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಉದ್ರಿಕ್ತತೆ ಹೆಚ್ಚುತ್ತಿದೆ. ಕಾಶ್ಮೀರದಲ್ಲಿ ಶಾಂತಿಯನ್ನು ಮರು ಸ್ಥಾಪಿಸುವಲ್ಲಿ ಉಂಟಾಗುವ ಯಾವುದೇ ವಿಳಂಬದಿಂದ ಅಲ್ಲಿನ ಪರಿಸ್ಥಿತಿ ಇನ್ನಷ್ಟು ತೀವ್ರವಾಗಿ ಹದಗೆಡಲಿದೆ” ಎಂದು ಬುಖಾರಿ ಅವರು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
”ಹಿಂದೊಮ್ಮೆ ಕಾಶ್ಮೀರವು ಭೂಮಿಯ ಮೇಲಿನ ಸಾಕ್ಷಾತ್ ಸ್ವರ್ಗವಾಗಿತ್ತು. ಅತ್ಯಂತ ಸಂತಸದ ಬದುಕಿನ ತಾಣವಾಗಿತ್ತು. ಆದರೆ ಇಂದು ಅದು ಸಹಸ್ರಾರು ಜನರ ಕಣ್ಣೀರಿನ ನಾಡಾಗಿದೆ. ಎಕೆ-47 ರೈಫಲ್ಗಳ ನೆರಳಿನಲ್ಲಿ ಜನರ ಬದುಕು ಸಾಗುತ್ತಿದೆ. ಕಾಶ್ಮೀರವನ್ನು ಮತ್ತೆ ಭೂಮಿಯ ಮೇಲಿನ ಸ್ವರ್ಗವನ್ನಾಗಿ ಮಾಡಲು ಅಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸಬೇಕಾಗಿದೆ ಮತ್ತು ಅದಕ್ಕಾಗಿ ಮಾತುಕತೆ ನಡೆಯಬೇಕಿದೆ” ಎಂದು ಬುಖಾರಿ ಪತ್ರದಲ್ಲಿ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.