ಟೂರ್ ಎಂಬ ಸಂಚಾರಿ ಭಾವ
Team Udayavani, Jul 16, 2017, 2:45 AM IST
ನಿಮ್ಮಲ್ಲನೇಕರಿಗೆ ಗೊತ್ತಿರಬಹುದು ಭಾವಗಳಲ್ಲಿ ಎರಡು ವಿಧ. ಒಂದು ಸ್ಥಾಯೀ ಭಾವ, ಇನ್ನೊಂದು ಸಂಚಾರಿ ಭಾವ ಅಂತ. ಆನಂದವರ್ಧನ ಹೇಳಿದ ಈ ಭಾವಗಳು ನಾಟಕಗಳನ್ನು ನೋಡುವಾಗ ನೋಡುಗನಲ್ಲಿ ಉಂಟಾಗುವ ಭಾವನೆಗಳನ್ನು ಕುರಿತದ್ದು. ಆದರೆ, ನಾನಿಲ್ಲಿ ಹೇಳುತ್ತಿರು ವುದು ಈ ಜಗತ್ತಿನ ನಾಟಕಶಾಲೆಯಲ್ಲಿ ನಾವು ನಡೆಸುವ ಟೂರೆಂಬ ಏಕಾಂಕ ನಾಟಕದ ಕುರಿತು.
ವರ್ಷವೂ ನಮಗೆ ಒಂದಿÇÉೊಂದು ಕಡೆ ತಿರುಗಾಡಲು ಹೋಗುವ ಹುಚ್ಚು. ಪ್ರತಿ ಸಾರಿ ಹೀಗೆ ಹೊರಟಾಗಲೂ ಬಟ್ಟೆಯೇ ಇಲ್ಲ… ಎಂದು ಶುರುವಾಗುವ ನನ್ನ ಶಾಪಿಂಗ್, ಬ್ಯಾಗು ಚಪ್ಪಲಿ ಶೂ ವಿಂಟರ್ ಕೋಟ…, ಮಣ್ಣೂ ಮಸಿ ಅಂತ ನಾವು ಟೂರಿಗೆಂದು ಹಾಕಿದ ಬಜೆಟ್‌ನ ತೂಕವನ್ನು ಊರು ಬಿಡುವುದರೊಳಗೇ ಹೆಚ್ಚಿಸಿ ಯಜಮಾನರ ಗೇಲಿಗೆ ನನ್ನನ್ನು ಸಿಕ್ಕಿಸುತ್ತದೆ. ಸದಾ ಬಿಸಿಲು ಅಥವಾ ಮಳೆ ಬಿಟ್ಟರೆ ಇನ್ನೊಂದು ಸೀಸನ್ ನೋಡಿರದ ಊರಿನಲ್ಲಿದ್ದೂ ಸ್ವೆಟರ್, ಶಾಲ್, ಜಾಕೆಟ್, ಸ್ಟೋಲ… ಎಂದು ಹತ್ತು ಹಲವು ವಸ್ತುಗಳನ್ನು ಗುಡ್ಡೆ ಹಾಕಿಕೊಂಡಿರುವ ನಾನು ಅವನ್ನೆಲ್ಲ ಕೊಳ್ಳುವಾಗ ಕೊಟ್ಟ ಅಥವಾ ಕೊಡುವ ಸಮಜಾಯಿಸಿ ಎಂದರೆ ಟೂರಿಗೆ ಹೋದಾಗ ಬೇಕಾಗುತ್ತೆ…ಅಂತ.
ನಮ್ಮನೆಯವ್ರು ಈಗ ಶಾಪಿಂಗ್‌ಗೆ ಹೋದಾಗ ನನಗಿಂತ ಮೊದಲೇ ಈ ನನ್ನ ಡೈಲಾಗ್ ಹೇಳಿ ಅಣಕಿಸುತ್ತಿರುತ್ತಾರೆ. ನನ್ನ ಈ ಹುಚ್ಚು ಎಷ್ಟೆಂದರೆ ಕೇವಲ ನನಗಷ್ಟೇ ಅಲ್ಲದೆ ಗಂಡ, ಮಗಳಿಗೂ ಹೀಗೆ ಟೂರಿಗೆ ಬೇಕಾಗುವ ವಸ್ತುಗಳನ್ನು ಸೇಲ್‌ಗಳಲ್ಲಿ ಕೊಂಡು ತಂದಿಟ್ಟಿರುತ್ತೇನೆ. ಆದರೂ ಹೇಗೂ ಬೇಸಿಗೆ ಚಳಿ ಇರಲಾರದು ಎಂದುಕೊಂಡು ನನ್ನೆಲ್ಲ ಸಾಮಾನು ಮನೆಯÇÉೇ ಬಿಟ್ಟುಹೋಗಿ ಚಳಿಯಲ್ಲಿ ನಡುಗಿ ಮತ್ತೆ ದುಬಾರಿ ಬೆಲೆ ತೆತ್ತು ಮತ್ತಷ್ಟು ಜಾಕೆಟ್ ಕೊಂಡ¨ªೆಷ್ಟು ಸಲವೋ ಏನೋ? ಗೇಲಿ ಮಾಡಿದರೂ ಗಪ್‌ಚಿಪ್ಪಾಗಿ ಕಾರ್ಡ್ ಉಜ್ಜಿ ಕೇಳಿ¨ªೆಲ್ಲ ಕೊಡಿಸುವ ಗಂಡನನ್ನ ನೋಡಿದರೆ ಅಯ್ಯೋ ಎನಿಸುತ್ತದೆ. ಇರಲಿ ಈ ಪುರಾಣ, ಇದು ಬರೀ ಪೀಠಿಕೆ ಅಷ್ಟೇ ಮುಂದೆ ನೋಡಿ ಟೂರೆಂಬ ಮಾರಿಹಬ್ಬ .
ಮೊದಲ ದಿನ ಕಂಡ ಕಂಡ ಹೂ, ಮರಗಿಡ, ಗುಡ್ಡ ಬೆಟ್ಟ ನದಿ ಕೊಳ್ಳ ಎಲ್ಲ ಕ್ಯಾಮೆರಾದಲ್ಲಿ ಸೆರೆಹಿಡಿದು ವಾಟ್ಸಾಪಿಗೆ ತಳ್ಳಿ ಆಮೇಲೆ ಉಸಿರೆಳೆಯುವಷ್ಟು ಉಮೇದು ಎರಡನೇ ದಿನಕ್ಕೇ ಕುಗ್ಗಿ ಕುಸಿಯತೊಡಗುತ್ತದೆ. ಯುರೋಪು, ಏಷ್ಯಾದ ಹತ್ತಾರು ಕಡೆ ಓಡಾಡಿರುವ ನಮಗೆ ಎಲ್ಲಿ ಹೋದರೂ ಶುದ್ಧ ಸಸ್ಯಾಹಾರಿ ಊಟದ್ದೇ ಸಮಸ್ಯೆ. ಹುಡುಕಿಕೊಂಡು ಹೋದ ಇಂಡಿಯನ್ ಹೊಟೇಲುಗಳಲ್ಲೂ ಮಣಭಾರದ ನಾನ್, ಅಕ್ಕಿ ಕಾಳಿನಂಥ ಅನ್ನ ತಿನ್ನಲಾಗದೆ ಭಾರವಾದ ಬಿಲ್ ಎತ್ತಿ ಬರುವಾಗ ಈ ಸುಖಕ್ಕೆ ಮನೆಯÇÉೇ ಹದವಾಗಿ ಬೆಂದ ಹಬೆಯಾಡುವ ಅನ್ನ, ಶುಚಿ ರುಚಿಯಾದ ಪದಾರ್ಥ, ತಂಬುಳಿ, ಉಪ್ಪಿನಕಾಯಿ ಎಲ್ಲ ಬಿಟ್ಟು ಬರಬೇಕಿತ್ತೆ ಎಂದು ಮನಸ್ಸು ಪಿಚ್ಚೆನ್ನಿಸಲು ಶುರುವಾಗುತ್ತದೆ. ಗಂಡ, ಮಗಳಿಗೆ ನನಗಿಂತ ಗಟ್ಟಿ ಹೊಟ್ಟೆ ಇರುವುದರಿಂದ ಅವರು ಇಷ್ಟು ಬೇಗ ಕುಸಿಯುವುದಿಲ್ಲ. ಪಿಜ್ಜಾ, ಪಾಸ್ತಾಗಳ ಬೇಟೆಯಲ್ಲಿ ಮುಂದಿನೆರೆಡು ದಿನ ಕಳೆಯುತ್ತದೆ. ಆಮೇಲೆ ನಿಧಾನಕ್ಕೆ ಜಡ್ಡುಗಟ್ಟಿದ ನಾಲಗೆಗೆ ಮನೆಯ ಊಟದ ರುಚಿ ಕಾಡತೊಡಗುತ್ತದೆ. ಇಷ್ಟವೇ ಇಲ್ಲದಿದ್ದರೂ ಎಮರ್ಜೆನ್ಸಿಗೆ ಎಂದು ಸೂಟ…ಕೇಸ್ ಸೇರಿ ನಮ್ಮ ಬರಕಾಯುತ್ತಾ ಕೂತ ಬಿಸಿಬೇಳೆಬಾತ್, ಪೊಂಗಲ…, ಉಪ್ಪಿಟ್ಟು ಮುಂತಾದ ರೆಡಿ ಟು ಈಟ… ಪ್ಯಾಕೆಟ…ಗಳು ಕೊನೆಗೂ ಬಂದ್ರಾ ದಾರಿಗೆ ಎಂದು ಆಡಿಕೊಂಡು ನಕ್ಕಂತೆನಿಸುತ್ತದೆ. ಒಂದಕ್ಕೆ ಉಪ್ಪು ಖಾರವೇ ಇಲ್ಲದಿದ್ದರೆ ಇನ್ನೊಂದರಲ್ಲಿ ಬಾಯಿಗಿಡಲಾರದಷ್ಟು ಮಸಾಲೆ, ಪೊಂಗಲ… ಎಂಬ ಕಾಳುಮೆಣಸು, ಕರಿಬೇವಿನ ಕಾಡಿನಲ್ಲಿ ಬೆಂದ ಅಕ್ಕಿ, ಬೇಳೆಯನ್ನು ಹೆಕ್ಕಿ ತೆಗೆಯುವಷ್ಟರಲ್ಲಿ ಹಸಿವು ಹಾರಿಹೋಗಿರುತ್ತದೆ. ಸಿಕ್ಕುವುದೂ ಎಷ್ಟು ಅಬ್ಬಬ್ಟಾ ಎಂದರೆ ಎರಡು ಸ್ಪೂನ್ ಅಷ್ಟೇ. “ಭೀಮನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತೆ. ಸಾಲದ್ದಕ್ಕೆ ಎಲ್ಲದರಲ್ಲೂ ಪ್ರಿಸರ್ವೇಟಿÊÕ…ಗಳ ಅಡ್ಡ ವಾಸನೆ ಬೇರೆ. ಜಿಡ್ಡಾದ ಕೈ ತೊಳೆದು ಮತ್ತೆ ಮರುದಿನ ಪಿಜ್ಜಾ ಅಥವಾ ನಾನ್ ಎಲ್ಲಿ ತಿನ್ನುವುದೆಂಬ ಯೋಚನೆಯಲ್ಲಿ ಗೂಗಲಿಸತೊಡಗುತ್ತೇವೆ. ಇಂಥಾ ಸಮಯದಲ್ಲಿ ಸ್ಮಾರ್ಟ್‌ಫೋನಿನಷ್ಟೇ ಸ್ಮಾರ್ಟಾಗಿ ಮೊದಲೇ ಹುಡುಕಿಟ್ಟ ರೆಸ್ಟುರಾಂಟ… ಗಳ ಪಟ್ಟಿ ಒದಗಿಸುತ್ತಾಳೆ ಮಗಳು.
ಟೂರ್ ಆರ್ಗನೈಸರ್ ಹತ್ತಿರ ಹತ್ತು ಹಲವು ಸಾರಿ ಫೋನಿನÇÉೇ ಸರ್ಕಸ್ ಮಾಡಿ ನಾವು ನೋಡಲೇ ಬೇಕಾದ ಸ್ಥಳಗಳ ಪಟ್ಟಿ ಕೊಡುವುದು, ಅವನು ಮೂರುದಿನ ಬಿಟ್ಟು ಉತ್ತರ ಹೇಳುವುದು (ಈಮೇಲ್ ಮೂಲಕ) ಅದರಲ್ಲಿ ನಾವು ಪಟ್ಟಿ ಮಾಡಿದ್ದ ಸ್ಥಳಗಳನ್ನೆಲ್ಲ ಬಿಟ್ಟು ಬೇರೇನನ್ನೋ ಸೇರಿಸುವುದು, ಮತ್ತೆ ನಾವು ಪಟ್ಟುಬಿಡದೆ ನಮ್ಮ ಪಟ್ಟಿಯಲ್ಲಿರುವುದನ್ನೇ ತೋರಿಸು ಎನ್ನುವುದು ಹೀಗೆ ನಡೆಯುತ್ತಿರುವ ಗು¨ªಾಟದಲ್ಲಿ ಗೆಲುವು ಟೂರ್ ವ್ಯವಸ್ಥಾಪಕನದ್ದೇ. ಅವನು ಸೃಷ್ಟಿಕರ್ತ ಬ್ರಹ್ಮನಷ್ಟು ಪವರ್‌ಫುಲ್ ಆದರೆ ನಾವು ಹುಲುಮಾನವರಂತೆ. ಕುಲು ಮನಾಲಿ ಶಿಮ್ಲಾ ನೋಡಬೇಕೆಂದರೆ ನೂರಾ ಒಂದು ಕಾರಣ ಕೊಟ್ಟು ಆ ಮೂರೂ ಊರನ್ನು ಬಿಟ್ಟು ಬೇರೆÇÉೋ ಹೋಗಿ ಬರುವಂತೆ ಮಾಡಿದ ಮಹಾನುಭಾವರು ಅವರು.
ಈ ಸಾರಿ ಸ್ಕ್ಯಾಂಡಿನೇವಿಯಾ ಟೂರಿಗೆ ಹೋದಾಗ ಇದೊಂದನ್ನಾದರೂ ಸೇರಿಸು ಮಾರಾಯಾ ಎಂದು ಗೋಳು ಹೊಯ್ದುಕೊಂಡು ಹೊರಟ ಆ ಅಪೂರ್ವವಾದ ಸ್ಥಳಕ್ಕೆ ಹನ್ನೊಂದು ಸೀಟರಿನ ಮರ್ಸಿಡಿಸ್ ಕಾರಿನಲ್ಲಿ ಕರೆದೊಯ್ಯಲು ಗೈಡ್ ಹೆಲೆನಾ ಬೆಳ ಬೆಳಗ್ಗೆಯೇ ಬಂದಿದ್ದಳು. ನಾವೆಲ್ಲ ಬ್ರೇಕ್‌ಫಾÓr… ಮುಗಿಸಿ ಕಾಫಿ ಹೀರಿ ಗಡಿಬಿಡಿಯಲ್ಲಿ ವ್ಯಾನೇರಿ¨ªೆವು. ಫಿನ್‌ಲಾÂಂಡಿನಲ್ಲಿ ಅಪರೂಪಕ್ಕೆ ಬಂದ ಬಿಸಿಲಿಗೆ ಮೈಯೊಡ್ಡಿ ನಗುತ್ತಿದ್ದ ಹೂಗಳು, ಹಸಿರಾಗಿ ನಳನಳಿಸುತ್ತ ಚಳಿ ಕಾಯಿಸಿಕೊಳ್ಳುತ್ತಿದ್ದ ಹುಲ್ಲಿನ ಹಾಸುಗಳು ಹಸಿರುಹೊತ್ತ ಕಾಡಿನ ಜಾಡು, ನಿಬಿಡವಾದ ರಸ್ತೆಯಲ್ಲಿ ನಮ್ಮ ಕಾರು ಸಾಗುತ್ತಿದ್ದಂತೆ ಮೆಲುದನಿಯಲ್ಲಿ ಮೈಕ್ ಹಿಡಿದು ಸ್ಥಳ ಪರಿಚಯ ಮಾಡಿಕೊಡತೊಡಗಿದ ಹೆಲೆನಾ.
“ಅಯ್ಯೋ ಬೇಡಾ ಈಗ ಬೇಡ’ ಎಂದು ನಾನೆಷ್ಟು ಬೇಡಿಕೊಂಡರೂ ನನ್ನ ಬೆಂಬತ್ತಿ ಬಂದ ನಿ¨ªೆ ಜೀವನದ ಅತ್ಯಂತ ದುಬಾರಿ ನಿ¨ªೆ ಎನಿಸಿದ್ದು ಆ ನಮ್ಮ ವ್ಯಾನ್ ಹೊಟೇಲ… ಮುಂದೆ ವಾಪಸ್ ಬಂದು ನಿಂತಾಗ ಮೆಲ್ಲನೆ ನಾನು ಕಣ್ಣು ಬಿಟ್ಟಾಗ. ವ್ಯಾನಿನಲ್ಲಿದ್ದ ಉಳಿದವರ ಕತೆ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಹೆಲ್ಸಿಂಕಿಯಲ್ಲಿ ಶುರುವಾದ ಈ ಕಾಸ್ಟಿ ನಿ¨ªೆಯ ಸರಣಿ ಕೋಪನ್ ಹೇಗನ್, ಸ್ಟಾಕ್ ಹೋಮ್‌ನಲ್ಲೂ ಮುಂದುವರೆದು ಆ ಪಾಟಿ ದೂರದ ಓಸ್ಲೋದಲ್ಲೂ ಕಾಡಿದಾಗ ದೋಷ ನಮ್ಮಲ್ಲಿಲ್ಲ, ನಿ¨ªೆಯಲ್ಲಿಲ್ಲ, ದೋಷವಿರುವುದು ಲಾಲಿ ಹಾಡಿದಂತೆ ಮಾತಾಡುವ ಈ ಟೂರ್‌ಗೆçಡ್‌ಗಳದ್ದೇ ಎಂಬ ತೀರ್ಮಾನಕ್ಕೆ ನಾವೆಲ್ಲ ಬಂದಿ¨ªೆವು. ಮುಂದೆಂದಾದರೂ ವಯಸ್ಸಾದಾಗ ನಿ¨ªೆ ಬಾರದೆ ಹೊರಳಾಡುವಂತಾದಾಗ ಒಂದು ಟೂರ್ ಗೈಡ್‌ನ್ನು ನೇಮಿಸಿಕೊಂಡು ಕೈಲೊಂದು ಮೈಕ್ ಕೊಟ್ಟು ಶುರು ಹಚೊRà ಎಂದರೆ ನಿ¨ªೆ ತಂತಾನೇ ಬರುತ್ತದೆ ಎಂಬ ಉಪಾಯ ಕಂಡುಕೊಂಡೆವು.
ಜೋಗುಳ ಹಾಡುವ ಗೈಡ್‌ಗಳಿಂದ ನಿ¨ªೆ ತಪ್ಪಿಸಿಕೊಳ್ಳಲು ಒಳ್ಳೇ ಉಪಾಯ ಎಂದರೆ ವಾಕಿಂಗ್ ಟೂರ್ ಎಂಬುದೂ ಅರ್ಥವಾಗಿದ್ದು ನಾರ್ವೆಯ ಬರ್ಗನ್‌ನಲ್ಲಿ ಎಮ್ಮಾ ನಮ್ಮನ್ನು ಊರೆÇÉಾ ಸುತ್ತಿಸಿ ಕತೆ ಹೇಳಿದಾಗ ಒಬ್ಬರೂ ತೂಕಡಿಸದಿದ್ದುದು ಕಂಡಾಗ ನಮ್ಮಂಥವರಿಗೆ ಇದೇ ಸರಿಯಾದ ಮಾರ್ಗ ಅನಿಸಿತ್ತು.
ಸಾಕಷ್ಟು ತಿರುಗಾಡಿ ಅನುಭವ ಇರುವ ನನಗೆ ಟೂರಿಗೆ ಬಂದು ನಾಲ್ಕೈದು ದಿನ ಕಳೆದು ಹಾಕಿದ ಬಟ್ಟೆಗಳನ್ನು ಹೊತ್ತ ಬ್ಯಾಗಿನ ಭಾರ ಹೆಚ್ಚುತ್ತ, ಹಾಕಿರದ ಬಟ್ಟೆಗಳ ಸೂಟ…ಕೇಸ್ ಹಗುರಾಗಿ ಖಾಲಿಯಾಗತೊಡಗಿದಂತೆ ಮನಸ್ಸೂ ಮನೆಯ ನೆನಪಿನಿಂದ ಭಾರವಾಗಿ ಮನೆಗೆ ಹೋಗುವ ದಿನ ಹತ್ತಿರ ಬಂತೆಂದು ಹಗುರಾಗಿ ಉಲ್ಲಸಿತವಾಗುತ್ತದೆ. ಮನೆಯನ್ನೇ ಮಿಸ್ ಮಾಡುವುದಾದರೆ ಅಷ್ಟೆÇÉಾ ದುಡ್ಡುಕೊಟ್ಟು ಊರೆÇÉಾ ಸುತ್ತಲು ಯಾಕೆ ಬರಬೇಕಿತ್ತೆಂದು ಇನ್ನೂ ಅರ್ಥವಾಗುವುದಿಲ್ಲ. ಹೊಟ್ಟೆಯಂತೂ ಮನೆಯೂಟವನ್ನು ಮಿಸ್ ಮಾಡಿಕೊಂಡು ತೆಪ್ಪಗೆ ಮನೆಯಲ್ಲಿದ್ದರಾಗುತ್ತಿರಲಿಲ್ಲವೇ ಎಂದು ಗದರಿಸುವಾಗ ಸಹನೆಯ ಕಟ್ಟೆಯೊಡೆದು ಸಿಲ್ಲಿ ಕಾರಣಕ್ಕೂ ಸಿಡುಕತೊಡಗುತ್ತೇವೆ. ಟೂರಿನಲ್ಲೂ ಉದ್ಭವಿಸುವ ಶಾಪಿಂಗ್ ಎಂಬ ಶಾಪ ಮನಸ್ಸುಗಳನ್ನು ಕದಡಲು ಮತ್ತಷ್ಟು ಸಹಕಾರಿ. ದೊಡ್ಡ ಜಗಳಕ್ಕೆ ತಿರುಗುವುದರೊಳಗೆ ಮನೆಗೆ ಸೇರಿದರೆ ಸಾಕಪ್ಪಾ$ಹರಿಯೇ ಇನ್ನೆಂದೂ ಟೂರೂ ಬೇಡ ಮಣ್ಣೂ ಬೇಡ ಎಂಬ ಟೂರ್ ವೈರಾಗ್ಯ ಬಾರದ ಟೂರೇ ಇಲ್ಲ ಇದುವರೆಗೂ. ನಾಯಿಬಾಲ ನಳಿಕೆಯಲ್ಲಿದ್ದಷ್ಟೇ ಹೊತ್ತು. ಕೈಯಲ್ಲಿ ಕಾಸು, ಮಕ್ಕಳಿಗೆ ರಜೆ ಶುರುವಾಗುತ್ತಿದ್ದಂತೆ ಮತ್ತೆ ಮೊದಲ ಮಳೆಗೆ ಮೊಳೆಯುವ ಅಣಬೆಯಂತೆ ಟೂರಿನ ಕನಸೂ ಗರಿಗೆದರತೊಡಗುತ್ತದೆ.
ಬಹಳ ಆಸೆಪಟ್ಟು ಸ್ನೇಹಿತರೆÇÉಾ ಸೇರಿ ಹೊರಡುವಾಗ ಇರುವ ಉತ್ಸಾಹ ಬರುವಾಗ ಬತ್ತುತ್ತಾ ಬಂದಿರುತ್ತದೆ. ಅವರು ಹೇಳಿದ್ದಕ್ಕೆಲ್ಲ ಬಿದ್ದೂ ಬಿದ್ದು ನಗುವ ನಾವೇ ಕೊನೆ ಕೊನೆಗೆ ನಗಲೂ ತ್ರಾಣವಿಲ್ಲದಂತೆ ತೆಪ್ಪಗಿರುತ್ತೇವೆ. ಸೆಲ್ಫಿಯ ಮೋಹವೂ ಅಷ್ಟೇ ಮೊದಲೆಲ್ಲ ಎದ್ದೂ ಬಿದ್ದೂ ತೆಗೆದದ್ದು ಕೊನೆ ಕೊನೆಗೆ ಸಾಕೋ ಸಾಕೆನಿಸತೊಡಗಿ ಕ್ಯಾಮೆರಾ ಎÇÉೋ ಬ್ಯಾಗಿನ ತಳ ಸೇರಿರುತ್ತದೆ. ಮಳೆಗಾಲ ಮುಗಿಯುತ್ತಾ ಬಂದಾಗ ಹಲಸಿನ ತೊಳೆಯನ್ನು ಅಮ್ಮ ಕಾವಲಿಯಲ್ಲಿ ತುಪ್ಪಹಾಕಿ ಬೇಯಿಸಿಕೊಟ್ಟಾಗ ತಿನ್ನಲೆಷ್ಟು ರುಚಿಯೋ ಹಾಗೇ ಈ ಟೂರಿನ ನಾನಾ ಮಜಲುಗಳ ಫೋಟೋಗಳನ್ನ ಮನೆಯಲ್ಲಿ ಒಬ್ಬಳೇ ಕೂತು ಕಂಪ್ಯೂಟರ್ ಸ್ಕ್ರೀನಿನ ಮೇಲೆ ನೋಡುತ್ತಾ ಕಳೆದ ಕ್ಷಣಗಳ ಮೆಲುಕುಹಾಕುವಾಗಲೂ ಆಗುತ್ತದೆ. ಸಂಚಾರಿ ಭಾವ ಧುತ್ತೆಂದು ಜಾಗ್ರತವಾಗಿ ಮತ್ತೆಲ್ಲಿ ಮುಂದಿನ ಪಯಣ ಎಂದು ಯೋಚಿಸತೊಡಗುತ್ತೇನೆ.
ಜಯಶ್ರೀ ಭಟ್ ಸಿಂಗಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.