ಮುಂಡ್ಕೂರು ಅರದಾಳುವಿನಲ್ಲಿ ಮದ್ಯದಂಗಡಿ ಮುಚ್ಚುವಂತೆ ಗ್ರಾಮಸ್ಥರ ಆಗ್ರಹ


Team Udayavani, Jul 16, 2017, 3:00 AM IST

madyadangady.jpg

ಬೆಳ್ಮಣ್‌: ಗ್ರಾಮ ಪಂಚಾಯತ್‌ಗಳ ಇತಿಹಾಸದಲ್ಲೇ ಅತ್ಯಂತ ದೀರ್ಘ‌ವಾದ ಗ್ರಾಮಸಭೆ ಶುಕ್ರವಾರ ಮುಂಡ್ಕೂರಿನಲ್ಲಿ ನಡೆಯಿತು.

ಮುಂಡ್ಕೂರು ಗ್ರಾ.ಪಂ.ನ ಪ್ರಥಮ ಸುತ್ತಿನ ಗ್ರಾಮಸಭೆಯು ಪಂ. ಅಧ್ಯಕ್ಷೆ ಶುಭಾ ಪಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂಡ್ಕೂರು ಸಪಳಿಗರ ಭವನದಲ್ಲಿ  ಬೆಳಗ್ಗೆ 10.30ಕ್ಕೆ ಪ್ರಾರಂಭಗೊಂಡ ಸಭೆ ಮುಕ್ತಾಯಗೊಂಡದ್ದು ಸಂಜೆ 5.30ಕ್ಕೆ.

ಇಡೀ ದಿನ ಮದ್ಯದಂಗಡಿ ಬಗ್ಗೆ ಚರ್ಚೆ
ಪಂಚಾಯತ್‌ ವ್ಯಾಪ್ತಿಯ ಅರದಾಳು ಎಂಬಲ್ಲಿ ಮುಂಡ್ಕೂರು ಪೇಟೆಯಿಂದ ಸ್ಥಳಾಂತರಗೊಂಡ ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮ ಪಂಚಾಯತ್‌ ಪರವಾನಿಗೆ ನೀಡಿದ ಬಗ್ಗೆ  ಅರದಾಳುವಿನ ಗ್ರಾಮಸ್ಥರು ಬಾರೀ ಅಕ್ರೋಶ ವ್ಯಕ್ತಪಡಿಸಿ ಬಳಿ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆಯ ಆಧಿಕಾರಿಗಳು ಮದ್ಯದಂಗಡಿ ಮಾಲಕರನ್ನು ಸ್ಥಳಕ್ಕೆ ಕರೆಯಿಸಿ ಭಾಗಶಃ ಸಮಸ್ಯೆ ಪರಿಹರಿಸಿದರು. ಮಾಲಕರು ಅತೀ ಶೀಘ್ರ ಮದ್ಯದಂಗಡಿಯನ್ನು ಬೇರೆ ಕಡೆ ಸ್ಥಳಾಂತರಿಸುವುದಾಗಿ ತಿಳಿಸಿದ ಬಳಿಕ ಗ್ರಾಮಸ್ಥರು ಶಾಂತರಾಗಿ ತೆರಳಿದರು.

ಡೋರ್‌ ನಂಬ್ರ ಕೊಟ್ಟ ಬಗ್ಗೆ ಆಕ್ಷೇಪ
ಅರದಾಳುವಿನ ಎಸ್‌ಟಿ ಕಾಲನಿಯ ಸಮೀಪ ಮದ್ಯದಂಗಡಿಯನ್ನು ತೆರೆಯದಂತೆ ಅರದಾಳು ಗ್ರಾಮಸ್ಥರು ಅಕ್ಷೇಪ ಸಲ್ಲಿಸಿದ್ದರೂ ಡೋರ್‌ ನಂಬ್ರ  ನೀಡಿದ್ದ ಪಂಚಾಯತ್‌ ವಿರುದ್ಧ ವಾಗ್ಧಾಳಿ ನಡೆಯಿತು. ಪಂಚಾಯತ್‌ ಮದ್ಯದಂಗಡಿಗೆ ಕೊಟ್ಟ ಕಟ್ಟಡ ಪರವಾನಿಗೆ ಹಾಗೂ ಡೋರ್‌ ನಂಬರ‌ನ್ನು ರದ್ದುಗೊಳಿಸಿ ಅಂಗಡಿಯನ್ನು ತೆರವುಗೊಳಿಸಬೇಕು  ಇಲ್ಲದಿದ್ದರೆ ಪಂಚಾಯತ್‌ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮಹಿಳೆಯರ ಆಕ್ರೋಶ
ಎಸ್‌ಟಿ ಕಾಲನಿ ಹಾಗೂ ಜನತಾ ಕಾಲನಿಯ  ನೂರಾರು  ಮಹಿಳೆಯರು  ಆಕ್ರೋಶಿತರಾಗಿ  ನಮಗೆ ರಸ್ತೆಯಲ್ಲಿ ನಡೆಯುವಂತಿಲ್ಲ. ಹೆಣ್ಣು ಮಕ್ಕಳ ಮುಂದೆ ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಮನೆ ಮುಂದೆ ಮದ್ಯದ ಬಾಟಲಿಗಳನ್ನು ಬಿಸಾಡುತ್ತಾರೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು  ಸಭೆಯಲ್ಲಿ ತೋಡಿಕೊಂಡರು .

ಪಂಚಾಯತ್‌ ಮದ್ಯದಂಗಡಿಗೆ ಪರವಾನಿಗೆ ನೀಡಿಲ್ಲ
ಪಂಚಾಯತ್‌ ಅಭಿವೃದ್ಧಿ ಅ ಧಿಕಾರಿ ರಮೇಶ್‌  ಹಾಗೂ ಅಧ್ಯಕ್ಷೆ  ಶುಭಾ ಪಿ. ಶೆಟ್ಟಿ  ಉತ್ತರಿಸಿ, ಪಂಚಾಯತ್‌ನಿಂದ ಮದ್ಯದಂಗಡಿಗೆ ಪರವಾನಿಗೆ ನೀಡಿಲ್ಲ, ಪಂಚಾಯತ್‌ನಿಂದ ನೀಡಿದ  ಎಲ್ಲ ಪರವಾನಿಗೆಗಳನ್ನು  ರದ್ದುಗೊಳಿಸಿ ಅಂಗಡಿಯನ್ನು ತೆರವುಗೊಳಿಸುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

ಸ್ಥಳಕ್ಕೆ ಪೊಲೀಸ್‌ ಹಾಗೂ ಅಬಕಾರಿ ಅಧಿಕಾರಿಗಳು
ಜನರ ಆಕ್ರೋಶಕ್ಕೆ ಮಣಿದು  ಕಾರ್ಕಳ ಗ್ರಾಮಾಂ ತರ ಠಾಣೆಯ ಅಧಿಕಾರಿ ಪುರುಷೋತ್ತಮ, ನಗರ ಠಾಣಾಧಿಕಾರಿ ರವಿ, ಅಬಕಾರಿ ಆಧಿಕಾರಿ ಸುಧೀರ್‌ ಕುಮಾರ್‌ ಸ್ಥಳಕ್ಕಾಗಮಿಸಿ, ಪಂಚಾಯತ್‌ ಅಧ್ಯಕ್ಷೆ ಶುಭಾ ಪಿ. ಶೆಟ್ಟಿ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್‌ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಕಾರ್ಕಳ ತಾಲೂಕು ಪಂಚಾಯತ್‌ ಉಪಾಧ್ಯಕ್ಷ ಗೋಪಾಲ ಮೂಲ್ಯ, ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಅರದಾಳು ವಾರ್ಡ್‌ನ ಸದಸ್ಯ ರಘುವೀರ ಶೆಣೈ  ಮತ್ತಿತರರಿದ್ದು ಮದ್ಯದಂಗಡಿ ಮಾಲಕ ವಾದಿರಾಜ ಶೆಟ್ಟರನ್ನೂ ಕರೆಯಿಸಿ ಮನವೊಲಿಸಿದರು.

ಶೀಘ್ರ ಸ್ಥಳಾಂತರದ ಭರವಸೆ
ಜನರ ತೊಂದರೆಗಳ ಬಗ್ಗೆ  ಮನವರಿಕೆಯಾದ ಬಳಿಕ ಮದ್ಯದಂಗಡಿ ಮಾಲಕ ವಾದಿರಾಜ ಶೆಟ್ಟಿಯವರು ಈ ಹಿಂದೆಯೇ 3 ತಿಂಗಳ ಅವಧಿಗೆ ಈ ಮದ್ಯದಂಗಡಿಯನ್ನು ಪ್ರಾರಂಭಿಸಿದ್ದು ಈಗಾಗಲೇ ಬೇರೆ ಕಡೆ ಸ್ಥಳ ನೋಡಲಾಗಿದೆ. ಪಂಚಾಯತ್‌ನ ಸಹಕಾರದಲ್ಲಿ ಮುಂದೆ ಆ ಸ್ಥಳಕ್ಕೆ ಸ್ಥಳಾಂತರಿಸುವುದಾಗಿ ತಿಳಿಸಿದರು.

ಈ ಎಲ್ಲ ವಿದ್ಯಮಾನಗಳ ಬಳಿಕ ಅರದಾಳು ಗ್ರಾಮಸ್ಥರು, ಜನಪ್ರತಿನಿಧಿಗಳು ತೆರಳಿದರು. ಒಟ್ಟಾರೆಯಾಗಿ ಮದ್ಯದಂಗಡಿ ವಿವಾದ ಇಡೀ ದಿನದ ಗ್ರಾಮ ಸಭೆಯನ್ನು ನುಂಗಿತ್ತು.

ಉಳಿದಂತೆ ಚರ್ಚಿತ ವಿಷಯಗಳು
ಎಂದಿನಂತೆ ವಿವಿಧ ಇಲಾಖೆಗಳ ಮಾಹಿತಿಗಳನ್ನು ನೀಡಲಾಗಿ ಸಂಕಲಕರಿಯ ಪ್ರಗತಿಪರ ಕೃಷಿಕ ಭಾಸ್ಕರ ಶೆಟ್ಟಿ ಅವರು ತನ್ನ ಮನೆ ಪಕ್ಕದಲ್ಲಿ ವಿದ್ಯುತ್‌ತಂತಿಗಳು  ಅಪಾಯಕಾರಿ ಸ್ಥಿತಿಯಲ್ಲಿ ಇದ್ದು, ತುಂಡಾಗಿ ಬಿದ್ದರೆ ಪ್ರಾಣಕ್ಕೆ ಅಪಾಯವಿದೆ ಎಂದು ಮೆಸ್ಕಾಂ ಅಧಿ ಕಾರಿಗಳಲ್ಲಿ ದೂರಿದಾಗ ಸ್ಪಂದಿಸಿದ ಬೆಳ್ಮಣ್‌ ವಲಯದ ಎಸ್‌ಒ ಪ್ರದೀಪ್‌ ಅವರು  ಅದನ್ನು ಸರಿಪಡಿಸುವ ಭರವಸೆ ನೀಡಿದರು.

ಸತ್ಯೇಂದ್ರ ಸಾಲ್ಯಾನ್‌ ನೋಡೆಲ್‌ ಅಧಿಕಾರಿಯಾಗಿದ್ದು, ಪಶು ಇಲಾಖೆಯ ನರಸಿಂಹ, ಆರೋಗ್ಯ ಇಲಾಖೆಯ ನಿರ್ಮಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೌಭಾಗ್ಯಾ, ತೋಟಗಾರಿಕೆಯ ಆನಂದ್‌, ಗ್ರಾಮಕರಣಿಕ ಸುಕೇಶ್‌, ಸಚ್ಚೇರಿಪೇಟೆ ಕೆನರಾ ಬ್ಯಾಂಕ್‌ನ ಪ್ರಬಂಧಕಿ ಮೀನಾ ನಾಯಕ್‌ ಮಾಹಿತಿ ನೀಡಿದರು. ಜೋಸೆಫ್‌, ಅವಿಲ್‌ ಡಿ’ಸೋಜಾ, ನಿತ್ಯಾನಂದ ಪೂಂಜಾ, ಪ್ರಭಾಕರ ಶೆಟ್ಟಿ, ಉದಯ ಪೂಜಾರಿ ಗ್ರಾಮಸ್ಥರ ಪರವಾಗಿ ಪ್ರಶ್ನಿಸಿದರು.

ಟಾಪ್ ನ್ಯೂಸ್

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.